ಆ್ಯಪ್ನಗರ

'ವೈಫಲ್ಯ ಮರೆ ಮಾಚಲು ದಿಕ್ಕು ತಪ್ಪಿಸುವ ಕೆಲಸ': ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮತ್ತೆ ಖಾದರ್ ಕಿಡಿ

ಪ್ರತಿಭಟನೆ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ವ್ಯಾಪಕವಾಗಿದೆ. ಪ್ರತಿಭಟನಾಕಾರರ ಸಮಸ್ಯೆಗಳನ್ನು ಕೇಳದೆ ಅವರ ಹೋರಾಟವನ್ನು ಹತ್ತಿಕ್ಕುವ ಯತ್ನವನ್ನು ಕೇಂದ್ರ ಸರಕಾರ ನಡೆಸಿದೆ ಎಂದು ಖಾದರ್ ಟೀಕಿಸಿದರು.

Vijaya Karnataka Web 19 Dec 2019, 8:54 pm
ಕುಷ್ಟಗಿ (ಕೊಪ್ಪಳ): ಕೇಂದ್ರ ಸರಕಾರ ತನ್ನ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಷಯಗಳನ್ನು ಹರಿಬಿಟ್ಟು ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್‌ ಕಿಡಿಕಾರಿದ್ದಾರೆ. ಕುಷ್ಟಗಿ ನಗರದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web ವೈಫಲ್ಯ ಮರೆ ಮಾಚಲು ದಿಕ್ಕು ತಪ್ಪಿಸುವ ಕೆಲಸ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮತ್ತೆ ಖಾದರ್ ಕಿಡಿ


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ವ್ಯಾಪಕವಾಗಿದೆ. ಪ್ರತಿಭಟನಾಕಾರರ ಸಮಸ್ಯೆಗಳನ್ನು ಕೇಳದೆ ಅವರ ಹೋರಾಟವನ್ನು ಹತ್ತಿಕ್ಕುವ ಯತ್ನವನ್ನು ಕೇಂದ್ರ ಸರಕಾರ ನಡೆಸಿದೆ ಎಂದು ಖಾದರ್ ಟೀಕಿಸಿದರು.

ನನ್ನ ಹೇಳಿಕೆ ತಿರುಚಲಾಗಿದೆ: ಪೌರತ್ವ ತಿದ್ದುಪಡಿ ವಿಧೇಯಕ ಇನ್ನೂ ಕಾಯಿದೆಯಾಗಿ ಅಂಗೀಕಾರಗೊಂಡಿಲ್ಲ, ರಾಜ್ಯದ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಚಾಚೂತಪ್ಪದೇ ಅನುಷ್ಠಾನಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ದೇಶದ ಬೇರೆ ಭಾಗದಲ್ಲಿ ನಡೆದಿರುವ ಹೋರಾಟ ರಾಜ್ಯದಲ್ಲೂ ಆರಂಭವಾಗಿ ರಾಜ್ಯವೇ ಹೊತ್ತಿ ಉರಿಯಬಹುದು. ಈ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ತಿರುಚಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಜನರಿಗೆ ಧೈರ್ಯ ನೀಡುವ ಬದಲು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜನರಲ್ಲಿ ಮತ್ತಷ್ಟು ಭಯ ಮೂಡುವಂತೆ ಮಾಡಿರುವುದು ಖಂಡನೀಯ ಎಂದು ಖಾದರ್ ಹೇಳಿದರು.

ರಾಜ್ಯ ಸರಕಾರ ಅಲ್ಪಸಂಖ್ಯಾತರ ಬೆಂಬಲಕ್ಕಿದೆ: ಯಡಿಯೂರಪ್ಪ ಭರವಸೆ

ಜೈಲಿಗೆ ಹೋಗಲು ಸಿದ್ಧ: ಪಾಕಿಸ್ತಾನದ ಹೆಸರು ಎತ್ತದಿದ್ದರೆ ಬಿಜೆಪಿಗೆ ಮತ ಸಿಗೋದಿಲ್ಲ ಎಂಬುದು ಬಿಜೆಪಿ ಖಚಿತವಾಗಿದೆ. ಹೀಗಾಗಿ ಮೇಲಿಂದ ಮೇಲೆ ಪಾಕಿಸ್ತಾನದ ಹೆಸರನ್ನು ಎತ್ತುತ್ತಿದ್ದಾರೆ. ಸಿ.ಟಿ.ರವಿ ಅವರ ಪ್ರತಿಕ್ರಿಯೆಗೆ ಉತ್ತರಿಸುವುದಿಲ್ಲ. ಪ್ರಮೋದ ಮುತಾಲಿಕ್‌ ಅವರು ಯು.ಟಿ.ಖಾದರ್‌ ರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ದೇಶಕ್ಕಾಗಿ ನಾನು ಜೈಲಿಗೆ ಅಷ್ಟೇ ಏಕೆ, ನೇಣುಗಂಬ ಏರಲೂ ಸಿದ್ಧ. ಬಿಜೆಪಿಯವರು ಒಂದು ಸಮುದಾಯವನ್ನು ಗುರಿಯಾಗಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡಿದೆ ಎಂದು ಖಾದರ್ ಹೇಳಿದರು.

CAA Protest Live: ಹಿಂಸಾಚಾರಕ್ಕೆ ತಿರುಗಿದ ಪೌರತ್ವ ಪ್ರತಿಭಟನೆ : ರಾಜ್ಯಾದ್ಯಂತ ಬಿಗುವಿನ ವಾತಾರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ