ಆ್ಯಪ್ನಗರ

ಕೊಪ್ಪಳ: ಚಿರತೆ ಸೆರೆಗೆ ಬೋನ್‌ಗಳ ಕೊರತೆ!

ಬೆಟ್ಟದ ಹಲವೆಡೆ ಬೋನ್‌ಗಳನ್ನು ಅಳವಡಿಸಲು ಬೋನ್‌ಗಳ ಕೊರತೆ ಕಂಡುಬಂದಿದೆ. ಗಂಗಾವತಿ ವಲಯದ 3, ಕೊಪ್ಪಳ ವಲಯದ 4 ಬೋನ್‌ಗಳು, ಹೊಸಪೇಟೆ ಹಾಗೂ ದರೋಜಿ ಕರಡಿ ಧಾಮದಿಂದ ತಲಾ 1 ಬೋನ್‌ ತರಿಸಿ ಅಲ್ಲಲ್ಲಿ ಅಳವಡಿಸಲಾಗಿದೆ.

Vijaya Karnataka Web 12 Nov 2020, 7:35 pm
ಗಂಗಾವತಿ: ಆನೆಗೊಂದಿ ಬೆಟ್ಟದ ಪ್ರದೇಶದಲ್ಲಿಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಚಿರತೆಗಳು ಕಣ್ಣಾಮುಚ್ಚಾಲೆ ಆಡುತ್ತಿವೆ. ಚಿರತೆಗಳ ಸೆರೆಗೆ ಬೋನ್‌ಗಳ ಕೊರತೆ ಕಂಡುಬಂದಿದೆ. ಅಗತ್ಯ ಬೋನ್‌ಗಳಿಗೆ ನೆರೆಹೊರೆಯ ಜಿಲ್ಲೆಗಳ ಬೋನ್‌ಗಳಿಗೆ ಮೊರೆಹೋಗಬೇಕಿದೆ.
Vijaya Karnataka Web ಚಿರತೆ ಬೋನು
ಚಿರತೆ ಬೋನು


ಕೊಪ್ಪಳ: ಚಿರತೆ ಬೋನಿಗೆ ಬಿದ್ದರಷ್ಟೇ ಆನೆಗೊಂದಿಗೆ ಬನ್ನಿ!

ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ, ನರಭಕ್ಷಕ ಚಿರತೆಯ ಸೆರೆಗೆ ಹರಸಾಹಸ ಮುಂದುವರಿಸಿದ್ದಾರೆ. ಸಿಬ್ಬಂದಿಯ ಕಣ್ತಪ್ಪಿಸುವ ಚಿರತೆ, ಸಮೀಪದ ಮನೆಗಳ ಮುಂದೆ ಕಟ್ಟಿಹಾಕಿರುವ ಪ್ರಾಣಿ, ನಾಯಿಗಳನ್ನು ಹೊತ್ತೊಯ್ಯುತ್ತಿದ್ದು, ಜನರು ಚಿಂತಾಕ್ರಾಂತರಾಗಿದ್ದಾರೆ. ಚಿರತೆಗಳ ಸೆರೆಗೆ 9 ಕಡೆ ಟ್ರ್ಯಾಪ್‌ ಹಾಗೂ ಡ್ರೋಣ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಈ ಕ್ಯಾಮೆರಾಗಳಲ್ಲಿಚಿರತೆಗಳ ಸುಳಿವು ಪ್ರತ್ಯಕ್ಷವಾಗಿಲ್ಲ.

ಚಿರತೆ ಸೆರೆ ಹಿಡಿಯಲು ಟ್ರ್ಯಾಪ್‌ ಕ್ಯಾಮೆರಾ, ಬೋನ್‌ಗಳನ್ನು ಅಳವಡಿಸಲಾಗಿದೆ. ಆದರೂ ನರಭಕ್ಷಕ ಚಿರತೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬೋನ್‌ಗಳ ಕೊರತೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸ್ಥಳಾಂತರ ಮಾಡಿಸುವ ಮೂಲಕ ಚಿರತೆ ಸೆರೆಗೆ ಯೋಜಿಸಲಾಗುತ್ತಿದೆ.
ವಿಜಯಕುಮಾರ ಮೇಟಿ, ಅರಣ್ಯ ವಲಯ ಅಧಿಕಾರಿ, ಗಂಗಾವತಿ

ಬೆಟ್ಟದ ಹಲವೆಡೆ ಬೋನ್‌ಗಳನ್ನು ಅಳವಡಿಸಲು ಬೋನ್‌ಗಳ ಕೊರತೆ ಕಂಡುಬಂದಿದೆ. ಗಂಗಾವತಿ ವಲಯದ 3, ಕೊಪ್ಪಳ ವಲಯದ 4 ಬೋನ್‌ಗಳು, ಹೊಸಪೇಟೆ ಹಾಗೂ ದರೋಜಿ ಕರಡಿ ಧಾಮದಿಂದ ತಲಾ 1 ಬೋನ್‌ ತರಿಸಿ ಅಲ್ಲಲ್ಲಿ ಅಳವಡಿಸಲಾಗಿದೆ. ದಿನದ 24 ತಾಸು, ಅರಣ್ಯ ಇಲಾಖೆ ಸಿಬ್ಬಂಧಿ ಗಸ್ತು ತಿರುಗುತ್ತಿದ್ದಾರೆ. ಆದರೂ, ಈ ಪ್ರದೇಶ ಚಿರತೆ ದಾಳಿ, ಹಾವಳಿಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಜನತೆ ಅಂಗೈಯಲ್ಲೇ ಜೀವ ಹಿಡಿದು ದಿನ ದೂಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ