ಆ್ಯಪ್ನಗರ

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು: ನವವೃಂದಾವನ ಗಡ್ಡೆಯಲ್ಲಿ ಸಿಲುಕಿದ ಕಾವಲುಗಾರರು

ತುಂಗಭದ್ರಾ ಜಲಾಶಯದಿಂದ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನವವೃಂದಾವನದಲ್ಲಿ ಕಾವಲುಗಾರರಾದ ಉಡಚಪ್ಪ ಹಾಗೂ ರಾಘವೇಂದ್ರ ಸಿಲುಕಿ ಹಾಕಿಕೊಂಡಿದ್ದಾರೆ.

Vijaya Karnataka Web 11 Aug 2019, 10:27 am
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನವವೃಂದಾವನ ಗಡ್ಡೆಯಲ್ಲಿ ಇಬ್ಬರು ಕಾವಲುಗಾರರು ಸಿಲುಕಿ ಹಾಕಿಕೊಂಡಿದ್ದಾರೆ.
Vijaya Karnataka Web tb dam


ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಬಳಿಯ ನವವೃಂದಾವನದಲ್ಲಿ ಕಾವಲುಗಾರರಾದ ಉಡಚಪ್ಪ ಹಾಗೂ ರಾಘವೇಂದ್ರ ಸಿಲುಕಿ ಹಾಕಿಕೊಂಡಿದ್ದಾರೆ.

ಇತ್ತೀಚಿಗೆ ವ್ಯಾಸರಾಜ ವೃಂದಾವನ ಧ್ವಂಸ ಮಾಡಿದಾಗಿನಿಂದ ನೇಮಕಗೊಂಡಿದ್ದ ಕಾವಲುಗಾರರು. ಎಂದಿನಂತೆ ನಿನ್ನೆ ರಾತ್ರಿ ನವವೃಂದಾವನ ಗಡ್ಡೆ ಕಾಯಲು ಕಾವಲುಗಾರರು ಹೋಗಿದ್ದರು.

ಬೆಳಗ್ಗೆ ಆಗುವುದರೊಳಗೆ ನದಿಗೆ 1.30 ಲಕ್ಷ ಕ್ಯೂಸೆಕ್ ಬಿಡಲಾಗಿದೆ. ನೀರಿನ ರಭಸದ ಹಿನ್ನೆಲೆಯಲ್ಲಿ ವಾಪಾಸ್ ಆನೆಗೊಂದಿಗೆ ಬರಲಾರದೆ ಪರದಾಟ ನಡೆಸಿದ್ದಾರೆ. ಬೋಟ್ ಮೂಲಕ ಕಾವಲುಗಾರರನ್ನು ಕರೆತರುವ ಪ್ರಯತ್ನ ಮುಂದುವರಿದಿದೆ.

ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸುಮಾರು ೨೦೦ ಪ್ರವಾಸಿಗರು ಸಿಲುಕಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡಲಾಗಿದೆ. ‌ಗಡ್ಡೆಯಲ್ಲಿ ವಿದೇಶಿಯರು ಸೇರಿದಂತೆ ಸುಮಾರು ೨೦೦ ಕ್ಕೂ ಅಧಧಿಕ ಪ್ರವಾಸಿಗರು ಆಗಮಿಸಿದ್ದರು.

ವೀಕ್ ಎಂಡ್ ಮೂರು ದಿನದ ರಜೆ ಇರುವುದರಿಂದ ಹೊರ ರಾಜ್ಯದಿಂದಲೂ ಪ್ರವಾಸಿಗರು ಆಗಮಿಸಿದ್ದಾರೆ. ಆದರೆ ನದಿಗೆ ನೀರು ಬಿಡುವ ಮುನ್ಸೂಚೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಪ್ರವಾಸಿಗರ ಕಾರು, ಬೈಕ್ ಸೇರಿದಂತೆ ವಾಹನಗಳನ್ನು ನಡುಗಡ್ಡೆಯಿಂದ ಹೊರಗೆ ಸಾಗಿಸಲಾಗಿದೆ.

ಪ್ರವಾಸಿಗರು ಸುರಕ್ಷಿತವಾಗಿದ್ದು, ವಾಪಾಸ್ ತೆರಳಬೇಕು ಎನ್ನುವರಿಗೆ ಬೋಟ್ ಮೂಲಕ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ