ಆ್ಯಪ್ನಗರ

‘ಶರಣ ಹಡಪದ ಅಪ್ಪಣ್ಣವರ ಕೊಡುಗೆ ಅನನ್ಯ’

ಸಮಾಜಕ್ಕೆ ಶರಣರಾದ ಹಡಪದ ಅಪ್ಪಣ್ಣವರ ಕೊಡುಗೆ ಅನನ್ಯವಾಗಿದೆ ಎಂದು ತಹಸೀಲ್ದಾರ್‌ ಎಲ್‌.ಡಿ.ಚಂದ್ರಕಾಂತ ಹೇಳಿದರು.

Vijaya Karnataka 28 Jul 2018, 5:00 am
ಗಂಗಾವತಿ : ಸಮಾಜಕ್ಕೆ ಶರಣರಾದ ಹಡಪದ ಅಪ್ಪಣ್ಣವರ ಕೊಡುಗೆ ಅನನ್ಯವಾಗಿದೆ ಎಂದು ತಹಸೀಲ್ದಾರ್‌ ಎಲ್‌.ಡಿ.ಚಂದ್ರಕಾಂತ ಹೇಳಿದರು.
Vijaya Karnataka Web KPL-KPL27CM01


ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಹಡಪದ ಸಮಾಜದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ಮಾತನಾಡಿದರು. ಕಾಯಕವನ್ನು ನಂಬಿ ಬದುಕಿದ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದಾರೆ. ತಮ್ಮ ಸಿದ್ಧಾಂತಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬರೂ ಮಹಾನ್‌ ವ್ಯಕ್ತಿಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಗರದ ಪ್ರಮುಖ ವೃತ್ತಗಳಲ್ಲಿ ಭಾವಚಿತ್ರದ ಮೆರವಣಿಗೆ ನಡೆಯಿತು. ಸಹಾಯಕ ಕೃಷಿ ನಿರ್ದೇಶಕ ಜಂಬಣ್ಣ ಐಲಿ, ಕಂದಾಯ ಇಲಾಖೆ ಅಧಿಕಾರಿಗಳಾದ ಮಹೇಶ, ಮಂಜುನಾಥ, ಶಿವುಕುಮಾರ, ಸಮಾಜದ ಮುಖಂಡರಾದ ಚನ್ನಪ್ಪ ಹಡಪದ, ಶಿವಪ್ಪ ಹಡಪದ, ಈಶಪ್ಪ ಮುದ್ದಾಬಳ್ಳಿ, ಓಂಕಾರಪ್ಪ ಹಡಪದ, ಶರಣಪ್ಪ ಹಡಪದ, ಚಿನ್ನಪ್ಪ ಹಡಪದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ