ಆ್ಯಪ್ನಗರ

ಹಕ್ಕುಪತ್ರ-ಪುನರ್‌ ವಸತಿಗಾಗಿ ಮತದಾನ ಬಹಿಷ್ಕಾರ ನಿರ್ಧಾರ

ಸರಕಾರಿ ಜಾಗದಲ್ಲಿ ಅಂದಾಜು 5 ದಶಕಗಳಿಂದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಕುಟುಂಬಸ್ಥರಿಗೆ ಹಕ್ಕುಪತ್ರ ನೀಡದ ಪರಿಣಾಮ ಮೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ತಾಲೂಕು ಸಮೀಪದ ಹನುಮನಹಳ್ಳಿ ಮತ್ತು ವಿರುಪಾಪುರ ಗಡ್ಡಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

Vijaya Karnataka 27 Apr 2018, 5:00 am
ಗಂಗಾವತಿ : ಸರಕಾರಿ ಜಾಗದಲ್ಲಿ ಅಂದಾಜು 5 ದಶಕಗಳಿಂದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಕುಟುಂಬಸ್ಥರಿಗೆ ಹಕ್ಕುಪತ್ರ ನೀಡದ ಪರಿಣಾಮ ಮೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ತಾಲೂಕು ಸಮೀಪದ ಹನುಮನಹಳ್ಳಿ ಮತ್ತು ವಿರುಪಾಪುರ ಗಡ್ಡಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.
Vijaya Karnataka Web KPL-KPL26GVT03


ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಹನುಮನಹಳ್ಳಿ ಗ್ರಾಮದ 120 ಕುಟುಂಬ ಹಾಗೂ ವಿರುಪಾಪುರ ಗಡ್ಡೆ ನಿರಾಶ್ರಿತರು ಈ ನಿರ್ಧಾರ ಕೈಗೊಂಡಿದ್ದಾರೆ. ಸರಕಾರದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ನಾನಾ ಸೌಲಭ್ಯ, ವಾರ್ಡ್‌, ಕಾಲೊನಿಗಳ ಅಭಿವೃದ್ಧಿ ಕುಂಠಿತವಾಗಿರುವ ಕಾರಣ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಕಂದಾಯ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಈ ಸಲ ಚುನಾವಣೆಗೆ ಸಾಮೂಹಿಕವಾಗಿ ಮತದಾನ ಬಹಿಷ್ಕಾರ ಹಾಕಲಾಗುವುದು ಎಂದು ತಿಳಿಸಿದರು.

ತಗಡಿನ ಶೆಡ್‌ ನಿರ್ಮಿಸಿಕೊಂಡು ಹನುಮನಹಳ್ಳಿ ಗ್ರಾಮದಲ್ಲಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳಿಗೆ ಜಿಲ್ಲಾಡಳಿತ ಹಕ್ಕು ಪತ್ರ ವಿತರಣೆ ಮಾಡಬೇಕು. ಅಲ್ಲದೇ ಸಣಾಪುರ ಗ್ರಾ.ಪಂ.ವ್ಯಾಪ್ತಿಯ ವಿರುಪಾಪುರ ಗಡ್ಡೆ ಗ್ರಾಮದ ನಿವಾಸಿಗಳನ್ನು ತೆರವು ಮಾಡಲಾಗಿದ್ದು, 72 ಕ್ಕೂ ಹೆಚ್ಚು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು. ನಮ್ಮ ಬೇಡಿಕೆಗಳಿಗಾಗಿ ಕಂದಾಯ ಇಲಾಖೆ ಮುಂದೆ ತಿಂಗಳ ಕಾಲ ಧರಣಿ ಸತ್ಯಾಗ್ರಹ ನಡೆಸಾಗಿತ್ತು. ಆದರೂ ಪ್ರಯೋಜವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿ, ದೂರು ಸಲ್ಲಿಸಿದರೂ ಕ್ಯಾರೇ ಮಾಡಿಲ್ಲ. ಮತದಾನ ಮಾಡುವುದು ನಮ್ಮ ಹಕ್ಕಾಗಿದ್ದರು, ನಮ್ಮ ಬೇಕು ಬೇಡಿಕೆಗಳ ಹಿನ್ನೆಲೆಯಲ್ಲಿ ಈ ಬಾರಿಯ ಮತದಾನ ಮಹಿಷ್ಕಾರ ಮಾಡಲಾಗುವುದು ಎಂದು ಮೀನುಗಾರ ಪರಶುರಾಮ, ರಂಗಪ್ಪ ಹಾಗೂ ಬಂಗಾರಪ್ಪ, ಪೀಕಾ ನಾಯಕ ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ