ಆ್ಯಪ್ನಗರ

ಸಿದ್ದರಾಮಯ್ಯ ಸರಕಾರ ರೈತರ ನೆರವಿಗೆ ಬರುತ್ತಿಲ್ಲ: ಸಚಿವ ಜಾವಡೇಕರ್‌

ಕಾಂಗ್ರೆಸ್‌ ರೈತ ವಿರೋಧಿ ಸರಕಾರವಾಗಿದ್ದು, ಸಿಎಂ ಸಿದ್ದರಾಮಯ್ಯ ಸರಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಆರೋಪಿಸಿದರು.

Vijaya Karnataka Web 24 Mar 2018, 2:53 pm
ಕೊಪ್ಪಳ: ಕಾಂಗ್ರೆಸ್‌ ರೈತ ವಿರೋಧಿ ಸರಕಾರವಾಗಿದ್ದು, ಸಿಎಂ ಸಿದ್ದರಾಮಯ್ಯ ಸರಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಆರೋಪಿಸಿದರು.
Vijaya Karnataka Web minister javadekar hits out siddaramaiah govt
ಸಿದ್ದರಾಮಯ್ಯ ಸರಕಾರ ರೈತರ ನೆರವಿಗೆ ಬರುತ್ತಿಲ್ಲ: ಸಚಿವ ಜಾವಡೇಕರ್‌


ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫಸಲ್ ಭೀಮಾ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯಿಂದ ರೈತರಿಗೆ ಸಹಾಯವಾಗಿದೆ. ಫಸಲ್ ಭೀಮಾ‌ ಎಂಟು ಸಾವಿರ ಕೋಟಿ ರೂ. ರೈತರಿಗೆ ನೀಡಿದೆ. ದೇಶದ ಬಹುತೇಕ ಎಲ್ಲ ಕಡೆಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಲಿದೆ.
ಅನ್ನ ಭಾಗ್ಯ ಯೋಜನೆ ಸಿದ್ದರಾಮಯ್ಯ ಅವರದಲ್ಲ, ಅದು ಮೋದಿ ಅನ್ನಭಾಗ್ಯ ಯೋಜನೆ. ಅದಕ್ಕೆ ಕೇಂದ್ರ ಸರಕಾರ ಕೂಡ ಅನುದಾನ ನೀಡುತ್ತದೆ. ರಾಜ್ಯ ಸರಕಾರ ಮೂರು ರೂಪಾಯಿ, ಕೇಂದ್ರ 17 ರೂ . ನೀಡುತ್ತದೆ ಎಂದು ಜಾವಡೇಕರ್‌ ಹೇಳಿದರು.

ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಸಮಾಜ ಕೂಡಿಸುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ವೀರಶೈವ - ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ನಾವು ಜೋಡಿಸುವ ಕೆಲಸ ಮಾಡುತ್ತೇವೆ. ಇದು ಕಾಂಗ್ರೆಸ್ ಗೆ ಮಾರಕವಾಗಲಿದೆ. ರಾಜ್ಯ ಗೂಂಡಾ ರಾಜ್ಯವಾಗಿದೆ, ಕಾಂಗ್ರೆಸ್ ಎಂಎಲ್ಎ ಬೆಂಬಲಿಗರಿಂದ ಜನರ ಮೇಲೆ, ಅಧಿಕಾರಿಗಳ‌ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ