ಆ್ಯಪ್ನಗರ

‘ಯೋಗದಿಂದ ಮಾನಸಿಕ, ದೈಹಿಕ ಸದೃಢತೆ’

ದ್ಯಾನ ಹಾಗೂ ಯೋಗಾಸನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Vijaya Karnataka 13 Jun 2018, 5:00 am
ಕೊಪ್ಪಳ : ದ್ಯಾನ ಹಾಗೂ ಯೋಗಾಸನದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
Vijaya Karnataka Web KPL-KPL12MGB01


ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಗತ್ತೇ ಒಂದು ಕುಟುಂಬ ಎನ್ನುವ ತತ್ತ್ವದಡಿ ಸೇವೆ ಮಾಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ. ಮನಸ್ಸು ಏರುಪೇರು ಆದಾಗ ಶಾರೀರಿಕವಾಗಿ ನಾವು ತೊಂದರೆಗೀಡಾಗುತ್ತೇವೆ. ಆರೋಗ್ಯವಂತರಾಗಿರಬೇಕಾದರೆ ಧ್ಯಾನ ಬಹಳ ಅವಶ್ಯಕವಿದೆ. ಮನಸ್ಸಿನ ಆರೋಗ್ಯ ಅಷ್ಟೇ ಮುಖ್ಯವಾಗಿದೆ. ಮನಸ್ಸು ಆರೋಗ್ಯವಾಗಿರಬೇಕಾದರೆ ಅಧ್ಯಾತ್ಮ ಜ್ಞಾನ ಒಳ್ಳೆಯ ಚಿಂತನೆಗಳು ಮುಖ್ಯವಾಗಿವೆ. ನಾವು ಏನು ನೋಡುತ್ತಿದ್ದೇವೋ ಇದೇನು ಶಾಶ್ವತವಲ್ಲ, ಧ್ಯಾನ ಒಂದು ಅದ್ಭುತವಾದ ಶಕ್ತಿ ಅದರಲ್ಲಿ ನಾವು ತಲ್ಲೀನರಾದಾಗ ಮನಸ್ಸಿನ ಗೊಂದಲ ದೂರವಾಗುತ್ತವೆ ಎಂದರು.

ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಾತನಾಡಿ, ಯೋಗಾಸನ ಶರೀರದ ಆರೋಗ್ಯವನ್ನು ಸದೃಢ ಮಾಡುತ್ತದೆ. ಧ್ಯಾನ ಮನಸ್ಸಿನ ಆರೋಗ್ಯವನ್ನು ಸದೃಢ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತನಾಗಲು ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮ ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎಂದರು. ಶ್ರೀಗವಿಸಿದ್ಧೇಶ್ವರ ಕಾಲೇಜಿನ ಪ್ರೊ.ಬಾಚಲಾಪೂರ, ನಿವೃತ್ತ ಎಂಜಿನಿಯರ್‌ ಬಾಲಚಂದ್ರ, ಯೋಗ ಗುರುಗಳಾದ ಹನುಮಂತಪ್ಪ ಗೊಂದಿ, ಮಲ್ಲಿಕಾರ್ಜುನ ಕೋಣೆ ಸೇರಿದಂತೆ ಇನ್ನಿತರರಿದ್ದರು. ಜೂ.30 ವರೆಗೆ ಯೋಗ ಶಿಬಿರ ನಡೆಯಲಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ