ಆ್ಯಪ್ನಗರ

ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ: ಸುಮಲತಾ

ಹಲಗೂರು, ಹಾಡ್ಲಿಗೆ ಭೇಟಿ ನೀಡಿ ಅಭಿಮಾನಿಗಳು ಹಾಗೂ ಸ್ಥಳೀಯ ನಾಯಕರ ಚರ್ಚಿಸಿ ಮಾತನಾಡಿದ ಅವರು, ಅಂಬರೀಶ್‌ ನಮ್ಮನ್ನು ಅಗಲಿದೆ ನಂತರ ಜಿಲ್ಲೆಯ ಜನತೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅತ್ಮಸ್ಥೈರ್ಯ ತುಂಬಿದ್ದಾರೆ

Vijaya Karnataka 14 Mar 2019, 9:52 am
ಹಲಗೂರು: ಅಂಬರೀಶ್‌ ಮಳವಳ್ಳಿಯಲ್ಲಿ ಬಾಲ್ಯ ಜೀವನ ಕಳೆದಿದ್ದು, ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ. ತಾಲೂಕಿನ ಜನತೆ ನನಗೆ ಅಭೂತಪೂರ್ವ ಸ್ವಾಗತ ನೀಡುವ ಮೂಲಕ ಪ್ರೀತಿ ತೋರಿಸಿದ್ದಾರೆ. ಅಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು ಜನರ ಸೇವೆ ಮಾಡುವುದಾಗಿ ನಟಿ ಸುಮಲತಾ ಅಂಬರೀಶ್‌ ಹೇಳಿದರು.
Vijaya Karnataka Web Sumalatha


ಹಲಗೂರು, ಹಾಡ್ಲಿಗೆ ಭೇಟಿ ನೀಡಿ ಅಭಿಮಾನಿಗಳು ಹಾಗೂ ಸ್ಥಳೀಯ ನಾಯಕರ ಚರ್ಚಿಸಿ ಮಾತನಾಡಿದ ಅವರು, ಅಂಬರೀಶ್‌ ನಮ್ಮನ್ನು ಅಗಲಿದೆ ನಂತರ ಜಿಲ್ಲೆಯ ಜನತೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅತ್ಮಸ್ಥೈರ್ಯ ತುಂಬಿದ್ದಾರೆ. ಈ ಅಭಿಮಾನದ ಋುಣ ತೀರಿಸಲು ನನಗೆ ಅವಕಾಶ ನೀಡಬೇಕು. ಪ್ರಸ್ತುತವಾಗಿ ನನಗೆ ಯಾವ ಪಕ್ಷದ ಬೆಂಬಲವೂ ಇಲ್ಲ. ಜತೆಗೆ ಯಾವ ಹಿರಿಯ ನಾಯಕರ ಬೆಂಬಲವೂ ಇಲ್ಲ, ಆದರೆ ನನಗಿರುವುದು ಅಂಬರೀಶ್‌ ಅಭಿಮಾನಿಗಳು ಹಾಗೂ ಜಿಲ್ಲೆಯ ಜನರ ಅರ್ಶೀವಾದ ಮಾತ್ರ. ನಾನು ಮಂಡ್ಯ ಜಿಲ್ಲೆಯ ಸೊಸೆ ಎಂಬುವುದನ್ನು ಜನ ನಿರೂಪಿಸಬೇಕು ಎಂದರು.

ಅಭಿಮಾನಿಗಳ ಒತ್ತಾಯಕ್ಕಾಗಿ ರಾಜಕೀಯಕ್ಕೆ ಬಂದಿದ್ದೇನೆ. ಇದನ್ನು ಬಿಟ್ಟು ವೈಯಕ್ತಿಕ ಲಾಭಕ್ಕಾಗಿ ಅಲ್ಲ ಎಂದರು. ಅಂಬರೀಶ್‌ ಪುತ್ರ ಅಭಿಷೇಕ್‌, ತಾಪಂ ಅಧ್ಯಕ್ಷ ನಾಗೇಶ್‌, ಮುಖಂಡರಾದ ಪದ್ಮನಾಭ, ಗಂಗಾಧರ್‌, ಕಿಟ್ಟಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ