ಆ್ಯಪ್ನಗರ

ವೃಂದಾವನ ಧ್ವಂಸ ಪ್ರಕರಣ: ಹಣಕಾಸು ನೆರವು ನೀಡಿದ್ದ ಪ್ರಮುಖ ಆರೋಪಿ ಅರೆಸ್ಟ್

ದುಷ್ಕರ್ಮಿಗಳು ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನದಲ್ಲಿ ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಿದ್ದರು.

Vijaya Karnataka Web 30 Jul 2019, 1:51 pm
ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನದ ಶ್ರೀ ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ನೆರವು ನೀಡಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ರೆಡ್ಡಿ ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
Vijaya Karnataka Web vrundavay


ದುಷ್ಕರ್ಮಿಗಳಿಂದ ವ್ಯಾಸರಾಜರ ವೃಂದಾವನ ಧ್ವಂಸ

ನವವೃಂದಾವನದಲ್ಲಿ ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣ ಜುಲೈ 18 ರಂದು‌ ಬೆಳಕಿಗೆ ಬಂದಿತ್ತು. ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದರು. ಮೊದಲ ಬಾರಿಗೆ 8 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.

ಆದರೆ ಇಡೀ ಪ್ರಕರಣಕ್ಕೆ‌ ಹಣಕಾಸು ನೆರವು ನೀಡಿದ ಪ್ರಮುಖ ಆರೋಪಿ ಆಂಧ್ರ ಪ್ರದೇಶದ ತಾಡಪತ್ರಿಯ ಶ್ರೀನಿವಾಸ್ ರೆಡ್ಡಿ ತಲೆಮರೆಸಿಕೊಂಡಿದ್ದನು. ಸಿಕಂದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದು, ಗಂಗಾವತಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ