ಆ್ಯಪ್ನಗರ

ಅಮಾನ್ಯ ನೋಟು ಚಲಾವಣೆಗೆ ಯತ್ನ: ಇಬ್ಬರ ಬಂಧನ

ಇಬ್ಬರ ಬಂಧನ ವಿಕ ಸುದ್ದಿಲೋಕ ಮದ್ದೂರು ಕೇಂದ್ರ ಸರಕಾರ ಅಮಾನ್ಯಗೊಳಿಸಿದ್ದ 1 ಸಾವಿರ ರೂ...

Vijaya Karnataka 31 Aug 2019, 5:00 am
ಮದ್ದೂರು: ಕೇಂದ್ರ ಸರಕಾರ ಅಮಾನ್ಯಗೊಳಿಸಿದ್ದ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಧಿಸಿ, ಅವರಿಂದ ಅಮಾನ್ಯಗೊಂಡಿದ್ದ ಹಾಗೂ ಅವುಗಳ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
Vijaya Karnataka Web attempt for circulation of invalid note two arrested in maddur
ಅಮಾನ್ಯ ನೋಟು ಚಲಾವಣೆಗೆ ಯತ್ನ: ಇಬ್ಬರ ಬಂಧನ


ಪಟ್ಟಣದ ಸಿದ್ಧಾರ್ಥನಗರ ಡಿ.ಅಜಯ್‌(28) ತಾಲೂಕಿನ ನಗರಕೆರೆ ಗ್ರಾಮದ ಎನ್‌.ಜೆ. ಪ್ರಸನ್ನಕುಮಾರ್‌(30) ಬಂಧಿತ ಆರೋಪಿಗಳು.

ಮದ್ದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ವಾರ್ಡ್‌ 21ರ ಜಯಲಕ್ಷಿತ್ರ್ಮನಂಜಪ್ಪ ಕಲ್ಯಾಣ ಮಂಟಪ ಸಮೀಪದಲ್ಲಿಇಬ್ಬರು 1 ಸಾವಿರ ರೂ. ಮುಖಬೆಲೆಯ ಅಸಲಿ ಹಾಗೂ ಮತ್ತಷ್ಟು ಜೆರಾಕ್ಸ್‌ ನೋಟುಗಳನ್ನು ಎರಡು ಬ್ಯಾಗಿನಲ್ಲಿಟ್ಟು ಚಲಾವಣೆಗೆ ಯತ್ನಿಸುವ ವೇಳೆ ಖಚಿತ ಮಾಹಿತಿ ಆಧರಿಸಿ ಮದ್ದೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು 93 ನಿಷೇಧಿಧಿತ ಅಸಲಿ ನೋಟು, 541 ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಮದ್ದೂರು ಠಾಣೆ ವೃತ್ತ ನಿರೀಕ್ಷ ಎನ್‌.ವಿ. ಮಹೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ