ಆ್ಯಪ್ನಗರ

ಶಿಕ್ಷ ಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ತಾಲೂಕಿನ ಹುಣಿಸಿಹಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷ ಕರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಪಾಲಕರು ವಿದ್ಯಾರ್ಥಿಗಳು ಗುರುವಾರ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 8 Jun 2018, 5:00 am
ಯಲಬುರ್ಗಾ : ತಾಲೂಕಿನ ಹುಣಿಸಿಹಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷ ಕರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಪಾಲಕರು ವಿದ್ಯಾರ್ಥಿಗಳು ಗುರುವಾರ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web KPL-07YLB04


ಎಸ್ಡಿಎಂಸಿ ಅಧ್ಯಕ್ಷ ಉಮೇಶ ಕಟ್ಟಿಮನಿ ಮಾತನಾಡಿ, ಗ್ರಾಮದ ತಾಂಡಾದ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಿಕ್ಷ ಕರ ಸಮಸ್ಯೆ ನಿವಾರಣೆಯಾಗಿಲ್ಲ. 2015ರಿಂದಲೂ ಶಾಲೆಯಲ್ಲಿ ಅತಿಥಿ ಶಿಕ್ಷ ಕರನ್ನು ನೇಮಿಸಿಕೊಂಡು ಶಾಲೆಯ ವರ್ಷ ಪೂರ್ತಿ ಕಳೆದಿದ್ದಾರೆ. ಸದ್ಯ ಕೇವಲ ಒಬ್ಬ ಶಿಕ್ಷ ಕರಿಂದ ಮಾತ್ರ ಶಾಲೆ ನಡೆಸಲು ಅಸಾಧ್ಯವಾಗಿದೆ. ಶಾಲೆಯಲ್ಲಿ ಒಟ್ಟು 8 ಜನ ಶಿಕ್ಷ ಕರು ಕಾರ್ಯ ನಿರ್ವಹಿಸಬೇಕಾಗಿದೆ. ಆದರೆ ಶಿಕ್ಷ ಕರಿಲ್ಲದೇ ಶಾಲೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೆ ಸರಿಯುತ್ತಿದ್ದಾರೆ. ಶಾಲೆಯಲ್ಲಿ ಮೂಲ ಸೌಕರ್ಯದ ಸಮಸ್ಯೆ ತಾಂಡವವಾಡುತ್ತಿದ್ದು, ಶಿಕ್ಷ ಣ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ಮಕ್ಕಳಿಂದ ಪಾಠ ಮಾಡುವಂತಹ ಅನಿವಾರ್ಯತೆ ಎದುರಾಗಿದೆ. ಕೂಡಲೇ ಸಂಬಂಧಿಸಿದ ಶಿಕ್ಷ ಣ ಇಲಾಖೆದವರು ಎರಡ್ಮೂರು ದಿನಗಳೊಳಗಾಗಿ ಶಾಲೆಗೆ ಶಿಕ್ಷ ಕರನ್ನು ನೇಮಿಸದಿದ್ದರೆ ಶಾಲೆಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾಲಕರಾದ ಈರಪ್ಪ ಕಟ್ಟಿಮನಿ,ಗುರಪ್ಪ ಪೂಜಾರ್‌,ರಮೇಶ ಮ್ಯಾಳಿ, ವೀರೇಶ ಕಟ್ಟಿಮನಿ, ನಾಗರಾಜ ಕಾರಬಾರಿ ವಿದ್ಯಾರ್ಥಿಗಳು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ