ಆ್ಯಪ್ನಗರ

ಗವಿ ಮಠದ ಆವರಣ ಸ್ವಚ್ಛಗೊಳಿಸಿದ ಕೊಪ್ಪಳ ಎಸ್‌ಪಿ ಜಿ. ಸಂಗೀತಾ

ಗವಿ ಸಿದ್ಧೇಶ್ವರ ಜಾತ್ರೆಯ ಬಳಿಕ ಗವಿ ಮಠದ ಆವರಣ ಸ್ವಚ್ಛಗೊಳಿಸಲು ಥೇಟ್‌ ಪೌರ ಕಾರ್ಮಿಕರಂತೆ ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ ತೆರಳಿದ್ದರು. ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು ಸೇರಿಹಲವರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

Vijaya Karnataka Web 17 Jan 2020, 11:46 am
ಕೊಪ್ಪಳ: ನಗರದ ಗವಿಮಠದ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಥೇಟ್ ಪೌರ ಕಾರ್ಮಿಕರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರ ನೇತೃತ್ವದಲ್ಲಿ ಮಠದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
Vijaya Karnataka Web koppal sp cleanliness


ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರು ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಕಿದ್ದರು. ಅವುಗಳನ್ನೆಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛಗೊಳಿಸಿದರು. ಎಸ್‌ಪಿ ಜಿ. ಸಂಗೀತಾ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಬಳಿಕ ಪೌರ ಕಾರ್ಮಿಕರ ಜತೆಗೆ ಪೊಲೀಸ್‌ ಅಧಿಕಾರಿಗಳು ಚರ್ಚಿಸಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗದ ರೇಂಜರ್ಸ್‌, ರೋವರ್ಸ್‌ ವಿಭಾಗದಿಂದ ಜಾತ್ರೆ ಮುಗಿಯುವವರೆಗೆ ಅಂದಾಜು 200 ಕ್ಕಿಂತಲೂ ಹೆಚ್ಚೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮೂರು ದಿನಗಳಿಂದ ಜಾತ್ರಾ ಆವರಣ, ತೇರುಬೀದಿ, ಮಠದ ಆವರಣ, ಕೈಲಾಸ ಮಂಟಪ ಸ್ವಚ್ಛಗೊಳಿಸಿದ್ದರು.

ಮೂರು ದಿನಗಳ ಕಾಲ ಕೊಪ್ಪಳದಲ್ಲಿ ಶ್ರೀ ಗವಿ ಸಿದ್ಧೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆದಿತ್ತು. ಈ ವೇಳೆ ತ್ಯಾಜ್ಯ ಹೆಚ್ಚಾಗಿದ್ದರಂದ ಜಾತ್ರೆ ಮುಗಿದ ಬಳಿಕ ಪೊಲೀಸ್‌ ಸಿಬ್ಬಂದಿ ಸೇರಿ ಹಲವರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ