ಆ್ಯಪ್ನಗರ

ಅಳವಂಡಿ ಸಿದ್ದೇಶ್ವರ ಮಠದ ಸಿದ್ಧಲಿಂಗ ಶಿವಾಚಾರ್ಯರಿಂದ 'ಬಲವಂತ'ದ ಪೀಠ ತ್ಯಾಗ

ತಾವು 7ನೇ ತರಗತಿ ಕಲಿಯುವಾಗಲೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಲಾಯಿತು. ಎಂ.ಎಂ ಮುಗಿಸಿ ಬಂದ ಮೇಲೆ ಮಠದ ಅಭಿವೃದ್ಧಿಗೆ ಪಣ ತೊಡಲಾಯಿತು. ಆದರೆ ಕಮಿಟಿಯವರು ಅಭಿವೃದ್ಧಿ ಕೈಗೊಳ್ಳಲು ಬಿಡದೇ ಎಲ್ಲದಕ್ಕೂ ಅಡ್ಡಗಾಲು ಹಾಕಿದರು. ಒಂದುವರೆ ವರ್ಷದ ಹಿಂದೆ ಕಮಿಟಿ ಹಾಗೂ ಭಕ್ತರ ಸಭೆ ಕರೆದಾಗ ಕಮಿಟಿಯ ಒಬ್ಬ ಸದಸ್ಯರೂ ಆಗಮಿಸಲಿಲ್ಲ ಎಂದು ಸಿದ್ಧಲಿಂಗ ಶಿವಾಚಾರ್ಯರು ಆರೋಪಿಸಿದರು.

Vijaya Karnataka Web 18 May 2019, 1:54 pm
ಕೊಪ್ಪಳ: ಕೊಪ್ಪಳ ತಾಲೂಕಿನ ಅಳವಂಡಿ ಶ್ರೀ ಸಿದ್ಧೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರು 'ಬಲವಂತ'ದಿಂದ ಪೀಠ ತ್ಯಾಗ ಮಾಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಮಠದ ಆಡಳಿತ ಸಮಿತಿ ಪ್ರತಿ ದಿನ ಆಸ್ತಿಗಾಗಿ ಕಿರುಕುಳ ನೀಡುತ್ತಿತ್ತು. ಕಮಿಟಿಯಲ್ಲಿ ಭಕ್ತರು ಇಲ್ಲ. ಎಲ್ಲರೂ ಸಂಬಂಧಿಕರಾಗಿದ್ದಾರೆ ಎಂದು ಅವರು ಆರೋಪಿಸಿದರು.

ತಾವು 7ನೇ ತರಗತಿ ಕಲಿಯುವಾಗಲೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಲಾಯಿತು. ಎಂ.ಎಂ ಮುಗಿಸಿ ಬಂದ ಮೇಲೆ ಮಠದ ಅಭಿವೃದ್ಧಿಗೆ ಪಣ ತೊಡಲಾಯಿತು. ಆದರೆ ಕಮಿಟಿಯವರು ಅಭಿವೃದ್ಧಿ ಕೈಗೊಳ್ಳಲು ಬಿಡದೇ ಎಲ್ಲದಕ್ಕೂ ಅಡ್ಡಗಾಲು ಹಾಕಿದರು. ಒಂದುವರೆ ವರ್ಷದ ಹಿಂದೆ ಕಮಿಟಿ ಹಾಗೂ ಭಕ್ತರ ಸಭೆ ಕರೆದಾಗ ಕಮಿಟಿಯ ಒಬ್ಬ ಸದಸ್ಯರೂ ಆಗಮಿಸಲಿಲ್ಲ ಎಂದು ಸಿದ್ಧಲಿಂಗ ಶಿವಾಚಾರ್ಯರು ಆರೋಪಿಸಿದರು.

ಒತ್ತಾಯದಿಂದ ಪೀಠ ತ್ಯಾಗಕ್ಕೆ ರಾಜೀನಾಮೆ ಬರೆಸಿಕೊಂಡಿದ್ದಾರೆ. ಕಾಲೇಜಿಗೆ ಅತಿಥಿ ಉಪನ್ಯಾಸಕನಾಗಿ ತೆರಳಿದ ವೇಳೆ ಶಿವಮೊಗ್ಗ ಮೂಲದ ಯುವತಿಯೊಬ್ಬಳು ತಮ್ಮನ್ನು ಪ್ರೀತಿಸುತ್ತಿದ್ದಳು. ಆದರೆ ಇದನ್ನೆಲ್ಲ ಗಮನಿಸಿರಲಿಲ್ಲ.‌ ಪ್ರೀತಿಸುವಂತೆ ದುಂಬಾಲು ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಳಂತೆ ಎಂದು ಶಿವಾಚಾರ್ಯರು ತಿಳಿಸಿದರು.


'ಕಮಿಟಿಯವರು ಈ ಸಮಸ್ಯೆ ಬಗೆಹರಿಸುವಂತೆ ನನ್ನನ್ನು ಕರೆದೊಯ್ದಿದ್ದರು. ನಂತರ ಆಕೆಯನ್ನು ಕರೆದುಕೊಂಡು ಬಂದು ತಮ್ಮಲ್ಲಿಟ್ಟುಕೊಂಡಿದ್ದರು. ಅಳವಂಡಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ‌ನಾವು ಸರಿ ಮಾಡುತ್ತೇವೆ ಎಂದು ರಾಜೀನಾಮೆ‌ ನೀಡುವಂತೆ ಪತ್ರದ‌ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಭಕ್ತರ ಗಮನಕ್ಕೆ ತಂದ ಮೇಲೆ ಎಲ್ಲರಿಗೂ ವಿಷಯ ತಿಳಿಸುತ್ತೇನೆ ಎಂದರೂ ಬಿಡಲಿಲ್ಲ. ನಂತರ ಸ್ವಾಮೀಜಿ ಪ್ರೀತಿಸಿದ ಹುಡುಗಿ ಜತೆಗೆ ಹೋಗಿದ್ದಾರೆ ಎಂದು ವದಂತಿ ಹಬ್ಬಿಸಿದರು' ಎಂದು ಸಿದ್ದಲಿಂಗ ಶಿವಾಚಾರ್ಯರು ತಿಳಿಸಿದರು.

'ಆದರೆ ಈವರೆಗೆ ಮೈಸೂರಿನಲ್ಲಿ ಇಬ್ಬರು ಒಟ್ಟಿಗೆ ಇದ್ದೇವೆ. ಇನ್ನೂ‌ ಮದುವೆ ಆಗಿಲ್ಲ. ಗ್ರಾಮಸ್ಥರ ಒತ್ತಾಯದ ಮೇರೆಗೆ ಇಲ್ಲಿಗೆ ಸತ್ಯ ಬಹಿರಂಗಪಡಿಸುತ್ತಿದ್ದೇನೆ. ಸಿದ್ದೇಶ್ವರ ಮಠ ಸನ್ಯಾಸ ಮಠ ಆಗಿರುವುದರಿಂದ ನೀವೇ ಮುಂದುವರಿಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಉಜ್ಜಯಿನಿ ಶ್ರೀಗಳ ಬಳಿಗೆ ನಿಯೋಗ ಒಯ್ದು ಅವರ ಅಭಿಪ್ರಾಯ ಕೇಳಲಾಗುವುದು. ಶ್ರೀಗಳು ಮುಂದುವರೆಯುವಂತೆ ಆದೇಶಿಸಿದರೆ ಮುಂದುವರೆಯಲಾಗುವುದು. ಇಲ್ಲದಿದ್ದರೆ ರಾಜೀನಾಮೆ‌ ಉಜ್ಜಯಿನಿ ಶ್ರೀ ಗಳಿಗೆ ಸಲ್ಲಿಸಲಾಗುವುದು' ಎಂದರು.

ಈ ಕುರಿತು ಕಮಿಟಿ ಸದಸ್ಯರನ್ನು ಸಂಪರ್ಕಿಸಿದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ