ಆ್ಯಪ್ನಗರ

ತಡಗವಾಡಿಯಲ್ಲಿ ಬಾಬಯ್ಯನ ಹಬ್ಬ ಸಂಭ್ರಮ

ಶ್ರೀರಂಗಪಟ್ಟಣ: ತಡಗವಾಡಿಯಲ್ಲಿ ಕೋಮು ಸೌಹಾರ್ದತೆ ಸಾರುವ ಬಾಬಯ್ಯನ ಹಬ್ಬ ಗುರುವಾರ ಸಂಜೆ ಸಂಭ್ರಮದಿಂದ ನೆರವೇರಿತು.

Vijaya Karnataka 21 Sep 2018, 5:00 am
ಶ್ರೀರಂಗಪಟ್ಟಣ: ತಡಗವಾಡಿಯಲ್ಲಿ ಕೋಮು ಸೌಹಾರ್ದತೆ ಸಾರುವ ಬಾಬಯ್ಯನ ಹಬ್ಬ ಗುರುವಾರ ಸಂಜೆ ಸಂಭ್ರಮದಿಂದ ನೆರವೇರಿತು.
Vijaya Karnataka Web babas festive celebration in tadagavadi
ತಡಗವಾಡಿಯಲ್ಲಿ ಬಾಬಯ್ಯನ ಹಬ್ಬ ಸಂಭ್ರಮ


ತ್ಯಾಗ, ಬಲಿದಾನದ ಸಂಕೇತವಾಗಿ ಮೊಹರಂ ಕಡೇ ದಿನದ ಅಂಗವಾಗಿ ಹಸೇನ್‌ ಹಾಗೂ ಹುಸ್ಸೇನ್‌ ಸ್ಮರಣಾರ್ಥ ಹಿಂದೂಗಳು ಈ ಹಬ್ಬವನ್ನು ಆಚರಿಸಿದರು.

ಗುರುವಾರ ಮಧ್ಯಾಹ್ನ ಗ್ರಾಮದ ಬಾಬಯ್ಯನಗುಡಿ ಆವರಣದಲ್ಲಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ಹರಕೆ ಹೊತ್ತವರು ಈ ಕೊಂಡಕ್ಕೆ ಎಳ್ಳು, ಕೊಬ್ಬರಿ ಸಮರ್ಪಿಸಿದರು. ಫಕೀರ ವೇಷಧಾರಿಗಳು ಮೈಗೆ ಕಪ್ಪು ಮಸಿ ಬಳಿದುಕೊಂಡು ಕೊಂಡದ ಸುತ್ತ ಕುಣಿದು ಕುಪ್ಪಳಿಸಿದರು.

ಸಂಜೆ ವೇಳೆಗೆ ಉತ್ಸವ ಆರಂಭವಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಉತ್ಸವದ ಜತೆ ಫಕೀರ ವೇಷಧಾರಿಗಳು ಹೆಜ್ಜೆ ಹಾಕಿದರು. ಪ್ರತಿ ಮನೆ ಮುಂದೆ ಫಕೀರರು ಮತ್ತು ಬಾಬಯ್ಯನ ಗುಡ್ಡಪ್ಪನಿಗೆ ಬಿಂದಿಗೆಗಳಲ್ಲಿ ನೀರು ಸುರಿಯಲಾಯಿತು. ತಡಗವಾಡಿಯಲ್ಲಿ ಉತ್ಸವ ಮುಗಿದ ಬಳಿಕ ದೇವರಗುಡ್ಡಪ್ಪ ಸಮೀಪದ ಗರಕಹಳ್ಳಿಗೆ ಧಾವಿಸಿದರು. ಆತನ ಜತೆ ಗ್ರಾಮಸ್ಥರು ಕೂಡ ದೌಡಾಯಿಸಿದರು. ಬಾಬಯ್ಯನ ಕತ್ತಿ ಮತ್ತು ಹಸ್ತವನ್ನು ಹಿಡಿದು ಮೆರವಣಿಗೆ ನಡೆಸಿದ ನಂತರ ಮತ್ತೆ ಉತ್ಸವ ತಡಗವಾಡಿಗೆ ಆಗಮಿಸಿತು.

ಇದಕ್ಕೂ ಮುನ್ನ ದೇವಾಲಯದಲ್ಲಿ ಮುಸ್ಲಿಮರು ಬಾಬಯ್ಯನ ಕತ್ತಿ ಮತ್ತು ಹಸ್ತಗಳಿಗೆ ಪೂಜೆ ಸಲ್ಲಿಸಿದರು. ಚರ್ಪು ವಿತರಿಸಲಾಯಿತು. ದೇವಾಲಯದ ಅಗ್ನಿ ಕುಂಡದ ಸುತ್ತ ಫಕೀರರು ನೃತ್ಯ ಮಾಡಿದರು. ಪರಸ್ಪರ ಚಾವಟಿಯಿಂದ ಹೊಡೆದುಕೊಂಡರು.

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ನಮ್ಮೂರಲ್ಲಿ ಬಾಬಯ್ಯನ ಹಬ್ಬ ಶತ, ಶತ ಮಾನಗಳಿಂದ ನಡೆದುಕೊಂಡು ಬಂದಿದೆ. ಇದು ಮುಸ್ಲಿಂರ ಹಬ್ಬ ಎಂಬುದೇ ಗೊತ್ತಿಲ್ಲ. ಮೊಹರಂ ಕಡೇದಿನ ಮುನ್ನ ಆರಂಭವಾಗುವ ಬಾಬಯ್ಯನ ಹಬ್ಬವನ್ನು ಎರಡು ದಿನ ಆಚರಿಸಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ