ಆ್ಯಪ್ನಗರ

​ಆಟೋದಲ್ಲೇ ಮಗುವಿಗೆ ಜನ್ಮ!

ಹೆರಿಗೆಗಾಗಿ ನಗರದ ಮಿಮ್ಸ್‌ ಬೋಧಕ ಆಸ್ಪತ್ರೆಗೆ ಗುರುವಾರ ಆಗಮಿಸಿದ ತುಂಬು ಗರ್ಭಿಣಿಯೊಬ್ಬರು ವಾರ್ಡ್‌ಗೆ ಹೋಗುವ ಮುನ್ನವೇ ತಾವು ಬಂದ ಆಟೋದಲ್ಲಿಗಂಡು ಮಗುವಿಗೆ ಜನ್ಮ ನೀಡಿದರು.

Vijaya Karnataka 17 Nov 2017, 11:59 am
ಮಂಡ್ಯ: ಹೆರಿಗೆಗಾಗಿ ನಗರದ ಮಿಮ್ಸ್‌ ಬೋಧಕ ಆಸ್ಪತ್ರೆಗೆ ಗುರುವಾರ ಆಗಮಿಸಿದ ತುಂಬು ಗರ್ಭಿಣಿಯೊಬ್ಬರು ವಾರ್ಡ್‌ಗೆ ಹೋಗುವ ಮುನ್ನವೇ ತಾವು ಬಂದ ಆಟೋದಲ್ಲಿಗಂಡು ಮಗುವಿಗೆ ಜನ್ಮ ನೀಡಿದರು.
Vijaya Karnataka Web baby born in auto rickshaw
​ಆಟೋದಲ್ಲೇ ಮಗುವಿಗೆ ಜನ್ಮ!


ರವಿ ಎಂಬುವರ ಪತ್ನಿ ಸವಿತಾ (25) ಅವರನ್ನು ಹೆರಿಗೆಗಾಗಿ ಕುಟುಂಬದವರು ಆಸ್ಪತ್ರೆಗೆ ಬೆಳಗ್ಗೆ ಕರೆತಂದರು. ಆಕೆಯನ್ನು ಆಟೋದಲ್ಲೇ ಕೂರಿಸಿ, ಆಸ್ಪತ್ರೆ ಪ್ರವೇಶ ಚೀಟಿ ಪಡೆಯಲು ಕೌಂಟರ್‌ಗೆ ತೆರಳಿದರು. ಮುಷ್ಕರ ಹಿನ್ನೆಲೆಯಲ್ಲಿರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕೌಂಟರ್‌ ಬಳಿ ಉದ್ದನೆಯ ಸಾಲು ಇತ್ತು. ಹೀಗಾಗಿ ಸರತಿ ಸಾಲಿನಲ್ಲಿನಿಂತು ರವಿ ಚೀಟಿ ಪಡೆಯುವಷ್ಟರಲ್ಲೇ ಸವಿತಾ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದರು. ತಕ್ಷಣ ನರ್ಸ್‌ಗಳು ಸ್ಟ್ರೆಚರ್‌ ತಂದು ಸವಿತಾ ಹಾಗೂ ಮಗುವನ್ನು ಹೆರಿಗೆ ವಾರ್ಡ್‌ಗೆ ಶಿಫ್ಟ್‌ ಮಾಡಿದರು. ವೈದ್ಯರಾದ ಡಾ.ಸವಿತಾ ಮತ್ತು ಡಾ.ಸಂಜಯ್‌ ಅವರು ತಾಯಿಮಗುವಿಗೆ ತುರ್ತು ಚಿಕಿತ್ಸೆ ನೀಡಿದರು. ಕೆಲ ಹೊತ್ತಿನ ಬಳಿಕ ತಾಯಿಮಗು ಇಬ್ಬರನ್ನೂ ವಾರ್ಡ್‌ಗೆ ವರ್ಗಾಯಿಸಲಾಗಿದ್ದು , ಆರೋಗ್ಯದಿಂದ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ