Gavisiddeshwara Swamiji: ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಎದುರು ಬುದ್ಧಿಮಾಂದ್ಯಳ ಅದ್ಭುತ ಮಾತು ಕೇಳಿ!

Vijaya Karnataka Web 10 Jan 2023, 10:25 am
ಕೊಪ್ಪಳ: ಅಜ್ಜಾರ ನಾನು ನಿಮ್ಮ ಬಗ್ಗೆ ಮಾತನಾಡುತ್ತೀನಿ.. ಏ ಬ್ಯಾಡ ನಿನ್ನ ಬಗ್ಗೆ ಮಾತಾಡು.. ನೀವು ಎಲ್ಲಾ ಕೊಟ್ಟಿರಿ... ಇಂಥ ಭಕ್ತರಿದ್ದರ ಹಾಸ್ಟೆಲ್ ಯಾಕ ಆಗೋದಿಲ್ಲ … ಈ ಸಂಭಾಷಣೆ ನೆರೆದಿದ್ದ ಲಕ್ಷಾಂತರ ಜನರ ಮಧ್ಯೆ ಬುದ್ಧಿಮಾಂದ್ಯ ಯುವತಿ ಹಾಗು ಗವಿಮಠದ ಗವಿಸಿದ್ದೇಶ್ವರ ಸ್ವಾಮಿಗಳ ಮಧ್ಯೆ ವೇದಿಕೆಯಲ್ಲಿ ನಡೆದಿದೆ. ತಮ್ಮ ಮಾತಿನ ನಡುವೆ ಬುದ್ಧಿಮಾಂದ್ಯಳಿಗೆ ಮಾತನಾಡಲು ಅವಕಾಶ ನೀಡಿ ಮಕ್ಕಳು, ಜನರ ಬಗ್ಗೆ ತಮ್ಮ ಕಾಳಜಿಯನ್ನು ಮತ್ತೊಮ್ಮೆ ಪ್ರಸ್ತುತಪಡಿಸಿದರು.

ಕೊಪ್ಪಳದ ಗವಿಮಠದ ಜಾತ್ರೆಯ ಕೈಲಾಸ ಮಂಟಪ ವೇದಿಕೆಯಲ್ಲಿ ಬುದ್ದಿಮಾಂದ್ಯ ಯುವತಿಯ ಬುದ್ದಿವಂತಿಕೆಯ ಮಾತುಗಳಿಗೆ ಎಲ್ಲರೂ ಅಚ್ಚರಿ ಪಡುವಂತಾಯಿತು. ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡುವಾಗ ವೇದಿಕೆ ಏರಿ ಬಂದಾಕೆ ನಾನು ಮಾತನಾಡುತ್ತೇನೆ ಎಂದಾಗ ಯುವತಿಗೆ ಮೈಕ್ ಬಿಟ್ಟುಕೊಟ್ಟರು. ಕೊಪ್ಪಳ ತಾಲೂಕಿನ ಹಿರೇಸೂಳಿಕೇರಿಯ ಪವಿತ್ರ ಎಂಬಾಕೆಯ ಮಾತುಗಳಿಗೆ ಜನರು ಭೇಷ್ ಎಂದರು.

ಗವಿಸಿದ್ದೇಶ್ವರ ಮಹಾರಾಜ್‌ಕೀ ಜೈ ಎಂದು ಮಾತು ಆರಂಭಿಸಿದ ಯುವತಿ, ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೇ, ತಂದೆ ತಾಯಿಗಳೇ ಎಲ್ಲರಿಗೂ ನಮಸ್ಕಾರ. ಅಜ್ಜ ಎಲ್ಲ ಎಲ್ಲದನ್ನೂ ಮಾಡಿದ್ದಾನೆ. ಅನ್ನದಾನ, ವಿದ್ಯಾದಾನ ಮಾಡಿದ್ದಾನೆ. ಬಾಳೆಹಣ್ಣು ದೇವಸ್ಥಾದಿಂದ ಕೊಡುವಾಗ ಬಾಳೆ ಹಣ್ಣು ಅನ್ನಲ್ಲ ಪ್ರಸಾದ ಅಂತೀವಿ. ದುಡ್ಡು ಇರಲಾರದವರು ದೊಡ್ಡವರಲ್ಲ, ಮನಸು ದೊಡ್ಡದಿದ್ದವರು ದೊಡ್ಡವರು. ನನಗೆ ಖುಷಿಯಾಗಿದೆ ಎಂದು ತನ್ನಲ್ಲಿದ್ದ ಹಣವನ್ನು ಶಾಲೆ ಕಟ್ಟೋಕೆ ಪ್ರೇಮಕ್ಕೆ ಕೊಟ್ಟಿನಿ ಎಂದು ಭಕ್ತಿಯ ಯುವತಿ ಕಾಣಿಕೆ ಅರ್ಪಿಸಿದಳು.
Loading ...