ಆ್ಯಪ್ನಗರ

ಬೀದಿಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

ಬೀದಿಬದಿ ವ್ಯಾಪಾರಸ್ಥರಿಂದ ಜಕಾತಿ ವಸೂಲಾತಿ ನಿಲ್ಲಿಸುವಂತೆ ಒತ್ತಾಯಿಸಿ, ಶ್ರೀಗವಿಸಿದ್ಧೇಶ್ವರ ಕಿರುಕುಳ ವ್ಯಾಪಾರಿಗಳ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ವ್ಯಾಪಾರಸ್ಥರು ನಗರದ ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Vijaya Karnataka 27 Jun 2018, 5:00 am
ಕೊಪ್ಪಳ : ಬೀದಿಬದಿ ವ್ಯಾಪಾರಸ್ಥರಿಂದ ಜಕಾತಿ ವಸೂಲಾತಿ ನಿಲ್ಲಿಸುವಂತೆ ಒತ್ತಾಯಿಸಿ, ಶ್ರೀಗವಿಸಿದ್ಧೇಶ್ವರ ಕಿರುಕುಳ ವ್ಯಾಪಾರಿಗಳ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ವ್ಯಾಪಾರಸ್ಥರು ನಗರದ ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
Vijaya Karnataka Web KPL-KPL26PHOTO10


ರಾಜ್ಯ ಸರಕಾರ 2016ನೇ ಸಾಲಿನಲ್ಲಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದು, ಪುರಸಭೆ ಕಾಯಿದೆ 1964ರ ಕಲಂ 138 ಅನೂರ್ಜಿತವಾಗಿದೆ. ಆದರೆ, ಬೀದಿಬದಿ ವ್ಯಾಪಾರಸ್ಥರಿಂದ ಜಕಾತಿ ವಸೂಲಿ ಮಾಡುತ್ತಿದ್ದು, ಇದರಿಂದ ಕಾಯಿದೆ ಉಲ್ಲಂಘನೆ ಮಾಡಲಾಗುತ್ತಿದೆ. ಬೀದಿಬದಿ ವ್ಯಾಪಾರಸ್ಥರ ಬಳಿ ದಿನನಿತ್ಯ 10 ರೂ.ರಿಂದ 30 ರೂ. ಶುಲ್ಕ ಪಡೆಯಲಾಗುತ್ತಿದೆ. ಶುಲ್ಕ ವಸೂಲು ಮಾಡುವ ವ್ಯಕ್ತಿಗಳು ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಆದ್ದರಿಂದ ಇದನ್ನು ರದ್ದು ಪಡಿಸಬೇಕು. ಬೀದಿಬದಿ ವ್ಯಾಪಾರಿಗಳ ಅಧಿನಿಯಮ 2017, ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಮತ್ತು ಒಕ್ಕಲೆಬ್ಬಿಸುವ, ಮರುಸ್ಥಾಪನೆ ವಿರುದ್ಧ ರಕ್ಷಣೆ ಕಲಂ 3(1), 3 (3) ಮತ್ತು 27 ನಗರಸಭೆಯಿಂದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಮಾಡಬೇಕು. ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ವಿತರಣೆ ಮಾಡಬೇಕು. ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಟೌನ್‌ ವೆಂಡಿಂಗ್‌ ಕಮಿಟಿ ರಚನೆ ಮಾಡಬೇಕು. ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಪ್ರಮಾಣಪತ್ರ, ಗುರುತಿನ ಚೀಟಿ ಹಾಗೂ ಟೌನ್‌ ವೆಂಡಿಂಗ್‌ ಕಮೀಟಿ ರಚನೆ ಆದ ಮೇಲೆ ಚರ್ಚಿಸಿ, ಶುಲ್ಕ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ, ಪ್ರತಿಭಟನಾನಿರತರು ಘೋಷಣೆ ಕೂಗಿದರು. ಬೆಳಗ್ಗೆಯೇ ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಎದುರು ಸೇರಿದಂತೆ ನಾನಾ ಮುಖ್ಯರಸ್ತೆಯ ಬೀದಿಬದಿ ವ್ಯಾಪಾರಸ್ಥರು ಅಂಗಡಿ ಬಂದ್‌ ಮಾಡಿ, ಪ್ರತಿಭಟನೆಗೆ ಬರುವಂತೆ ಒತ್ತಾಯಿಸಿದರು. ಬೆಳಗ್ಗೆ ಮಾತ್ರ ಬೀದಿಬದಿ ಇರುವ ಹಣ್ಣು, ಹೂವಿನ ವ್ಯಾಪಾರಿಗಳು ಕೆಲ ಸಮಯ ಬಂದ್‌ ಮಾಡಿ ಮತ್ತೆ ವ್ಯಾಪಾರ ಆರಂಭಿಸಿದರು.

...........

ನಾವು ಯಾವುದೇ ರೀತಿಯ ನಿಯಮ ಬಾಹಿರವಾಗಿ ಜಕಾತಿ ವಸೂಲಿ ಮಾಡುತ್ತಿಲ್ಲ. ಕಾಯಿದೆಯ ನಿಯಮದಂತೆ ಎರಡು ಸಾರಿ ಟೆಂಡರ್‌ ಕರೆದಿದ್ದು, ಟೆಂಡರ್‌ ನೀಡಿ ಜಕಾತಿ ವಸೂಲಾತಿ ಮಾಡಲಾಗುತ್ತದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಸುಳ್ಳು, ಜಕಾತಿ ವಸೂಲಾತಿ ಮಾಡುವುದು ನಿಲ್ಲಿಸುವುದಿಲ್ಲ.

-ಸುನಿಲ್‌ ಪಾಟೀಲ್‌, ಪೌರಾಯುಕ್ತ, ಕೊಪ್ಪಳ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ