ಆ್ಯಪ್ನಗರ

ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ

ಕೆಆರ್‌ಎಸ್ ಜಲಾಶಯದಿಂದ ಜು.11 ರಂದು ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡುವ ಹಿನ್ನ್ನೆಲೆಯಲ್ಲಿ ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ರಾಜಕೀಯ ಪಕ್ಷಗಳ ನಾಯಕರು, ಚಳವಳಿಗಾರರೂ ಹಾಗೂ ರೈತರು ಶಾಂತಿಗೆ ಭಂಗವಾಗದಂತೆ ಸಹಕರಿಸಬೇಕು ಎಂದು ಸಿಪಿಐ ಎಂ.ಚಂದ್ರಶೇಖರ್ ಮನವಿ ಮಾಡಿದರು.

Vijaya Karnataka Web 9 Jul 2017, 5:15 am
ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ಜು.11 ರಂದು ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡುವ ಹಿನ್ನ್ನೆಲೆಯಲ್ಲಿ ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ರಾಜಕೀಯ ಪಕ್ಷಗಳ ನಾಯಕರು, ಚಳವಳಿಗಾರರೂ ಹಾಗೂ ರೈತರು ಶಾಂತಿಗೆ ಭಂಗವಾಗದಂತೆ ಸಹಕರಿಸಬೇಕು ಎಂದು ಸಿಪಿಐ ಎಂ.ಚಂದ್ರಶೇಖರ್ ಮನವಿ ಮಾಡಿದರು.
Vijaya Karnataka Web
ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ


ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಕಾವೇರಿ ತೀರ್ಪು ಹಿನ್ನೆಲೆಯಲ್ಲಿ ಶನಿವಾರ ನಡೆದ ರಾಜಕೀಯ ಮುಖಂಡರು, ನಾನಾ ಕನ್ನಡ ಪರ ಸಂಘಟನೆಗಳ ಕಾರ‌್ಯಕರ್ತರು ಹಾಗೂ ರೈತ ಚಳವಳಿಗಾರರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುವಂತೆ ತಮಿಳುನಾಡು ಸರಕಾರ ನ್ಯಾಯಾಲಯ ಮೊರೆ ಹೋಗಿದೆ. ಅಂದು ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂಬುದು ತಿಳಿಯದು ಒಂದು ವೇಳೆ ವ್ಯತಿರಿಕ್ತ ತೀರ್ಪು ನೀಡಿದರೂ, ಶಾಂತಿಯುತ ಹೋರಾಟ ನಡೆಸಬೇಕು. ವಾಹನಗಳಿಗೆ ಕಲ್ಲು ತೂರುವುದು, ಬೆಂಕಿ ಹಾಕುವುದು, ಆಸ್ತಿ, ಪಾಸ್ತಿ ನಷ್ಟ ಉಂಟು ಮಾಡುವ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಕೋರಿದರು.

ಪಿಎಸ್‌ಐ ಅಜರುದ್ದೀನ್, ಎಎಸ್‌ಐ ಅಣ್ಣೇಗೌಡ, ರೈತಸಂಘ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ನಾನಾ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ