ಆ್ಯಪ್ನಗರ

ಸೆಖೆಯಿಂದ ಕುಷ್ಟಗಿ ವಿದ್ಯಾರ್ಥಿ ಸಾವು

ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ದೊಡ್ಡಬಸವ ಗೋವಿಂದಪ್ಪ ಗಡ್ಡದ್‌ (13) ಎನ್ನುವ ವಿದ್ಯಾರ್ಥಿ ಶುಕ್ರವಾರ ತಡರಾತ್ರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ವಿಕ ಸುದ್ದಿಲೋಕ 16 Apr 2017, 9:59 am

ಕೊಪ್ಪಳ: ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ದೊಡ್ಡಬಸವ ಗೋವಿಂದಪ್ಪ ಗಡ್ಡದ್‌ (13) ಎನ್ನುವ ವಿದ್ಯಾರ್ಥಿ ಶುಕ್ರವಾರ ತಡರಾತ್ರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ದೊಡ್ಡಬಸವ, ಶಾಲೆಯಲ್ಲಿ ಬಿಸಿಯೂಟ ಸೇವಿಸಿ, ಮನೆಯ ತಗಡಿನ ಶೆಡ್‌ನಲ್ಲಿ ಮಲಗಿದ್ದ. ರಾತ್ರಿ ಸಮಯದಲ್ಲಿ ಮೈಯೆಲ್ಲ ಕಾವು ಆಗಿದೆ ಎಂದು ಹೇಳಿದ್ದು, ತಕ್ಷಣವೇ ತಾವರಗೇರಾ ಗ್ರಾಮದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಷ್ಟಗಿಯ ತಾಲೂಕಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

Vijaya Karnataka Web student dies of heat exhaustion
ಸೆಖೆಯಿಂದ ಕುಷ್ಟಗಿ ವಿದ್ಯಾರ್ಥಿ ಸಾವು


ಬಿಸಿಲಿನ ತಾಪದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಪಾಲಕರು ಹೇಳುತ್ತಿದ್ದಾರೆ. ಆದರೆ ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು, ವಿದ್ಯಾರ್ಥಿ ಜ್ವರದಿಂದ ಬಳಲುತ್ತಿದ್ದು, ಜ್ವರ ತಲೆಗೆ ಏರಿದ್ದರಿಂದ ಮೃತಪಟ್ಟಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ