ಆ್ಯಪ್ನಗರ

ನೂರೆಂಟು ಸಮಸ್ಯೆಯಲ್ಲಿ ‘ಮರಕಟ್‌’

ಕುಡಿವ ನೀರು, ರಸ್ತೆ, ಚರಂಡಿ, ಕೈ ಪಂಪ್‌, ಶೌಚಾಲಯ ಸೇರಿದಂತೆ ನಾನಾ ಮೂಲ ಸೌಲಭ್ಯಗಳಿಂದ ತಾಲೂಕಿನ ತಾಳಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕಟ್‌ ಗ್ರಾಮಸ್ಥರು ವಂಚಿತರಾಗಿದ್ದಾರೆ.

Vijaya Karnataka 18 Oct 2018, 5:00 am
ಯಲಬುರ್ಗಾ : ಕುಡಿವ ನೀರು, ರಸ್ತೆ, ಚರಂಡಿ, ಕೈ ಪಂಪ್‌, ಶೌಚಾಲಯ ಸೇರಿದಂತೆ ನಾನಾ ಮೂಲ ಸೌಲಭ್ಯಗಳಿಂದ ತಾಲೂಕಿನ ತಾಳಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಕಟ್‌ ಗ್ರಾಮಸ್ಥರು ವಂಚಿತರಾಗಿದ್ದಾರೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸದ್ಯ ಮೂಲ ಸೌಲಭ್ಯಗಳಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಗ್ರಾಮದಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಸದ್ಯ ಶುರುವಾಗಿದೆ. ಚರಂಡಿ, ರಸ್ತೆ, ಕೈ ಪಂಪ್‌ಗಳು ಹಾಳಾಗಿವೆ. ಆದರೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮೌನ ವಹಿಸಿದೆ. ಇನ್ನು ಕ್ಷೇತ್ರದ ಜನಪ್ರತಿನಿಧಿಗಳು ಮಾತ್ರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
Vijaya Karnataka Web woodcut in a nose problem
ನೂರೆಂಟು ಸಮಸ್ಯೆಯಲ್ಲಿ ‘ಮರಕಟ್‌’


ಅಪೂರ್ಣ ಕಾಮಗಾರಿ: ಗ್ರಾಮದಿಂದ ಗಾಣದಾಳಗೆ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಮಾರ್ಗದ ಮೂಲಕ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಓಡಾಡಲು ತೊಂದರೆ ಉಂಟಾಗಿದೆ. ಈ ಮಾರ್ಗದ ರಸ್ತೆ ಡಾಂಬರೀಕರಣ ಕೈಗೊಂಡಿದ್ದು, 2 ಕಿ.ಮೀ.ವರೆಗೆ ರಸ್ತೆ ಕಾಮಗಾರಿ ನಡೆಸಿದ್ದಾರೆ. ರಸ್ತೆ ಕಾಮಗಾರಿ ಪೂರ್ಣಗೊಳಿಸದ ಪರಿಣಾಮ ಸಮಸ್ಯೆ ಉಂಟಾಗಿದೆ. ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

ಕುಡಿವ ನೀರು ಕಲ್ಪಿಸಿ: ಗ್ರಾಮದಲ್ಲಿ ನಾನಾ ಕಡೆಗಳಲ್ಲಿ ಅಳವಡಿಸಿದ ಕಿರು ನೀರು ಸರಬರಾಜು ಟ್ಯಾಂಕರ್‌ಗೆ ನೀರು ಪೂರೈಕೆಯಾಗುತ್ತಿಲ್ಲ. ಕೈ ಪಂಪ್‌ ದುರಸ್ತಿಗೆ ಕಾದಿವೆ. ಕುಡಿವ ನೀರಿನ ತೊಟ್ಟಿಯಲ್ಲಿ ನೀರು ಇರದ ಪರಿಣಾಮ ಜನ ಹಾಗೂ ಜಾನುವಾರುಗಳಿಗೆ ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ ಕುಡಿವ ನೀರಿಗೆ ಅಭಾವ ಉಂಟಾಗಿದ್ದು, ಸಾರ್ವಜನಿಕರು ತೋಟಗಳಿಗೆ ಬಂಡಿ, ಟ್ರ್ಯಾಕ್ಟರ್‌, ವಾಹನ, ದ್ವಿಚಕ್ರವಾಹಗಳ ಮೂಲಕ ನೀರು ತರುವ ಅನಿವಾರ್ಯತೆ ನಿರ್ಮಾಣವಾಗಿದೆ. ಗ್ರಾಮಕ್ಕೆ ಕೂಡಲೇ ಕುಡಿವ ನೀರು ಸೇರಿದಂತೆ ನಾನಾ ಮೂಲ ಸೌಕರ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

====

ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರು ತೋಟಗಳಿಗೆ ತೆರಳಿ ನೀರು ತರುವಂತಾಗಿದೆ. ಕ್ಷೇತ್ರದ ಜನಪ್ರತಿನಿಧಿಗಳು, ಕುಡಿವ ನೀರು ಕಲ್ಪಿಸಬೇಕು.

-ಷಣ್ಮುಖಪ್ಪ ಬಳ್ಳಾರಿ, ತಾ.ಪಂ.ಸದಸ್ಯರು, ತಾಳಕೇರಿ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ