ಆ್ಯಪ್ನಗರ

ಲಾಕ್‌ಡೌನ್‌ ಎಫೆಕ್ಟ್‌: ಕೊಪ್ಪಳದಲ್ಲಿ ಎಣ್ಣೆ ಸಿಗದೇ ಬಾರ್‌ಗೆ ಕನ್ನ ಹಾಕಿದ ಕುಡುಕರು

ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರಕಾರ ಏನೋ 21 ದಿನಗಳ ಕಾಲ ಲಾಕ್‌ಡೌನ ಘೋಷಿಸಿದೆ. ಆದರೆ, ಕುಡುಕರ ಕಷ್ಟ ಕೇಳೋರ‍್ಯಾರು. ಮದ್ಯ ನಿಷೇಧದಿಂದ ಒಂದು ಕಡೆ ಆತ್ಮಹತ್ಯೆಗಳಾಗುತ್ತಿದ್ದರೆ ಮತ್ತೊಂದು ಕಡೆ ಬಾರ್‌ಗಳಿಗೆ ಕನ್ನ ಹಾಕಿ ಬಾಟಲಿಗಳನ್ನು ಕದಿಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

Vijaya Karnataka Web 5 Apr 2020, 4:28 pm
ಕೊಪ್ಪಳ: ಲಾಕ್‌ಡೌನ್‌ ಹಿನ್ನೆಲೆ ಸರಕಾರ ಮದ್ಯ ನಿಷೇಧಿಸಿರುವುದರಿಂದ ಪಾನಪ್ರಿಯರಿಗೆ ಕೈಕಟ್ಟಿ ಹಾಕಿದಂತಾಗಿದ್ದು, ಎಣ್ಣೆಗಾಗಿ ಸರ್ಕಸ್‌ ಮಾಡುವಂತಾಗಿದೆ. ಇದರಿಂದ ಮದ್ಯಕ್ಕಾಗಿ ಬಾರ್‌ಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚುತ್ತಿದ್ದು, ಇಂಥದ್ದೇ ಒಂದು ಘಟನೆ ಕೊಪ್ಪಳದಲ್ಲೂ ನಡೆದಿದೆ.
Vijaya Karnataka Web LIQUOR


ನಗರದ ಎಪಿಎಂಸಿ ಮಾರುಕಟ್ಟೆ ಎದುರುಗಡೆಯಿರುವ ಬಾರ್ ಹಿಂಬಾಗಿಲು ಮುರಿದು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಲಾಗಿದೆ. ಬಾರ್‌ ಹಿಂಬದಿಯಿರುವ ಕಟ್ಟಿಗೆಯ ಬಾಗಿಲಿಗೆ ಬೆಂಕಿ ಹಚ್ಚಿರುವ ಖದೀಮರು, ಬಾಗಿಲು ಸುಟ್ಟ ಬಳಿಕ, ಕಿಂಡಿ ಮಾಡಿ ಒಳ ನುಗ್ಗಿ 8 ಪಿಎಂ, ಕಿಂಗ್‌ಫಿಶರ್ ಸ್ಟೋರ್ಮ್ ಸೇರಿ ಸಾವಿರಾರು ರೂ. ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆ ಮದ್ಯ ಸಿಗದಿದ್ದರಿಂದ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 50 ಸಾವಿರ ರೂ. ಮೌಲ್ಯದ ಮದ್ಯ ಕಳ್ಳತನವಾಗಿದೆ ಎನ್ನಲಾಗಿದೆ.. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ಸ್ವಲ್ಪ ರಿಲೀಫ್‌, ಎಡದಂಡೆ ಕಾಲುವೆಗೆ ಏ.15ರವರೆಗೆ ನೀರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ