ಆ್ಯಪ್ನಗರ

ಕೂಲಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಿರುವ ಕೆಲಸಕ್ಕೆ ಕೂಲಿ ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ಟಕ್ಕಳಕಿ ಗ್ರಾಮದ ಕಾರ್ಮಿಕರು ಇಲ್ಲಿನ ತಾ.ಪಂ.ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 19 Mar 2019, 5:00 am
ಕುಷ್ಟಗಿ : ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಿರುವ ಕೆಲಸಕ್ಕೆ ಕೂಲಿ ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ಟಕ್ಕಳಕಿ ಗ್ರಾಮದ ಕಾರ್ಮಿಕರು ಇಲ್ಲಿನ ತಾ.ಪಂ.ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web KPL-KPL17KST03


2019ರ ಜನೆವರಿಯಲ್ಲಿ ಗ್ರಾಮದ 82 ಕೂಲಿಕಾರರಿಗೆ 14 ದಿನಗಳ ಎನ್‌ಎಂಆರ್‌ನ್ನು ನೀಡಲಾಗಿತ್ತು. ಹೊಸಳ್ಳಿ ಕೆರೆ ಹೂಳೆತ್ತುವ ಕೆಲಸವನ್ನು ಕೂಲಿಕಾರರು ನಿರ್ವಹಿಸಿದ್ದರು. ನರೇಗಾ ನಿಯಮಗಳಂತೆ, ಕೆಲಸ ಮುಗಿದ 15 ದಿನಗಳ ಒಳಗೆ ಎಂಐಎಸ್‌ ಮಾಡಿ ಹಣ ಪಾವತಿಗೆ ವ್ಯವಸ್ಥೆ ಮಾಡಬೇಕು. ಕೆಲಸ ಮುಗಿದು ಎರಡು ತಿಂಗಳಾಗುತ್ತ ಬಂದರೂ ಗ್ರಾ.ಪಂ.ಯವರು ಎಂಆಯ್‌ಎಸ್‌ ಮಾಡಿಲ್ಲ. ಕೂಲಿಕಾರರು ಕೂಲಿ ಹಣದಿಂದ ವಂಚಿತವಾಗಿದ್ದಾರೆ. ಪ್ರಸಕ್ತ ವರ್ಷ ಬರ ಇರುವುದರಿಂದ ಉದ್ಯೋಗ ಖಾತರಿ ಯೋಜನೆಯಡಿ ನಿರಂತರವಾಗಿ ಕೆಲಸ ನೀಡುವಂತೆ ಸರಕಾರ ಆದೇಶಿಸಿದೆ. ಟಕ್ಕಳಕಿ ಗ್ರಾಮಸ್ಥರು ಕಳೆದ 8-10 ತಿಂಗಳಿಂದ ಪ್ರಯತ್ನ ಪಟ್ಟರೂ ಎನ್‌ಎಂಆರ್‌ ನೀಡಿರಲಿಲ್ಲ. ಜನೆವರಿಯಲ್ಲಿ ಪಡೆದ ಕೆಲಸವೇ ಗ್ರಾಮಸ್ಥರ ಪಾಲಿಗೆ ಮೊದಲ ಕೆಲಸ. ಎನ್‌ಎಂಆರ್‌ ಅವಧಿ ಮುಗಿದ ಮೇಲೆ ಮತ್ತೊಂದು ಎನ್‌ಎಂಆರ್‌ ನೀಡುವಂತೆ ಬೇಡಿಕೆ ಇಡಲಾಗಿದೆ. ಗ್ರಾ.ಪಂ.ಯವರ ವಿಳಂಬ ನೀತಿಯಿಂದಾಗಿ ಜನರು ಕೆಲಸದಿಂದ ವಂಚಿತವಾಗುತ್ತಿದ್ದಾರೆ ಎಂದರು ಪ್ರತಿಭಟನೆಕಾರರು ಆರೋಪಿಸಿದರು.

ಸ್ಥಳಕ್ಕೆ ಬಂದ ತಾ.ಪಂ.ಇಒ ಕೆ.ತಿಮ್ಮಪ್ಪ ಅವರು, ಸಂಬಂಧಿಸಿದ ಗ್ರಾ.ಪಂ.ಯ ಪಿಡಿಒ ಅವರಿಗೆ ಸೂಚನೆ ನೀಡಿ ಕೂಡಲೇ ಕೂಲಿ ಹಣ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ಗೆ ಒಳಪಡಿಸುವಂತೆ ಹೇಳುವುದಾಗಿ ಭರವಸೆ ನೀಡಿದರು. ಪ್ರಾಂತ ರೈತ ಸಂಘದ ಆರ್‌.ಕೆ.ದೇಸಾಯಿ, ಹುಚ್ಚೀರಪ್ಪ, ಸಂಗನಗೌಡ ತಳವಗೇರಾ ನೇತೃತ್ವವಹಿಸಿದ್ದರು. ಟಕ್ಕಳಕಿ ಗ್ರಾಮದ ಶರಣಪ್ಪ ಕಂದಗಲ್‌, ಶರಣಪ್ಪ ಮಾರನಾಳ, ದೇವಪ್ಪ ಮಾಲಿಪಾಟೀಲ್‌, ಶಂಕ್ರಪ್ಪ ಹೊಸೂರು, ಶರಣಮ್ಮ ಕಂಬಳಿ, ಹುಲಿಗೆಮ್ಮ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ