Please enable javascript.ಭರತನಾಟ್ಯದ ಚಿಗುರು ಪ್ರಿಯಾಂಕ - Priyanka Bharatanatyam - Vijay Karnataka

ಭರತನಾಟ್ಯದ ಚಿಗುರು ಪ್ರಿಯಾಂಕ

ವಿಕ ಸುದ್ದಿಲೋಕ 24 Aug 2016, 9:00 am
Subscribe

ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಪಟ್ಟಣದ ನ್ಯಾಶನಲ್‌ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಕ.ಎಂ.ಹಿರೇಮಠ ಭರತನಾಟ್ಯದ ಮೂಲಕ ಗಮನ ಸೆಳೆದಿದ್ದಾಳೆ.

priyanka bharatanatyam
ಭರತನಾಟ್ಯದ ಚಿಗುರು ಪ್ರಿಯಾಂಕ

ಕಾರಟಗಿ; ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಪಟ್ಟಣದ ನ್ಯಾಶನಲ್‌ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಕ.ಎಂ.ಹಿರೇಮಠ ಭರತನಾಟ್ಯದ ಮೂಲಕ ಗಮನ ಸೆಳೆದಿದ್ದಾಳೆ.

ಪಾಲಕರ ಮತ್ತು ತರಬೇತಿದಾರರ ಪ್ರೋತ್ಸಾಹದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ಭರತನಾಟ್ಯ ಜೂನಿಯರ್‌ ಪರೀಕ್ಷೆಯಲ್ಲಿ ಬಳ್ಳಾರಿ ವಿಭಾಗಕ್ಕೆ ಎರಡನೇ ರಾರ‍ಯಂಕ್‌ ಪಡೆದಿರುವ ಪ್ರಿಯಾಂಕ ಓದಿನಲ್ಲೂ ಮುಂದು.

ಪ್ರಮುಖ ಉತ್ಸವ: ಆನೆಗುಂದಿ, ಕನಕಗಿರಿ, ಇಟಗಿ ಉತ್ಸವ, 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕೊಪ್ಪಳ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಚಿಗುರು, ಹೈ.ಕ.ಸಾಂಸ್ಕೃತಿಕ ಕಲಾ ಉತ್ಸವ, ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಸೇರಿದಂತೆ ಹಲವು ಕಡೆ ಭರತನಾಟ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ಮಂತ್ರಾಲಯದಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಬಾಲಕಿ ಗಮನ ಸೆಳೆದಿದ್ದಾಳೆ. ನೃಪತುಂಗಾ ಕಲಾ ಪ್ರಶಸ್ತಿ, ನೃತ್ಯ ಕಲಾವಿದೆ, ಕಲ್ಯಾಣ ರತ್ನ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ನವರತ್ನ ಸೇರಿದಂತೆ ಜಿಲ್ಲಾಮಟ್ಟದ ನಾನಾ ಪ್ರಶಸ್ತಿಗಳು ವಿದ್ಯಾರ್ಥಿನಿಯ ಭರತನಾಟ್ಯದ ಬಗೆಗಿನ ಉತ್ಸಾಹವನ್ನು ಇಮ್ಮಡಿಸಿದೆ.

------

ಶಾಸ್ತ್ರೀಯ ಸಂಗೀತಕ್ಕೆ ಭರತನಾಟ್ಯ ಪ್ರದರ್ಶನ ನೀಡುವುದು ಸಾಮಾನ್ಯ. ಆದರೆ, ವಿದ್ಯಾರ್ಥಿನಿ ಪ್ರಿಯಾಂಕ, ಸಂತ ಶಿಶುನಾಳ ಶರೀಫ್‌, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಶರಣರ ವಚನಗಳಿಗೆ ಭರತನಾಟ್ಯ ಪ್ರದರ್ಶನ ನೀಡುವುದು ಗಮನಾರ್ಹ.

-----

ಅಭ್ಯಾಸದ ಜತೆಗೆ ಭರತನಾಟ್ಯದಲ್ಲಿ ಉನ್ನತ ಸಾಧನೆ ಮಾಡಬೇಕುನ್ನುವ ಮಹದಾಸೆ ಇದೆ. ಪಾಲಕರ ಪ್ರೋತ್ಸಾಹ ಮತ್ತು ತರಬೇತಿದಾರರ ಸಲಹೆಯಂತೆ ಹೆಚ್ಚಿನ ಪರಿಶ್ರಮ ಹಾಕಿದ್ದರಿಂದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ.

-ಪ್ರಿಯಾಂಕ.ಎಂ.ಹಿರೇಮಠ.

-----

ಮಗಳಿಗೆ ಚಿಕ್ಕಂದಿನಿಂದಲೇ ಭರತನಾಟ್ಯದ ಬಗ್ಗೆ ಆಸಕ್ತಿ ಇದೆ. ಅಭ್ಯಾಸದ ಜತೆಜತೆಗೆ ಆಕೆ ಭರತನಾಟ್ಯ ರೂಢಿಸಿಕೊಂಡಿದ್ದಾಳೆ. ರಾಜ್ಯ, ರಾಷ್ಟ್ರಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ಕಲೆ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆ ಗಳಿಸಿದ್ದಾಳೆ.

-ಮೃತ್ಯುಂಜಯ ನವಲಿ, ಪೂರ್ಣಿಮಾ, ವಿದ್ಯಾರ್ಥಿನಿ ಪಾಲಕರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ