ಆ್ಯಪ್ನಗರ

ಪಿಎಸ್‌ಐ ಆತ್ಮಹತ್ಯೆ

ಪುತ್ರನ ಅಕಾಲಿಕ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇಲ್ಲಿನ ಎಸ್ಪಿ ಕಚೇರಿ ವೈರ್‌ಲೆಸ್ ವಿಭಾಗದ ಪಿಎಸ್‌ಐ ಟಿ.ಶಶಿಧರ್ (59), ಪೊಲೀಸ್ ವಸತಿಗೃಹದಲ್ಲಿ ಭಾನುವಾರ ನೇಣಿಗೆ ಶರಣಾಗಿದ್ದಾರೆ.

ವಿಕ ಸುದ್ದಿಲೋಕ 6 Mar 2017, 8:18 am
ಕೊಪ್ಪಳ: ಪುತ್ರನ ಅಕಾಲಿಕ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇಲ್ಲಿನ ಎಸ್ಪಿ ಕಚೇರಿ ವೈರ್‌ಲೆಸ್ ವಿಭಾಗದ ಪಿಎಸ್‌ಐ ಟಿ.ಶಶಿಧರ್ (59), ಪೊಲೀಸ್ ವಸತಿಗೃಹದಲ್ಲಿ ಭಾನುವಾರ ನೇಣಿಗೆ ಶರಣಾಗಿದ್ದಾರೆ.
Vijaya Karnataka Web psi suicide
ಪಿಎಸ್‌ಐ ಆತ್ಮಹತ್ಯೆ


ಟಿ.ಶಶಿಧರ್ ಅವರು, ಮೂಲತಃ ಬಳ್ಳಾರಿ ಜಿಲ್ಲೆಯ ಕುರುಗೋಡಿನವರಾಗಿದ್ದಾರೆ. ಅವರ ಏಕೈಕ ಪುತ್ರ, ಡಾ.ಅಜಯಕುಮಾರ್ ಅವರು, 2015, ಆಗಸ್ಟ್ ನಲ್ಲಿ ವಿಷ ಕುಡಿದು ಆತ್ಮಹತ್ಯೆಮಾಡಿಕೊಂಡಿದ್ದರು. ಬಿಎಎಂಎಸ್ ಪದವೀಧರರಾಗಿದ್ದ ಅವರು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಇಳಕಲ್ಲಿನ ಆಯುರ್ವೇದಿಕ್ ಕಾಲೇಜ್‌ನಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದರು. ಈ ಮಧ್ಯೆ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವಿವಾಹಿತ ಪುತ್ರನ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಿಎಸ್‌ಐ ಶಶಿಧರ್ ಅವರಿಗೆ ಮತ್ತೊಂದೆಡೆ ಗಂಟಲು ಕ್ಯಾನ್ಸರ್ ಬಾಧಿಸುತ್ತಿತ್ತು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ