ಆ್ಯಪ್ನಗರ

ಐಟಿ ದಾಳಿ ಬಿಜೆಪಿಯ ಕೀಳುಮಟ್ಟದ ರಾಜಕಾರಣ: ಸಚಿವ ಪುಟ್ಟರಾಜು

''ಥೂ ಇವರ ಯೋಗ್ಯತೆಗೆ ನಾಚಿಕೆ ಆಗಬೇಕು. ಇಂತಹ ನೀತಿಗೆಟ್ಟ, ಕೀಳುಮಟ್ಟದ ರಾಜಕಾರಣ ಯಾರು ಮಾಡಿರಲಿಲ್ಲ'' ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 4 Apr 2019, 5:00 am
ಮಂಡ್ಯ: ''ಥೂ ಇವರ ಯೋಗ್ಯತೆಗೆ ನಾಚಿಕೆ ಆಗಬೇಕು. ಇಂತಹ ನೀತಿಗೆಟ್ಟ, ಕೀಳುಮಟ್ಟದ ರಾಜಕಾರಣ ಯಾರು ಮಾಡಿರಲಿಲ್ಲ'' ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web bjps low level of politics for it ride minister puttaraju
ಐಟಿ ದಾಳಿ ಬಿಜೆಪಿಯ ಕೀಳುಮಟ್ಟದ ರಾಜಕಾರಣ: ಸಚಿವ ಪುಟ್ಟರಾಜು


ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಆತ್ಮಾನಂದ ಮನೆ ಮೇಲಿನ ಐಟಿ ದಾಳಿ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇಂತಹ ಸಾವಿರ ಐಟಿ ದಾಳಿ ಮಾಡಿದ್ರು ಕಾಂಗ್ರೆಸ್‌, ಜೆಡಿಎಸ್‌ ಮುಖಂಡರನ್ನು ಹೆದರಿಸಲು ಸಾಧ್ಯವಿಲ್ಲ. ಮಂಗಳವಾರ ರಾತ್ರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರ ಸಭೆ ನಡೆದಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುನ್ನಾರ ನಡೆಸುತ್ತಿರುವುದು ಇದರಿಂದಲೇ ಗೊತ್ತಾಗುತ್ತದೆ,'' ಎಂದರು.

''ಆತ್ಮಾನಂದ ಎಲ್ಲಾ ಅಂಕಿ ಆಂಶಗಳನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಐಟಿ ಅಧಿಕಾರಿಗಳೇ ಶಹಭಾಷ್‌ಗಿರಿ ಕೊಟ್ಟು ಹೊರಡುತ್ತಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಒಬ್ಬ ಕೋಳಿ ವ್ಯಾಪಾರ ಮಾಡುವ ಜೆಡಿಎಸ್‌ ಕಾರ‍್ಯಕರ್ತನ ಮೇಲೆ ದಾಳಿ ಮಾಡುತ್ತಾರೆ ಅಂದರೆ ಇವರ ಯೋಗ್ಯತೆಗೆ ನಾಚಿಕೆಯಾಗಬೇಕು. ದೇಶದ ಇತಿಹಾಸದಲ್ಲಿ ಚುನಾವಣೆ ಸಮಯದಲ್ಲಿ ಇಂಥ ನೀತಿಗೆಟ್ಟ ರಾಜಕಾರಣ ಯಾರೂ ಮಾಡಿರಲಿಲ್ಲ. ಅಧಿಕಾರ ಇದೆ ಎಂದು ಕೀಳುಮಟ್ಟದ ರಾಜಕಾರಣ ಮಾಡಿದರೆ ಮುಂದೆ ಜಿಲ್ಲೆಯ ಜನ ಉತ್ತರಿಸುತ್ತಾರೆ. ಜಿಲ್ಲೆಯಲ್ಲಿ ಒನ್‌ಸೈಡ್‌ ಚುನಾವಣೆ ಆಗುತ್ತದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಗೆ ನೀಡಿರುವ ಕೊಡುಗೆಯ ಋುಣವನ್ನು ಜನ ತೀರಿಸುತ್ತಾರೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ