ಆ್ಯಪ್ನಗರ

ಮಂಡ್ಯದಲ್ಲಿ ಮೂವರು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ!

ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಮಹಾಮಾರಿ ಜನರನ್ನು ಕಾಡುತ್ತಿದೆ. ಮತ್ತೊಂದೆಡೆ ಕೊರೊನಾ ಸೋಂಕಿತ ಮೂವರು ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ಅಷ್ಟೂ ಮಂದಿಯೂ ಹೆಣ್ಣು ಮಕ್ಕಳೇ ಜನಿಸಿವೆ.

Vijaya Karnataka Web 2 Jul 2020, 10:41 pm
ಮಂಡ್ಯ: ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಮಹಾಮಾರಿ ಜನರನ್ನು ಕಾಡುತ್ತಿದೆ. ಮತ್ತೊಂದೆಡೆ ಕೊರೊನಾ ಸೋಂಕಿತ ಮೂವರು ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ಅಷ್ಟೂ ಮಂದಿಯೂ ಹೆಣ್ಣು ಮಕ್ಕಳೇ ಜನಿಸಿವೆ.
Vijaya Karnataka Web childbirth mandya


ಮಳವಳ್ಳಿ ತಾಲೂಕು ದಡದಪುರ ಗ್ರಾಮದ 28 ವರ್ಷದ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲೂಕು ಆಲಗೂಡು ಗ್ರಾಮದ 24 ವರ್ಷದ ಮಹಿಳೆಗೆ ಶಸಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಗಿದೆ. ಇನ್ನು ನೆರೆಯ ಮೈಸೂರು ಜಿಲ್ಲೆ ಬನ್ನೂರು ಗ್ರಾಮದ 26 ವರ್ಷದ ಮಹಿಳೆಗೆ ಸಾಮಾನ್ಯ ಹೆರಿಗೆಯಾಗಿದ್ದು, ಈಕೆಗೆ ಇದು ಎರಡನೇ ಹೆರಿಗೆಯಾಗಿದೆ.

ಕಳೆದ ಮೂರು ದಿನಗಳ ಅಂತರದಲ್ಲಿ ಮೂರು ಹೆರಿಗೆಗಳು ಆಗಿವೆ. ಈ ಪೈಕಿ ದಡದಪುರ ಗ್ರಾಮದ ಮಹಿಳೆಗೆ ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. 9 ತಿಂಗಳ ಹಿಂದೆ ಗರ್ಭಿಣಿಯಾಗಿದ್ದ ಈಕೆಯನ್ನು ಹೆರಿಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು. ಹೀಗಾಗಿ ಆಯ್ಕೆಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕರಾವಳಿಯಲ್ಲಿ ಉತ್ತಮ ಮಳೆ: ಜು.5ರವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ!

ಜತೆಗೆ, ಜೂ.1ರಂದು ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಸಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಗಿದೆ. ವೈದ್ಯರಾದ ಡಾ.ಎಸ್.ಯೋಗೇಂದ್ರಕುಮಾರ್, ಡಾ.ವನಸುಮ, ಡಾ.ಜ್ಯೋತಿ ಅವರನ್ನೊಳಗೊಂಡ ತಂಡವು ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ಕೊರೊನಾ ಸೋಂಕಿತರಿಗೆ ವೈದ್ಯರು ಮತ್ತು ನರ್ಸ್‌ಗಳು ತಮ್ಮ ಪ್ರಾಣದ ಹಂಗು ತೊರೆದು ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತ ಮತ್ತೊಂದೆಡೆ ಸೋಂಕಿತ ಮಹಿಳೆಗೆ ಹೆರಿಗೆ ಮಾಡಿಸಿ ಮೆಚ್ಚುಗೆ ಗಳಿಸಿದ್ದಾರೆ.

2000ದ ಗಡಿಯತ್ತ ನುಗ್ಗಿದ ಕೊರೊನಾ ಸಂಖ್ಯೆ: ಸೋಂಕಿನ ಕೂಪವಾಗುತ್ತಿದೆ ಬೆಂಗಳೂರು!

ಹಾಗೆಯೇ ಆಲಗೂಡು ಗ್ರಾಮದ ಮಹಿಳೆಯರಿಗೆ ಜೂ.29ರಂದು, ಬನ್ನೂರು ಮಹಿಳೆಗೆ ಜೂ.27ರಂದು ಹೆರಿಗೆಯಾಗಿದೆ. ಮೂರು ಜನಜಾತ ಹೆಣ್ಣು ಶಿಶುಗಳು ಆರೋಗ್ಯವಾಗಿದ್ದು, ಸದ್ಯಕ್ಕೆ ಈ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿಸಿಲ್ಲ ಎಂದು ಡಿಎಚ್‌ಒ ಡಾ.ಎಚ್.ಪಿ.ಮಂಚೇಗೌಡ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ