ಆ್ಯಪ್ನಗರ

ರಂಗನಾಥ ದೇವರ ರಥೋತ್ಸವ

ತಾಲೂಕು ಸಮೀಪದ ಆನೆಗೊಂದಿ ರಂಗನಾಥ ದೇವಸ್ಥಾನದ ರಥೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನ ಆವರಣದಿಂದ ಗ್ರಾಮದ ಪಾದಗಟ್ಟೆವರೆಗೆ ರಥ ಎಳೆಯಲಾಯಿತು.

Vijaya Karnataka Web 9 Apr 2018, 5:00 am
ಗಂಗಾವತಿ : ತಾಲೂಕು ಸಮೀಪದ ಆನೆಗೊಂದಿ ರಂಗನಾಥ ದೇವಸ್ಥಾನದ ರಥೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನ ಆವರಣದಿಂದ ಗ್ರಾಮದ ಪಾದಗಟ್ಟೆವರೆಗೆ ರಥ ಎಳೆಯಲಾಯಿತು. ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಭಾವ ಮೆರೆದರು. ಐತಿಹಾಸಿಕ ದೇವಸ್ಥಾನ ಎಂಬ ಖ್ಯಾತಿ ಪಡೆದಿರುವ ರಂಗನಾಥ ದೇವರಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಆನೆಗೊಂದಿ ರಾಜವಂಶಸ್ಥರಾದ ನರಸಿಂಹದೇವರಾಯಲು, ಕೃಷ್ಣದೇವರಾಯ, ಹರಿಹರ ದೇವರಾಯ ಸೇರಿದಂತೆ ಇತರರು ಇದ್ದರು.
Vijaya Karnataka Web ranganath is the chariot of god
ರಂಗನಾಥ ದೇವರ ರಥೋತ್ಸವ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ