ಆ್ಯಪ್ನಗರ

ಗ್ರಾ.ಪಂ.ಕಚೇರಿಗೆ ಮುತ್ತಿಗೆ

ಸಮೀಪದ ಹಾಬಲಕಟ್ಟಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಕೆಲಸಕ್ಕೆ ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಯುವಕರು ಗ್ರಾ.ಪಂ. ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Vijaya Karnataka 5 Dec 2018, 5:00 am
ಹಿರೇಗೊಣ್ಣಾಗರ (ಹನುಮಸಾಗರ) : ಸಮೀಪದ ಹಾಬಲಕಟ್ಟಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಕೆಲಸಕ್ಕೆ ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಯುವಕರು ಗ್ರಾ.ಪಂ. ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web siege to the gram panchayat
ಗ್ರಾ.ಪಂ.ಕಚೇರಿಗೆ ಮುತ್ತಿಗೆ


ಈ ಸಂದರ್ಭದಲ್ಲಿ ವಾಲ್ಮೀಕಿ ಯುವ ಪಡೆಯ ಅಧ್ಯಕ್ಷ ಯಮನೂರಪ್ಪ ಅಬ್ಬಿಗೇರಿ ಮಾತನಾಡಿ, ಈ ಗ್ರಾ.ಪಂ.ವ್ಯಾಪ್ತಿಗೆ ಗಡಚಿಂತಿ, ಹಾಬಲಕಟ್ಟಿ, ಮಾಸಕಟ್ಟಿ ಗ್ರಾಮಗಳು ಒಳಪಡುತ್ತಿವೆ. ಈ ಗ್ರಾಮಗಳಲ್ಲಿ ಬಿ.ಎ, ಬಿ.ಕಾಂ ಓದಿದ ಯುವಕರು ಸಾಕಷ್ಟಿದ್ದಾರೆ.

ಇವರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ. ಆದರೆ ಗ್ರಾ.ಪಂ. ಕಚೇರಿಯಲ್ಲಿ ಬೇರೆ ಗ್ರಾಮದವನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ ಎಂದು ದೂರಿದರು.ಇನ್ನು ನರೇಗಾ ಯೋಜನೆಯಡಿ ಒಂದು ಕೆಲಸ ಆರಂಭಿಸಿಲ್ಲ. ಕೆಲಸವಿಲ್ಲದೆ ಸಾರ್ವಜನಿಕರು ಗುಳೆ ಹೊರಟಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೆಲಸಕ್ಕೆ ಸ್ಥಳಿಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಭರಮಪ್ಪ ಹರಿಜನ, ಗದಿಗೆಪ್ಪ ಗುಡದೂರ, ಪರಶು ಮುಗಳಿ, ರವಿ ಬಡಿಗೇರ, ಚಂದ್ರು ಗೊರೇಬಿಹಾಳ, ಕಾಲಿಂಗಪ್ಪ ಚಕ್ಕಡಿ, ಶರಣಪ್ಪ ಮುರಡಿ, ನಾಗರಾಜ ವಡ್ಡರ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ