ಆ್ಯಪ್ನಗರ

ಉಜ್ವಲ ಗ್ಯಾಸ್‌ ಕಿಟ್‌ ಸಾಲ ಮನ್ನಾಕ್ಕೆ ಆಗ್ರಹ

ಉಜ್ವಲ ಗ್ಯಾಸ್‌ ಕಿಟ್‌ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ, ಜಿಲ್ಲಾ ಕಾಂಗ್ರೆಸ್‌ ಪಕ್ಷದ ನಾನಾ ಘಟಕದ ಕಾರ್ಯಕರ್ತರು ನಗರದ ಸಾಹಿತ್ಯ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 14 Aug 2018, 5:00 am
ಕೊಪ್ಪಳ ; ಉಜ್ವಲ ಗ್ಯಾಸ್‌ ಕಿಟ್‌ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ, ಜಿಲ್ಲಾ ಕಾಂಗ್ರೆಸ್‌ ಪಕ್ಷದ ನಾನಾ ಘಟಕದ ಕಾರ್ಯಕರ್ತರು ನಗರದ ಸಾಹಿತ್ಯ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web KPL-KPL13PHOTO12


ಕೇಂದ್ರದ ಮೋದಿ ಸರಕಾರ ಕೇವಲ ಸುಳ್ಳುಗಳನ್ನೇ ಹೇಳುತ್ತಿದೆ ಎನ್ನುವುದಕ್ಕೆ ಉಜ್ವಲ ಉಚಿತ ಎಲ್‌ಪಿಜಿ ಗ್ಯಾಸ್‌ ಕಿಟ್‌ ವಿತರಣೆ ಸಾಕ್ಷಿಯಾಗಿದೆ. ಕೇಂದ್ರ ಸ್ರಕಾರ 5 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಸಾವಿರಾರು ಕೋಟಿ ರೂ.ಗಳನ್ನು ವ್ಯಯ ಮಾಡಿ ಬ್ಯಾನರ್‌, ಜಾಹೀರಾತು ನೀಡಿದೆ. ಆದರೆ, ಎಲ್‌ಪಿಜಿ ಸಿಲಿಂಡರ್‌ ಸಬ್ಸಿಡಿ ಬಿಟ್ಟಿರುವ ಹಣವನ್ನು ಪೋಲು ಮಾಡಿದ್ದಾರೆ. ಫಲಾನುಭವಿಯ ಖಾತೆಗೆ ಸಾಲವನ್ನಾಗಿ ಪರಿಗಣಿಸಿ, ಅವರ ಸಬ್ಸಿಡಿ ಹಣದಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳುತ್ತಿರುವ ಮೋಸವನ್ನು ಜನರಿಗೆ ತಿಳಿಸಬೇಕು. ದೇಶದ ಜನರನ್ನು ಕ್ಷಮೆ ಕೇಳಬೇಕು. ಕೂಡಲೇ ಉಜ್ವಲ ಗ್ಯಾಸ್‌ ಕಿಟ್‌ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಗೊಂಡಬಾಳ, ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ, ಶಿವಾನಂದ ಹೊದ್ಲೂರು, ಶಬ್ಬೀರ್‌ ಸಿದ್ದಿಖಿ, ಆನಂದ ಗೊಂಡಬಾಳ, ಹನುಮಂತ ಡಂಬ್ರಳ್ಳಿ, ಮೋಹನ್‌ ಮ್ಯಾಗೇರಿ, ಪವನ್‌, ರಾಮಕೃಷ್ಣ, ನಾಗರಾಜ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ