ಆ್ಯಪ್ನಗರ

​ ಪೌರ ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸಿ

ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಪೌರಕಾರ್ಮಿಕರಿಗೂ ಸರಕಾರ ಮೂಲಸೌಲಭ್ಯ ಮತ್ತು ಸೌಕರ್ಯ ಕಲ್ಪಿಸಬೇಕು ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಒತ್ತಾಯಿಸಿದರು.

ವಿಕ ಸುದ್ದಿಲೋಕ 20 Aug 2017, 5:15 am
ಮಂಡ್ಯ: ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಪೌರಕಾರ್ಮಿಕರಿಗೂ ಸರಕಾರ ಮೂಲಸೌಲಭ್ಯ ಮತ್ತು ಸೌಕರ್ಯ ಕಲ್ಪಿಸಬೇಕು ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಒತ್ತಾಯಿಸಿದರು.
Vijaya Karnataka Web
​ ಪೌರ ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸಿ


ನಗರದ ಗಾಂಧಿಭವನದಲ್ಲಿ ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ(ಪೌರಕಾರ್ಮಿಕರ) ಬಳಗ ಶನಿವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಸಿಗಬೇಕಿರುವ ಮೂಲಭೂತ ಹಕ್ಕುಗಳನ್ನೇ ಸರಕಾರಗಳು ನೀಡದೆ ದುಡಿಸಿಕೊಳ್ಳುತ್ತಿರುವುದು ಸರಿಯಲ್ಲ, ನ್ಯಾಯವಾಗಿ ಸಿಗಬೇಕಿರುವ ಸವಲತ್ತುಗಳನ್ನು ಗ್ರಾ.ಪಂ. ಅಧಿಕಾರಿಗಳು ನೀಡುವಂತೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಸಂಘಟಿತರಾಗಿ ಸರಕಾರದ ಸೌಲಭ್ಯಪಡೆದುಕೊಳ್ಳಲು ಹೋರಾಟ ನಡೆಸಬೇಕು. ನಿಮ್ಮ ನೋವುಗಳನ್ನು ಸಹಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನಿಮ್ಮ ಬೇಡಿಕೆಗಳು ಸರಕಾರಕ್ಕೆ ತಲುಪುವಂತೆ ನೋಡಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಹಾಗೆಯೇ ನಿಜವಾದ ಸಮಾಜಸೇವೆ ಮಾಡುತ್ತಿರುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡೋಣ ಎಂದರು.

ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ(ಪೌರಕಾರ್ಮಿಕರ) ಬಳಗದ ರಾಜ್ಯಾಧ್ಯಕ್ಷ ಮಣಿಕಂಠರಾಜ್‌ಪ್ರಸಾದ್, ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕೂಡಲೇ ಖಾಯಂ ಮಾಡಬೇಕಿದೆ. ಮೂಲಭೂತ ಸೌಕರ್ಯದೊಂದಿಗೆ ವೇತನ ಹೆಚ್ಚಳ ಮಾಡಿ ನೌಕರರಂತೆ ಕಾಣಬೇಕಿದೆ. ದಿನಗೂಲಿಯಲ್ಲಿ ಕಾರ್ಯ ಮಾಡುತ್ತಿರುವರಿಗೆ ಮಾನಸಿಕ ಕಿರುರುಳ ನಿಲ್ಲಬೇಕಿದೆ. ದೌರ್ಜನ್ಯ ಹೆಚ್ಚಳವಾಗಿದ್ದರೂ ಸರಕಾರ ರಕ್ಷಣೆ ನೀಡಲು ವಿಫಲವಾಗಿದೆ ಎಂದು ಕಿಡಿಕಾರಿದರು.

ಇನ್ನೂ 20 ಸರಕಾರಗಳು ಬಂದರೂ ಗ್ರಾಮೀಣ ಭಾಗದ ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ಲಭಿಸುವುದಿಲ್ಲ. ನೀವು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ಹೀಗೆ ಜೀತಮಾಡಿಕೊಂಡು ನೋವಿನಲ್ಲೇ ಬದುಕಬೇಕಾಗುತ್ತದೆ ಎಂದರು.
ನಾನಾ ಗ್ರಾ.ಪಂ.ಗಳ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಿಗಳನ್ನು ಅಭಿನಂದಿಸಲಾಯಿತು. ಬಳಗದ ಜಿಲ್ಲಾಧ್ಯಕ್ಷ ಗಣೇಶ್, ಜೆಡಿಎಸ್ ಮುಖಂಡ ಚಿಕ್ಕಣ್ಣ, ಸುರೇಶ್, ಎಡ್ವಿನ್ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ