ಆ್ಯಪ್ನಗರ

ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಒತ್ತಾಯ

ದೇಶಕ್ಕೆ ಸಂವಿಧಾನವನ್ನು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಭೆಯನ್ನು ಪಟ್ಟಣದ ಪ್ರಮುಖ ಸ್ಥಳದಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ಥಾಪಿಸಬೇಕು ಎಂದು ದಲಿತ ಕ್ರಾಂತಿ ಸೇವಾ ಸಮಿತಿ ಅಧ್ಯಕ್ಷ ಕನಗನಮರಡಿ ಬೊಮ್ಮರಾಜು ಒತ್ತಾಯಿಸಿದರು.

Vijaya Karnataka 4 Aug 2019, 7:54 pm
ಪಾಂಡವಪುರ: ದೇಶಕ್ಕೆ ಸಂವಿಧಾನವನ್ನು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಭೆಯನ್ನು ಪಟ್ಟಣದ ಪ್ರಮುಖ ಸ್ಥಳದಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ಥಾಪಿಸಬೇಕು ಎಂದು ದಲಿತ ಕ್ರಾಂತಿ ಸೇವಾ ಸಮಿತಿ ಅಧ್ಯಕ್ಷ ಕನಗನಮರಡಿ ಬೊಮ್ಮರಾಜು ಒತ್ತಾಯಿಸಿದರು.
Vijaya Karnataka Web MDY-04PND01


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ದಲಿತ ಕ್ರಾಂತಿ ಸೇವಾ ಸಮಿತಿಯ ಕಾರ‌್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘‘ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಬರೆದುಕೊಟ್ಟು ದೇಶದಲ್ಲಿ ಸಂವಿಧಾನಾತ್ಮಕ ಆಡಳಿತ ನಡೆಸಲು ಸಹಕಾರಿಯಾಗಿದ್ದಾರೆ. ಸಂವಿಧಾನದಲ್ಲಿ ಎಲ್ಲಾ ವರ್ಗದ ಜನರಿಗೂ ಮೀಸಲಾತಿ ಕಲ್ಪಿಸಿಕೊಟ್ಟು ಅಂತಹ ನಾಯಕರನ್ನು ಅವಮಾನಿಸುವಂತಹ ಕೆಲಸವಾಗುತ್ತಿದೆ,’’ಎಂದು ಕಿಡಿಕಾರಿದರು.

‘‘ಪಾಂಡವಪುರ ಉಪವಿಭಾಗ ವ್ಯಾಪ್ತಿಯ ನಾಗಮಂಗಲದಲ್ಲಿ ತಾಲೂಕು ಆಡಳಿತ ಎದುರು ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆದರೆ, ಪಾಂಡವಪುರ ಉಪವಿಭಾಗದ ಕೇಂದ್ರ ಸ್ಥಾನವಾಗಿದ್ದರೂ ಸಹ ಎಲ್ಲೂ ಅಂಬೇಡ್ಕರ್ ಪ್ರತಿಮೆಗಳಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖ ಸ್ಥಳದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿ ಅವರನ್ನು ಗೌರವಿಸುವ ಕೆಲಸವಾಗಬೇಕು,’’ ಎಂದು ಒತ್ತಾಯಿಸಿದರು.

ದಲಿತರಿಗೆ ಸ್ಮಶಾನ ಜಾಗ ನೀಡಿ: ‘‘ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಗಳೇ ಇಲ್ಲ, ಇದರಿಂದಾಗಿ ದಲಿತರು ಸಮುದಾಯದವರು ಮೃತರಾದ ಸಂದರ್ಭದಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಬೇರೆಯನ್ನು ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಸ್ಮಶಾನಗಳಿದ್ದರೂ, ಅಲ್ಲಿಗೆ ಹೋಗಲು ಸೂಕ್ತವಾದ ರಸ್ತೆಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರತಿ ಗ್ರಾಮದಲ್ಲೂ ದಲಿತರಿಗೆ ಪ್ರತ್ಯೇಕವಾದ ಸ್ಮಶಾನ ನಿರ್ಮಿಸಿಕೊಡಬೇಕು. ಪಟ್ಟಣದಲ್ಲಿ ದಲಿತ ಸಮುದಾಯದವರು ಯಾವುದೇ ಒಂದು ಕಾರ‌್ಯಕ್ರಮ, ಸಭೆ, ಸಮಾರಂಭಗಳನ್ನು ನಡೆಸಲು ಸೂಕ್ತವಾದ ವ್ಯವಸ್ಥೆ ಇಲ್ಲ. ಆದ್ದರಿಂದ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದ ಕ್ಕಾಗಿ ತಾಲೂಕು ಆಡಳಿತ ಜಾಗದ ವ್ಯವಸ್ಥೆ ಮಾಡಬೇಕಾಗಿದೆ,’’ಎಂದು ಆಗ್ರಹಿಸಿದರು.

‘‘ದೇಶಕ್ಕೆ ಸ್ವಾತಂತ್ರ್ಯಬಂದು ಇಷ್ಟು ವರ್ಷಗಳಾದರೂ ಸಹ ಆಳುವ ಸರಕಾರಗಳು ದಲಿತರನ್ನು ನಿರ್ಲಕ್ಷಿಸಲಾಗಿದೆ. ಮೇಲಿಂದ ಮೇಲೆ ದಲಿತರ ಮೇಲೆ ಶೋಷಣೆ ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವುಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಅದಕ್ಕಾಗಿ ಸಮುದಾಯದ ಯುವಕರನ್ನು ಸಂಘಟಿತರಾಗಬೇಕಾಗಿದೆ. ಆದ್ದರಿಂದ ಇದೇ ಆಗಷ್ಟ್ ತಿಂಗಳು ಬೇಡಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಹೋರಾಟ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಹಾಗಾಗಿ ಅಂದು ನಡೆಯುವ ಪ್ರತಿಭಟನೆಯಲ್ಲಿ ಪ್ರತಿಯೊಂದು ಗ್ರಾಮಗಳಿಂದ ದಲಿತರು ಆಗಮಿಸಿ ಕೈಜೋಡಿಸಿ ಬೆಂಬಲ ನೀಡಬೇಕು,’’ ಎಂದು ಮನವಿ ಮಾಡಿದರು.

ಸಭೆಯಲ್ಲಿ ದಲಿತ ಕ್ರಾಂತಿ ಸೇವಾ ಸಮಿತಿಯ ಪ್ರ.ಕಾರ‌್ಯದರ್ಶಿ ರಮೇಶ್, ದೇವರಾಜು, ಅತ್ತಿಗನಗಳ್ಳಿ ಶಿವಣ್ಣ, ಎಂ.ಎ.ಮಂಜು, ಶಿವಸ್ವಾಮಿ, ಸ್ವಾಮಿ, ಜಯಕುಮಾರ್, ಹರಿದತ್ತ, ಲೋಕೇಶ್, ಮೂರ್ತಿ,ಶಂಕರ್, ಸ್ವಾಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ