ಆ್ಯಪ್ನಗರ

ಮಕ್ಕಳು, ಮೊಮ್ಮಕ್ಕಳ ಮೇಲೆ ವ್ಯಾಮೋಹವಿಲ್ಲ: ಎಚ್‌ಡಿಡಿ

ಎಚ್‌ಡಿಡಿ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ನನಗೆ ಮಕ್ಕಳು, ಮೊಮ್ಮಕ್ಕಳ ಮೇಲೆ ವ್ಯಾಮೋಹವಿಲ್ಲ ರಾಜ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ...

Vijaya Karnataka 5 Apr 2019, 5:00 am
ಶ್ರೀರಂಗಪಟ್ಟಣ: ನನಗೆ ಮಕ್ಕಳು, ಮೊಮ್ಮಕ್ಕಳ ಮೇಲೆ ವ್ಯಾಮೋಹವಿಲ್ಲ. ರಾಜ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಆದರೆ ಕುಮಾರಸ್ವಾಮಿ ಹಾಗೂ ನನ್ನ ವಿರುದ್ಧ ಮಾತನಾಡುತ್ತಿರುವುದನ್ನು ಕೇಳಿದರೆ ಶೂಲದಲ್ಲಿ ಇರಿದಂತಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web am not working for my family says hd devegowda
ಮಕ್ಕಳು, ಮೊಮ್ಮಕ್ಕಳ ಮೇಲೆ ವ್ಯಾಮೋಹವಿಲ್ಲ: ಎಚ್‌ಡಿಡಿ


ಪಟ್ಟಣ ಖಾಸಗಿ ಬಸ್‌ ನಿಲ್ದಾಣದಲ್ಲಿ ಗುರುವಾರ ನಡೆದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದ ಸದ್ಯದ ಪರಿಸ್ಥಿತಿ ನೋಡಿದರೆ ನೋವಾಗುತ್ತದೆ. 1964ರಿಂದ ನಿರಂತರವಾಗಿ ಕಾವೇರಿಗಾಗಿ ಹೋರಾಟ ಮಾಡಿದ್ದೇನೆ. ಕಾವೇರಿ ಟ್ರಿಬ್ಯುನಲ್‌ ರಚನೆ ವಿರೋಧಿಸಿ ಉಪವಾಸ ಮಾಡಿದ್ದೆ. ನನ್ನ ಹೋರಾಟ ರಾಜ್ಯಕ್ಕಾಗಿ. ನೀರಿಗಾಗಿ ಭಿಕ್ಷೆ ಬೇಡಿದ್ದೇನೆ. ಟ್ರಿಬ್ಯುನಲ್‌ ರಚನೆಯಿಂದಾಗಿ ಮಂಡ್ಯದಲ್ಲಿ 18 ಲಕ್ಷ ಎಕರೆಗೆ ನೀರಿನ ಅಭಾವ ತಲೆದೋರಿದೆ. ನ್ಯಾಯ ಪಡೆಯಲು ಮತ್ತೆ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಕಾವೇರಿಗಾಗಿ ಸಂಸತ್‌ನಲ್ಲಿ ಹೋರಾಟ ಮಾಡದ ಬಿಜೆಪಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಇದನ್ನು ಕ್ಷೇತ್ರದ ಜನ ಅರ್ಥ ಮಾಡಿಕೊಳ್ಳಬೇಕು. 270 ಟಿಎಂಸಿ ನೀರು ಉಳಿಸಿಕೊಳ್ಳಲು ನಡೆಸಿರುವ ಹೋರಾಟ ದೇವರಿಗೆ ಗೊತ್ತು. ನನ್ನ ಹೋರಾಟದಿಂದಾಗಿಯೇ ಹೇಮಾವತಿ, ಹಾರಂಗಿಗೆ 1967 ರಲ್ಲಿ ಅಡಿಗಲ್ಲು ಬಿತ್ತು ಎಂದು ಹೇಳಿದರು.

ರಮೇಶ್‌ ಬಂಡಿಸಿದ್ದೇಗೌಡಗೆ ಟಾಂಗ್‌: ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಬಂಡಿಸಿದ್ದೇಗೌಡ ತೀರಿಕೊಂಡ ಮೇಲೆ ಅವರ ಮನೆಗೆ ನಾಲ್ಕು ಬಾರಿ ವಿಧಾನಸಭೆ ಟಿಕೆಟ್‌ ನೀಡಿದ್ದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಅವರು ಕೈಕೊಟ್ಟರು ಎಂದು ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಹೆಸರು ಹೇಳದೇ ಪರೋಕ್ಷ ವಾಗಿ ಹರಿಹಾಯ್ದರು. ಆದರೆ ವಂಶಿಕನ ಮಗ ರವೀಂದ್ರ ಶ್ರೀಕಂಠಯ್ಯ ಈ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷ ಉಳಿಸಿದ್ದಾನೆ ಎಂದು ಬೆನ್ನುತಟ್ಟಿದರು.

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಿಖಿಲ್‌ಕುಮಾರಸ್ವಾಮಿ ಅಭ್ಯರ್ಥಿ ಮಾಡಿ ಎಂದು ಮೊದಲು ಹೇಳಿದ್ದು ರವೀಂದ್ರ ಶ್ರೀಕಂಠಯ್ಯ. ಜಿಲ್ಲೆಯ ಎಲ್ಲ ಮುಖಂಡರ ಒತ್ತಾಯದ ಮೇರೆಗೆ ನಿಖಿಲ್‌ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡಲಾಯಿತು. ಹೀಗಾಗಿ ಕ್ಷೇತ್ರದ ಜನ ಒಮ್ಮತದಿಂದ ನಿಖಿಲ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಅರ್ಧ ರಾತ್ರಿಯಲ್ಲಿ ಸೂಟ್‌ಕೇಸ್‌ ತೆಗೆದುಕೊಂಡು ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಿದವರಿಗೆ ಆ ಪಕ್ಷದಿಂದ ಟಿಕೆಟ್‌ ಸಿಕ್ಕಿತ್ತು. ಇದೀಗ ಅಂತಹವರಿಂದ ಆ ಪಕ್ಷ ಉಳಿಯುತ್ತದೆಯೇ ಎಂದು ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ವಿರುದ್ಧ ಹರಿಹಾಯ್ದರು. ನಾವು ಸಿನಿಮಾ ನೋಡಿದರೆ ಮಾತ್ರ ಸಿನಿಮಾದವರ ಜೀವನ ನಡೆಯುತ್ತದೆ. ಅಂತಹವರಿಂದ ಜಿಲ್ಲೆ ಅಭಿವೃದ್ಧಿ ಸಾಧ್ಯವೇ? ಅವರು ಟಾಟಾ ಮಾಡಿ ಹೋದರೆ ಜಿಲ್ಲೆ ಪ್ರಗತಿಯಾಗಲಿದೆಯೇ ಎಂದು ಸುಮಲತಾ ಅವರಿಗೆ ತಿರುಗೇಟು ನೀಡಿದರು.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಜಫ್ರುಲ್ಲಾಖಾನ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್‌, ಕಾರ್ಯಾಧ್ಯಕ್ಷ ತಗ್ಗಹಳ್ಳಿವೆಂಕಟೇಶ್‌, ತಾಲೂಕು ಅಧ್ಯಕ್ಷ ಮುಕುಂದ, ಜಿ.ಪಂ ಮಾಜಿ ಅಧ್ಯಕ್ಷ ಎಸ್‌.ಲಿಂಗಣ್ಣ, ಜಿ.ಪಂ ಸದಸ್ಯೆ ಕಾವ್ಯ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ