ಆ್ಯಪ್ನಗರ

ಮನ್‌ಮುಲ್‌ ಮೆಗಾ ಹಗರಣದ 73 ಕೋಟಿ ರೂ. ವಸೂಲಿ ಮಾಡಿ

ಮೆಗಾ ಡೇರಿ ಸ್ಥಾಪನೆ ಹೆಸರಿನಲ್ಲಿ ಮಂಡ್ಯ ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ (ಮನ್‌ಮುಲ್‌) 73.19 ಕೋಟಿ ರೂ. ನಷ್ಟವಾಗಿರುವುದನ್ನು ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ದೃಢಪಡಿಸಿದೆ.

Vijaya Karnataka 5 Dec 2019, 5:00 am
ಮಂಡ್ಯ: ಮೆಗಾ ಡೇರಿ ಸ್ಥಾಪನೆ ಹೆಸರಿನಲ್ಲಿ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ (ಮನ್‌ಮುಲ್‌) 73.19 ಕೋಟಿ ರೂ. ನಷ್ಟವಾಗಿರುವುದನ್ನು ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ದೃಢಪಡಿಸಿದೆ.
Vijaya Karnataka Web milk (2)


ಜತೆಗೆ, ಅಂದಿನ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಅಧಿಕಾರಿಗಳಿಂದ ನಷ್ಟ ಮೊತ್ತ ವಸೂಲಿ ಮಾಡಲು ಆದೇಶಿಸಿದೆ ಎಂದು ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್‌.ಸಿ. ಮಧುಚಂದನ್‌ ತಿಳಿಸಿದರು. ''ಅವ್ಯವಹಾರ ಹಾಗೂ ಅಕ್ರಮಗಳ ಹಿನ್ನೆಲೆಯಲ್ಲಿ ಮನ್‌ಮುಲ್‌ನ ಹಿಂದಿನ ಆಡಳಿತ ಮಂಡಳಿಯನ್ನು ಹಿಂದೆ ಸೂಪರ್‌ಸೀಡ್‌ ಮಾಡಿ ಆದೇಶ ಹೊರಡಿಸಿದ್ದ, ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯವು ಇದೀಗ ನಷ್ಟದ ಹಣವನ್ನು ಸಂಬಂಧಿಸಿದವರೇ ವಸೂಲಿ ಮಾಡಲು ಸೂಚಿಸಿದೆ.

ಹೀಗಾಗಿ ಒಕ್ಕೂಟಕ್ಕೆ ನಷ್ಟವಾಗಿ ರುವ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡಲು ಸರಕಾರ ಕ್ರಮ ವಹಿಸಬೇಕು,'' ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿಅವರು ಒತ್ತಾಯಿಸಿದರು. ''ಮನ್‌ಮುಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು 73.19 ಕೋಟಿ ರೂ. ದುರುಪಯೋಗ ಸೇರಿದಂತೆ ಎಲ್ಲಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಇಲ್ಲವೇ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಭ್ರಷ್ಟರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,'' ಎಂದು ಆಗ್ರಹಿಸಿದರು. ಈ ಹಗರಣದಲ್ಲಿಭಾಗವಹಿಸಿದವರೇ ಮನ್‌ಮುಲ್‌ನ ಆಯಾಕಟ್ಟಿನ ಹುದ್ದೆಯಲ್ಲಿದ್ದಾರೆ. ಅಂಥವರನ್ನು ತಕ್ಷಣ ವಜಾಗೊಳಿಸಬೇಕು ಎಂದರು.

''ಅನರ್ಹ ಸಂಸ್ಥೆಗೆ ಯಂತ್ರೋಪಕರಣಗಳ ಪೂರೈಕೆಯ ಟೆಂಡರ್‌ ನೀಡಿರುವುದರ ಹಿಂದೆ ಆಗ ಮ್ಯಾನೇಜಿಂಗ್‌ ಎಂಜಿನಿಯರ್‌ ಆಗಿದ್ದ ಅಧಿಕಾರಿಯೊಬ್ಬರ ಪಾತ್ರವೇ ಇದೆ. ಈ ಮಧ್ಯೆ ಭ್ರಷ್ಟರಿಂದ ಹಣ ವಸೂಲಿಗೆ ಕ್ರಮ ವಹಿಸುವಂತೆ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ನೀಡಿರುವ ಆದೇಶಕ್ಕೆ ಭ್ರಷ್ಟರು ತಡೆಯಾಜ್ಞೆ ತರುವ ಸಾಧ್ಯತೆಯಿದ್ದರೂ ಕೇವಿಯಟ್‌ ಅರ್ಜಿ ಸಲ್ಲಿಸಲು ಹಾಲಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ವಿಳಂಬ ಮಾಡುತ್ತಿರುವುದು ಏಕೆ?,'' ಎಂದು ಪ್ರಶ್ನಿಸಿದರು. ''ಮನ್‌ಮುಲ್‌ಗೆ ಆಗಿರುವ ನಷ್ಟಕ್ಕೆ ಕಾರಣವಾ ಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲವೇ ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಬೇಕು,'' ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿಸಮಿತಿಯ ಗೌರವಾಧ್ಯಕ್ಷ ಪ್ರಸನ್ನ ಎನ್‌.ಗೌಡ, ಗೌರವ ಸಲಹೆಗಾರ ಬಿ.ಜಿ.ಪೂವಯ್ಯ, ಕಾರ‍್ಯದರ್ಶಿ ಕಾರಸವಾಡಿ ಮಹದೇವು, ಉಪಾಧ್ಯಕ್ಷ ಲಕ್ಷ್ಮೇನಾರಾಯಣ್‌, ಸಂಘಟನಾ ಕಾರ‍್ಯದರ್ಶಿ ಸುಧಾ ಉಪ್ಪರಕನಹಳ್ಳಿ, ವರಲಕ್ಷ್ಮೇ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ