ಆ್ಯಪ್ನಗರ

400 ಅಡಿ ಬಾವುಟ, ಕನ್ನಡಮಯ ವಾತಾವರಣ

ವಿಕ ಸುದ್ದಿಲೋಕ ಪಾಂಡವಪುರ ಪಟ್ಟಣದಲ್ಲಿ ಗುರುವಾರ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆಯಿತು...

Vijaya Karnataka Web 23 Mar 2018, 5:00 am
ಪಾಂಡವಪುರ : ಪಟ್ಟಣದಲ್ಲಿ ಗುರುವಾರ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆಯಿತು. ನುಡಿಜಾತ್ರೆ ಅಂಗವಾಗಿ ಏಲ್ಲಿ ನೋಡಿದರೂ ಕನ್ನಡದ ಭಾವುಟಗಳು ರಾರಾಜಿಸುವುದರೊಂದಿಗೆ ಕನ್ನಡಮಯ ವಾತಾವರಣ ನಿರ್ಮಾಣಗೊಂಡಿತ್ತು.
Vijaya Karnataka Web 400 feet flag kannada atmosphere
400 ಅಡಿ ಬಾವುಟ, ಕನ್ನಡಮಯ ವಾತಾವರಣ


ಸಮ್ಮೇಳನದ ಅಂಗವಾಗಿ ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದ ಆವರಣದಲ್ಲಿ ಬೆಳಗ್ಗೆ 8ಕ್ಕೆ ತಹಸೀಲ್ದಾರ್‌ ಡಿ.ಹನುಮಂತರಾಯಪ್ಪ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಚಿನಕುರಳಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ್‌ ನಾಡಧ್ವಜಾರೋಹಣ ಹಾಗೂ ತಾಲೂಕು ಘಟಕದ ಅಧ್ಯಕ್ಷ ಎಂ.ರಮೇಶ್‌ ಬೀರಶೆಟ್ಟಹಳ್ಳಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಬೆಗ್ಗೆ 9ಕ್ಕೆ ಪಟ್ಟಣದ ಐದುದೀಪ ವೃತ್ತದಿಂದ ಹೊರಟ ಸಮ್ಮೇಳನಾಧ್ಯಕ್ಷ ರ ಮೆರವಣಿಗೆಗೆ ಪುರಸಭೆ ಅಧ್ಯಕ್ಷ ತಾಯಮ್ಮ ಅಣ್ಣಯ್ಯ ಚಾಲನೆ ನೀಡಿದರು. ಮೆರವಣಿಗೆಯೂ ಪಟ್ಟಣದ ಮಂಡ್ಯ ವೃತ್ತ, ಚರ್ಚ್‌ ರಸ್ತೆ, ಹಳೇ ಬಸ್‌ನಿಲ್ದಾಣದ, ವಿಜಯಬ್ಯಾಂಕ್‌ ರಸ್ತೆ, ಪೋಸ್ಟ್‌ಆಫೀಸ್‌ ವೃತ್ತ, ಅನಂತರಾಮ್‌ ವೃತ್ತದ ಮೂಲಕ ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ನಿರ್ಮಿಸಿದ ದಿ.ಕೆ.ಎಸ್‌.ಪುಟ್ಟಣ್ಣಯ್ಯ ಹೆಸರಿನ ವೇದಿಕೆಗೆ ಆಗಮಿಸಿತು.

ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಎಂ.ಅಂಕೇಗೌಡರ ಜತೆಯಲ್ಲಿ ಪತ್ನಿ ವಿಜಯಲಕ್ಷ್ಮಿಅಂಕೇಗೌಡ, ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ರವಿಕುಮಾರ್‌ಚಾಮಲಾಪುರ ಸಾಥ್‌ ನೀಡಿದರು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್‌, ತಮಟೆ, ಡೊಳ್ಳುಕುಣಿತ, ವೀರಗಾಸೆ ಕುಣಿತ, ಪೂಜಾಕುಣಿತ, ನಂದಿಕಂಬ ಕುಣಿತ, ಪೂರ್ಣಕುಂಭ ಹೊತ್ತು ಯುವತಿಯರು ಮೆರವಣಿಗೆಯಲ್ಲಿ ಸಾಗುವ ಮೂಲಕ ಮೆರುಗು ನೀಡಿದರು. ಚಿನಕುರಳಿಯ ಜ್ಞಾನವಿಕಾಸ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು 400ಅಡಿ ಕನ್ನಡ ಬಾವುಟ ಹಿಡಿದು ದಾರಿಯುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿದದ್ದವು ವಿಶೇಷವಾಗಿತ್ತು. ಜತೆಗೆ ದೇಶಿಯ ತಳಿ ಹಸು-ಕರು ಹಾಗೂ ಜೋಡಿ ಎತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಸಾಹಿತ್ಯಾಸಕ್ತರ, ಸಾರ್ವಜನಿಕರು ಗಮನ ಸೆಳೆಯಿತು.

ಸಮ್ಮೇಳದ ಅಂಗವಾಗಿ ಟಿಎಪಿಸಿಎಂಎಸ್‌ ಸಭಾಂಗಣದ ಮುಂದೆ ಆಯೋಜಿಸಿದ್ದ ಪುಸ್ತಕ ವೇಳಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್‌ ಚಾಲನೆ ನೀಡಿದರು. ಹಲವು ಬಗೆಯ ಪುಸ್ತಕಗಳನ್ನು ಸಾಹಿತ್ಯಾಸಕ್ತರು ಖರೀದಿಸಿದರು. ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಾಹಿತ್ಯಾಸಕ್ತರಿಗೆ ಮಧ್ಯಾಹದ ಭೋಜನ ವ್ಯವಸ್ಥೆ ಮಾಡಲಾಯಿತು.

ಮಧ್ಯಾಹ್ನ ವಿಚಾರಗೋಷ್ಠಿಗಳು ನಡೆದವು, ವಿಚಾರಗೋಷ್ಠಿಗೆ ಸಾಹಿತಿ ಜಯಪ್ಪ ಹೊನ್ನಾಳಿ ಚಾಲನೆ ನೀಡಿದರು. ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನೀ.ಗಿರೀಗೌಡ ಅಧ್ಯಕ್ಷ ತೆ ವಹಿಸಿದ್ದರು.

ಮೊದಲ ವಿಚಾರಗೋಷ್ಠಿಯಲ್ಲಿ ಎಚ್‌.ಆರ್‌.ತಿಮ್ಮೇಗೌಡ 'ಶ್ರೀ ಸಾಮಾನ್ಯರಿಗಾಗಿ ಸಾಹಿತ್ಯ' ಎಂಬ ವಿಷಯ ಕುರಿತು ವಿಚಾರ ಮಂಡಿಸಿದರು. ರೈತ ಮುಖಂಡ ಪಿ.ಎಲ್‌.ಪುಟ್ಟರಾಮು' ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಮತ್ತು ಸಾಹಿತ್ಯ' ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸರಸ್ವತಿ 'ವಿವಾಹ ವಿಚ್ಚೇದನ' ವಿಷಯ ಕುರಿತು ವಿಚಾರ ಮಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ