ಆ್ಯಪ್ನಗರ

ಭೀಮಾನಾಯಕ್ ಸಿಐಡಿ ಕಸ್ಟಡಿ ಮತ್ತೆ ಏಳು ದಿನ ವಿಸ್ತರಣೆ

ಕಾರು ಚಾಲಕ ರಮೇಶ್‌ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯಕ್ ಅವರನ್ನು ಸಿಐಡಿ ಮತ್ತೆ ಏಳು ದಿನ ವಶಕ್ಕೆ ಪಡೆದುಕೊಂಡಿದೆ.

ವಿಕ ಸುದ್ದಿಲೋಕ 17 Dec 2016, 2:09 pm
ಮಂಡ್ಯ: ಜನಾರ್ದನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣವನ್ನು ಬಿಳಿಯಾಗಿಸಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯಕ್ ಅವರನ್ನು ಕಾರು ಚಾಲಕ ರಮೇಶ್‌ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ಮತ್ತೆ ಏಳು ದಿನ ವಶಕ್ಕೆ ಪಡೆದುಕೊಂಡಿದೆ.
Vijaya Karnataka Web blackmoney bheema nayaks cid custody extend to one week
ಭೀಮಾನಾಯಕ್ ಸಿಐಡಿ ಕಸ್ಟಡಿ ಮತ್ತೆ ಏಳು ದಿನ ವಿಸ್ತರಣೆ


ವಿಚಾರಣೆಗಾಗಿ ಕಳೆದ ಐದು ದಿನಗಳ ಹಿಂದೆ ಭೀಮಾನಾಯಕ್ ಮತ್ತು ಅವರ ಕಾರು ಚಾಲಕ ಮಹಮ್ಮದ್ ಅವರನ್ನು ಸಿಐಡಿ ವಶಕ್ಕೆಒಪ್ಪಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಸಿಐಡಿ ಅಧಿಕಾರಿಗಳು ಇಂದು ಇಬ್ಬರನ್ನೂ ಮದ್ದೂರು ಜೆಎಂಎಫ್‌ ಕೋರ್ಟ್‌ಗೆ ಹಾಜರುಪಡಿಸಿದ್ದು, ಸಿಐಡಿ ಕಸ್ಟಡಿಯನ್ನು ಡಿಸೆಂಬರ್ 23ರವರೆಗೆ ವಿಸ್ತರಿಸಿ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶ ಪಿ.ಎಂ.ಪ್ರಕಾಶ್ ಆದೇಶ ನೀಡಿದ್ದಾರೆ.

ಭೀಮಾ ನಾಯಕ್ ಅವರು ರೆಡ್ಡಿ ಅವರ ಮಗಳ ಮದುವೆಗಾಗಿ 100 ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಶೇ.20ರಷ್ಟು ಕಮಿಷ್ ಪಡೆದಿದ್ದು, ಈ ವಿಚಾರ
ಬೇರೆಯವರಿಗೆ ಹೇಳಿದರೆ ಕೊಲೆ ಮಾಡಿಸುವುದಾಗಿ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ ಪತ್ರದಲ್ಲಿ ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ