ಆ್ಯಪ್ನಗರ

ಚೆಲುವನಿಗೆ ಮಹಾಭಿಷೇಕ

ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಚೆಲುವ ನಾರಾಯಣ ಸ್ವಾಮಿಗೆ ಮಹಾಭಿಷೇಕ ವೈಭವದಿಂದ ನೆರವೇರಿತು.

Vijaya Karnataka Web 26 Mar 2016, 5:09 am
ಮೇಲುಕೋಟೆ: ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಚೆಲುವ ನಾರಾಯಣ ಸ್ವಾಮಿಗೆ ಮಹಾಭಿಷೇಕ ವೈಭವದಿಂದ ನೆರವೇರಿತು.
Vijaya Karnataka Web
ಚೆಲುವನಿಗೆ ಮಹಾಭಿಷೇಕ

ವೈರಮುಡಿ ಮತ್ತು ಕೃಷ್ಣರಾಜಮುಡಿ ಜಾತ್ರೆಗಳಲ್ಲಿ ಎರಡು ಸಲ ಮಾತ್ರ ಮಹಾಭಿಷೇಕ ನೆರವೇರುವುದು ವಿಶೇಷ. ಇಡೀ ದೇವಾಲಯವನ್ನು ಶುಚಿಗೊಳಿಸಿ ಮಹಾಭಿಷೇಕಕ್ಕೆ ಸಿದ್ಧತೆ ಮಾಡಲಾಗಿತ್ತು.
ಉತ್ಸವ ಮೂರ್ತಿ ಚೆಲುವ ನಾರಾಯಣ ಸ್ವಾಮಿ ಮತ್ತು ಆಚಾರ್ಯ ರಾಮಾನುಜರಿಗೂ ಮಹಾಭಿಷೇಕ ನಡೆ ದವು. ಬಳಿಕ ರಾತ್ರಿ ಪುಷ್ಪಯಾಗ, ಧ್ವಜಾ ರೋಹಣ ನಂತರ ಹನುಮಂತ ವಾಹ ನೋತ್ಸವದ ವೇಳೆ ಕತ್ತಲು ಪ್ರದಕ್ಷಿಣೆ ನೆರವೇರುವುದರೊಂದಿಗೆ ಹತ್ತನೇ ತಿರುನಾಳ್‌ನ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾದವು. ಭಕ್ತರಿಗೆ ಸಂಜೆ ವರೆಗೆ ದೇಗುಲ ಪ್ರವೇಶವಿರಲಿಲ್ಲ. ಅರಿ ಷಿಣ ಅಲಂಕಾರ ಮತ್ತು ಉತ್ಸವ ಮೂರ್ತಿ ಚೆಲುವನಾರಾಯಣಸ್ವಾಮಿ ಅಭಿಷೇಕ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಕೃಷ್ಣ-ಬಲರಾಮರು ಚೆಲುವ ರಾಯಸ್ವಾಮಿಯನ್ನು ಆರಾಧಿಸಿದ ಪ್ರತೀಕವಾಗಿ ಮಾ.26ರಂದು ಶೇರ್ತಿಸೇವೆ ನಡೆಯಲಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಮೂಲಮೂರ್ತಿಯೊಂದಿಗೆ ಉತ್ಸವ ಮೂರ್ತಿ ಪೂಜೆಗೊಳ್ಳುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ