ಆ್ಯಪ್ನಗರ

ಸಮಸ್ಯೆ ಅರಿಯಲು ಎಸಿ ಬೋಗಿ ಯಾನ!

ರೈಲು ಪ್ರಯಾಣಿಕರ ಸಮಸ್ಯೆ ಅರಿತು ಕೊಳ್ಳಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.

Vijaya Karnataka 22 Oct 2019, 12:29 am
ಮಂಡ್ಯ: ರೈಲು ಪ್ರಯಾಣಿಕರ ಸಮಸ್ಯೆ ಅರಿತು ಕೊಳ್ಳಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
Vijaya Karnataka Web ac compartment sails to solve the problem
ಸಮಸ್ಯೆ ಅರಿಯಲು ಎಸಿ ಬೋಗಿ ಯಾನ!


ಮಂಡ್ಯ ನಗರದಿಂದ ಬೆಂಗಳೂರಿಗೆ ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋಮವಾರ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಪ್ರಯಾಣಿಕರ ಸಮಸ್ಯೆ ಅರ್ಥ ಮಾಡಿಕೊಳ್ಳಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಇದರಿಂದ ಸಂಸತ್‌ನಲ್ಲಿ ಮಾತನಾಡಲು ಅನುಕೂಲವಾಗುತ್ತದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರತ್ಯೇಕ ಮಹಿಳಾ ರೈಲು ಓಡಿಸುವಂತೆಯೂ ಒತ್ತಾಯಿಸಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇನೆ,’’ ಎಂದರು.

ಮೊದಲೆ ಟಿಕೆಟ್ ಬುಕ್: ಸಂಸದೆ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿ ಸಲು ಮೊದಲೇ ಟಿಕೆಟ್ ಬುಕ್ ಮಾಡಿದ್ದರು. ಹವಾ ನಿಯಂತ್ರಿತ ಬೋಗಿಯಲ್ಲಿ ಪ್ರಯಾಣ ಬೆಳೆಸಿದ ಅವರಿಗೆ ಬೆಂಬಲಿಗರಾದ ರಾಕ್‌ಲೈನ್ ವೆಂಕಟೇಶ್, ಇಂಡುವಾಳು ಸಚ್ಚಿದಾ ನಂದ ಸಾಥ್ ನೀಡಿದರು. ಸಂಜೆ 4.45ಕ್ಕೆ ನಿಲ್ದಾಣಕ್ಕೆ ಆಗಮಿಸಿ ನಂತರ, ಕೆಲವೇ ನಿಮಿಷದಲ್ಲಿ ಅಂದರೆ, 4.58ಕ್ಕೆ ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ