ಆ್ಯಪ್ನಗರ

ಆಸಿಡ್ ದಾಳಿ ವಿರುದ್ಧ ಅರಿವು ಅಗತ್ಯ

ಆಸಿಡ್ ದಾಳಿ ಮಾಡುವವರ ವಿರುದ್ಧ 10 ಲಕ್ಷ ದಂಡ ಹಾಗೂ 10 ವರ್ಷಗಳವರೆಗೆ ಕಾರಾಗಹ ಶಿಕ್ಷೆ ಪ್ರಕರಣ ಗಂಭೀರವಾಗಿದ್ದರೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನನ್ನು ಜಾರಿಗೊಳಿಸಲಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾರುತಿ ಹೇಳಿದರು.

ವಿಕಸುದ್ದಿಲೋಕ 12 Aug 2017, 5:16 am
ಶ್ರೀರಂಗಪಟ್ಟಣ: ಆಸಿಡ್ ದಾಳಿ ಮಾಡುವವರ ವಿರುದ್ಧ 10 ಲಕ್ಷ ದಂಡ ಹಾಗೂ 10 ವರ್ಷಗಳವರೆಗೆ ಕಾರಾಗಹ ಶಿಕ್ಷೆ ಪ್ರಕರಣ ಗಂಭೀರವಾಗಿದ್ದರೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನನ್ನು ಜಾರಿಗೊಳಿಸಲಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾರುತಿ ಹೇಳಿದರು.
Vijaya Karnataka Web awareness against acid attack is essential
ಆಸಿಡ್ ದಾಳಿ ವಿರುದ್ಧ ಅರಿವು ಅಗತ್ಯ


ತಾಲೂಕಿನ ಅರಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಏರ್ಪಡಿಸಿದ್ದ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ಹಾಗೂ ಮೂಲ ಭೂತ ಹಕ್ಕಗಳ ಬಗ್ಗೆ ಕುರಿತ ಉಪನ್ಯಾಸ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಸಿಡ್ ದಾಳಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ 2013ರಲ್ಲಿ ಕಾನೂನು ಜಾರಿಗೊಳಿಸಲಾಗಿದೆ. ಆಸಿಡ್ ದಾಳಿಯಲ್ಲಿ ಪಾಲ್ಗೊಂಡರೆ ಉಗ್ರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಜತೆಗೆ ಅದರ ವಿರುದ್ಧ ಅರಿವು ಮೂಡಿಸಬೇಕು ಎಂದು ಹೇಳಿದರು.

ಆಸಿಡ್ ದಾಳಿಗೊಳಗಾದವರು ಅಥವಾ ಕೈತಪ್ಪಿನಿಂದ ಆಸಿಡ್ ಬಿದ್ದು ಗಾಯಗೊಂಡವರು ತಕ್ಷಣ ತಣ್ಣೀರಿನ್ನು ಸಣ್ಣ ಪ್ರಮಾಣದಲ್ಲಿ ಹಾಕಿಕೊಂಡು ತೊಳೆಯುವ ಮೂಲಕ ಪ್ರಾಥಮಿಕ ಚಿಕಿತ್ಸೆ ಮಾಡಿಸಿಕೊಂಡರೆ ಹೆಚ್ಚು ಪ್ರಮಾಣದಲ್ಲಿ ಆಗುವ ಗಾಯವನ್ನು ತಡೆಯಬಹುದು ಎಂದು ಸಲಹೆ ನೀಡಿದರು.

ವಕೀಲ ಎಸ್.ಆರ್ ಸಿದ್ದೇಶ್, ಸರಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಅಣ್ಣಪ್ಪಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮರೀಗೌಡ, ಸಹ ಕಾರ್ಯದರ್ಶಿ ಎನ್.ವೈದ್ಯನಾಥ್, ಸರಕಾರಿ ಅಭಿಯೋಜಕರಾದ ಯಶೋಧ, ನಾಜೀಂಬೇಗಂ, ಶಿನಂಜಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ