ಆ್ಯಪ್ನಗರ

ಲಾಕ್‌ಡೌನ್‌ ಸಡಿಲಿಕೆ: ಮತ್ತೆ ಬೆಂಗಳೂರಿನತ್ತ ಕಾರ್ಮಿಕರ ಚಿತ್ತ

​​ಮಂಗಳವಾರ ಒಂದೇ ದಿನ 60ಕ್ಕೂ ಹೆಚ್ಚು ಜನರು ಸೇವಾಸಿಂಧುವಿನಲ್ಲಿ ದಾಖಲಿಸಿಕೊಂಡಿದ್ದಾರೆ. ಏಕಕಾಲಕ್ಕೆ ಎರಡು ಬಸ್‌ ಬಿಡಲು ಅವಕಾಶ ಇಲ್ಲದ್ದಕ್ಕೆ ಬೆಂಗಳೂರಿಗೆ ತೆರಳಬೇಕಿದ್ದ ಕೂಲಿ ಕಾರ್ಮಿಕರು ಮಂಗಳವಾರ ಸಂಜೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

Vijaya Karnataka Web 27 May 2020, 11:28 pm
ಕುಷ್ಟಗಿ (ಕೊಪ್ಪಳ): ಲಾಕ್‌ಡೌನ್‌ ಹಾಗೂ ಅದಕ್ಕಿಂತ ಮೊದಲು ತಾಲೂಕಿಗೆ ಮರಳಿದ್ದ ಕೂಲಿಕಾರ್ಮಿಕರು ಇದೀಗ ಬೆಂಗಳೂರಿಗೆ ಹೋಗಲು ಮುಂದಾಗಿದ್ದು, ಸಾರಿಗೆ ಬಸ್‌ ಸಮಸ್ಯೆ ಎದುರಾಗಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಸದ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿಕುಷ್ಟಗಿಯಿಂದ ಬೆಂಗಳೂರಿಗೆ ಒಂದು ಬಸ್‌ ಬಿಡಲಾಗುತ್ತಿದೆ. ಬಸ್‌ನಲ್ಲಿ ಬೆಂಗಳೂರಿಗೆ ತೆರಳಲು ಸೇವಾಸಿಂಧು ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಿ ಪಾಸ್‌ ಪಡೆಯಬೇಕು. ಒಂದು ಬಸ್‌ನಲ್ಲಿ 30 ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿದೆ.

ಮಂಗಳವಾರ ಒಂದೇ ದಿನ 60ಕ್ಕೂ ಹೆಚ್ಚು ಜನರು ಸೇವಾಸಿಂಧುವಿನಲ್ಲಿ ದಾಖಲಿಸಿಕೊಂಡಿದ್ದಾರೆ. ಏಕಕಾಲಕ್ಕೆ ಎರಡು ಬಸ್‌ ಬಿಡಲು ಅವಕಾಶ ಇಲ್ಲದ್ದಕ್ಕೆ ಬೆಂಗಳೂರಿಗೆ ತೆರಳಬೇಕಿದ್ದ ಕೂಲಿ ಕಾರ್ಮಿಕರು ಮಂಗಳವಾರ ಸಂಜೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಲಾಕ್‌ಡೌನ್‌ ಸಡಿಲಿಕೆಯಾಗಿ ಬೆಂಗಳೂರಿನಲ್ಲಿ ಕಟ್ಟಡ ಕಾಮಗಾರಿಗಳು ಆರಂಭವಾಗಿದ್ದು, ಕೂಲಿಕಾರರಿಗೆ ಬೇಡಿಕೆ ಹೆಚ್ಚಿದೆ. ತಾಲೂಕಿನ ನಾನಾ ಗ್ರಾಮಗಳ ಕೂಲಿಕಾರರು ಬೆಂಗಳೂರಿಗೆ ತೆರಳಲು ಪರದಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಘಟಕದ ಎಟಿಎಸ್‌ ನಾಗಪ್ಪ, ''ಏಕಕಾಲಕ್ಕೆ ಹೆಚ್ಚು ಪ್ರಯಾಣಿಕರು ಬಂದರೆ ಹೊಂದಾಣಿಕೆ ಮಾಡುವುದು ಕಷ್ಟ. 30 ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶವಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ