ಆ್ಯಪ್ನಗರ

ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು-ಬೀದಿಬದಿ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ..!

ಕಳೆದ ಮೂರು ತಿಂಗಳ ಹಿಂದೆ ನ್ಯಾಯಾಧೀಶರು ಮೌಖಿಕ ಆದೇಶ ಹಾಗೂ ಸ್ವಚ್ಚತೆ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಪೇಟೆ ಬೀದಿಯಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು. ಈ ಮಧ್ಯೆ ಇತ್ತೀಚೆಗೆ ಪಟ್ಟಣದ ಪೊಲೀಸ್ ಪೇದೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು.

Vijaya Karnataka Web 28 Jul 2020, 9:41 am
ಮಂಡ್ಯ : ಮಳವಳ್ಳಿ ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಬೀದಿಬದಿ ವ್ಯಾಪಾರಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ಮಂಗಳವಾರ ಪಟ್ಟಣದ ಪೇಟೆ ಬೀದಿಯಲ್ಲಿ ನಡೆಯಿತು.
Vijaya Karnataka Web Mandya


ಮಂಡ್ಯದಲ್ಲಿ ಬಕ್ರಿದ್‌ ಆಚರಣೆಗೆ ಪ್ರಾಣಿವಧೆ ನಿಷೇಧ: ಜಿಲ್ಲಾಧಿಕಾರಿ ಆದೇಶ!

ಕಳೆದ ಮೂರು ತಿಂಗಳ ಹಿಂದೆ ನ್ಯಾಯಾಧೀಶರು ಮೌಖಿಕ ಆದೇಶ ಹಾಗೂ ಸ್ವಚ್ಚತೆ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಪೇಟೆ ಬೀದಿಯಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು. ಈ ಮಧ್ಯೆ ಇತ್ತೀಚೆಗೆ ಪಟ್ಟಣದ ಪೊಲೀಸ್ ಪೇದೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು.

ಈ ಸಮಯದ ಲಾಭ ಪಡೆದ ಬೀದಿ ಬದಿ ವ್ಯಾಪಾರಿಗಳು ಸೋಮವಾರ ಬೆಳಿಗ್ಗೆ ಈ ಹಿಂದೆ ತೆರವುಗೊಳಿಸಿದ ಜಾಗದಲ್ಲಿಯೇ ವ್ಯಾಪಾರ ಆರಂಭಿಸಿದ್ದಾರೆ. ಮಂಗಳವಾರವೂ ವ್ಯಾಪಾರ ಮುಂದುವರೆಸಿದ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎ.ಕೆ.ರಾಜೇಶ್ ನೇತೃತ್ವದಲ್ಲಿ ತೆರವುಗೊಳಿಸಲು ಯತ್ನಿಸಿದಾಗ ಬೀದಿ ಬದಿ ವ್ಯಾಪಾರ ಪರವಾಗಿ ಬಂದಿದ್ದ ಜನವಾದಿ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಅವರು ಪೋಲಿಸ್ ಜತೆ ಮಾತಿನ‌ ಚಕಮಕಿ ನಡೆಸಿದ್ದಾರೆ.

ಮಂಡ್ಯದ ಚುಂಚಶ್ರೀಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಮತ್ತೊಂದು ಡಾಕ್ಟರೇಟ್ ಪದವಿ!

ಸರ್ಕಲ್ ಇನ್ಸ್ ಪೆಕ್ಟರ್ ಎ.ಕೆ.ರಾಜೇಶ್ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಪುರಸಭೆಯ ಮುಖ್ಯಾಧಿಕಾರಿ ಸ್ಥಳಕ್ಕೆ ಬಂದು ಜಾಗ ಗುರುತು ಪಡಿಸಿದ್ದರೆ ವ್ಯಾಪಾರ ಮಾಡಬಹುದು. ಅಲ್ಲಿಯವರೆಗೆ ಬೀದಿ ಬದಿಯ ವ್ಯಾಪಾರಗಳಿಗೆ ಅವಕಾಶ ನೀಡುವುದಿಲ್ಲ ಎಂದರು.

ಮೈಷುಗರ್‌ ಆರಂಭ ನಿಶ್ಚಿತ: ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದ ಕೆ.ಸಿ. ನಾರಾಯಣಗೌಡ

ಈ ವೇಳೆ ಪ್ರತಿ ತಳ್ಳುವ ಗಾಡಿ ಮೇಲೆ ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು ಭಾವುಟಗಳನ್ನು ಹಾಕಿ ಪ್ರತಿಭಟನೆ ನಡೆಸಲಾಗಿದ್ದು, ಇತ್ತ ವ್ಯಾಪಾರ ನಡೆಸದಂತೆ ಪ್ರತಿ ಗಾಡಿ ಮುಂದೆ ಪೊಲೀಸರಿಗೆ ಕುಳಿತುಕೊಳ್ಳಲು ಸರ್ಕಲ್ ಇನ್ಸ್ ಪೆಕ್ಟರ್ ವ್ಯವಸ್ಥೆ ಮಾಡಿ ವ್ಯಾಪಾರಕ್ಕೆ ಅನುಮತಿ ನೀಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ