ಆ್ಯಪ್ನಗರ

ಕೊಪ್ಪಳ: ಮಾಸ್ಕ್‌ ಧರಿಸದ ಸಾರ್ವಜನಿಕರಿಗೆ ಫೈನ್‌; ದಂಡ ಕಟ್ಟದಿದ್ದರೆ ಕ್ವಾರಂಟೈನ್‌ ಕೇಂದ್ರಕ್ಕೆ ರವಾನೆ

ಒಂದು ವೇಳೆ ದಂಡ ಕಟ್ಟಲು ಒಪ್ಪದಿದ್ದರೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುವುದು. ಕ್ವಾರಂಟೈನ್ ಕೇಂದ್ರಕ್ಕೆ ತೆರಳಲು ಮುಂದೆ ಬಾರದಿದ್ದರೆ ಅಂಥವರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಎಚ್ಚರಿಕೆ ನೀಡಿದರು.

Vijaya Karnataka Web 14 Sep 2020, 4:18 pm
ಕೊಪ್ಪಳ: ಕೋವಿಡ್-19 ಸೋಂಕು ತಡೆಗಟ್ಟಲು ಮಾಸ್ಕ್ ಹಾಕದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ನಗರದಲ್ಲಿ ಸಂಚರಿಸಿ ದಂಡ ವಿಧಿಸಿದರು.
Vijaya Karnataka Web ಮಾಸ್ಕ್‌
ಮಾಸ್ಕ್‌


ನಗರದ ಅಶೋಕ ವೃತ್ತದಿಂದ ಆರಂಭವಾದ ದಂಡ ವಸೂಲ ಪ್ರಕ್ರಿಯೆ, ಬೈಕ್‍ನಲ್ಲಿ ಸಂಚರಿಸುವ ಸವಾರರಿಗೆ, ಕಾಲ್ನಡಿಗೆಯಲ್ಲಿ ತೆರಳುವವರು, ನಾಲ್ಕು ಚಕ್ರವಾಹನದಲ್ಲಿ ತೆರಳುವರನ್ನು ತಡೆದು ದಂಡ ವಿಧಿಸಲಾಯಿತು.

ಹೋಟೆಲ್ ಹಾಗೂ ನಾನಾ ಅಂಗಡಿಗಳಿಗೆ ತೆರಳಿ ಪರೀಕ್ಷಿಸಿ ಮಾಸ್ಕ್ ಧರಿಸದಿದ್ದರೆ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು. ಸಾರ್ವಜನಿಕರಿಗೆ ಮಾಸ್ಕ್ ಮಹತ್ವದ ಕುರಿತು ಮನವರಿಕೆ ಮಾಡಿದರು.

ಈ ಕುರಿತು ಜಿಲ್ಲಾಧಿಕಾರಿ ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ ಮಾಸ್ಕ್ ಧರಿಸುವಿಕೆ ಕಡ್ಡಾಯಗೊಳಿಸಿದೆ. ಆದರೂ ಸಹಿತ ಕೆಲವರು ಮಾಸ್ಕ್ ಇಲ್ಲದೆ ಪ್ರಯಾಣಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ.

ಒಂದು ವೇಳೆ ದಂಡ ಕಟ್ಟಲು ಒಪ್ಪದಿದ್ದರೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುವುದು. ಕ್ವಾರಂಟೈನ್ ಕೇಂದ್ರಕ್ಕೆ ತೆರಳಲು ಮುಂದೆ ಬಾರದಿದ್ದರೆ ಅಂಥವರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ