ಆ್ಯಪ್ನಗರ

ಶಾಶ್ವತ ತಡೆಗೋಡೆ ನಿರ್ಮಿಸಿ: ಎಣ್ಣೆಹೊಳೆಕೊಪ್ಪಲು ಗ್ರಾಮಸ್ಥರ ಮನವಿ

ಪಾಂಡವಪುರ: ಪ್ರವಾಹ ಭೀತಿ ಎದುರಿಸುತ್ತಿರುವ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಜಿಲ್ಲಾಧಿಕಾರಿ ಮಂಜುಶ್ರೀ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 16 Aug 2018, 8:36 pm
ಪಾಂಡವಪುರ: ಪ್ರವಾಹ ಭೀತಿ ಎದುರಿಸುತ್ತಿರುವ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಜಿಲ್ಲಾಧಿಕಾರಿ ಮಂಜುಶ್ರೀ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web build a permanent barrier request the villagers of henneholekoppalu
ಶಾಶ್ವತ ತಡೆಗೋಡೆ ನಿರ್ಮಿಸಿ: ಎಣ್ಣೆಹೊಳೆಕೊಪ್ಪಲು ಗ್ರಾಮಸ್ಥರ ಮನವಿ


‘‘ಕೆಆರ್‌ಎಸ್ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಟ್ಟಾಗ ಪ್ರತಿಬಾರಿಯೂ ಗ್ರಾಮ ಪ್ರವಾಹ ಸ್ಥಿತಿ ಎದುರಿಸುತ್ತೇವೆ. 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಗ್ರಾಮದ ಸಂಪರ್ಕವೇ ಕಡಿತ ಗೊಂಡು ದ್ವೀಪದಂತಾಗುತ್ತದೆ. ಹಾಗಾಗಿ ಎಣ್ಣೆಹೊಳೆ ಕೊಪ್ಪಲು ಗ್ರಾಮವನ್ನು ಪ್ರವಾಹ ಭೀತಿಮುಕ್ತ ಗ್ರಾಮ ವನ್ನಾಗಿ ಮಾಡಲು ಶಾಶ್ವತ ಪರಿಹಾರ ಕಂಡುಕೊಡಿ, ಕಾವೇರಿ ನದಿ ತೀರಕ್ಕೆ ತಡೆಗೋಡೆ ನಿರ್ಮಿಸಿ’’ ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಸಚಿವರು, ‘‘ಗ್ರಾಮದ ಜನತೆ ಭೀತಿಗೆ ಒಳಗಾಗುವುದು ಬೇಡ. ನಿಮ್ಮೊಂದಿಗೆ ಸರಕಾರ ಸದಾ ಇರುತ್ತದೆ. ಇನ್ನೂ ಒಂದು ಗಂಟೆಯೊಳಗೆ ನನ್ನ ಇಲಾಖೆಯಾದ ಸಣ್ಣನೀರಾವರಿ ಇಲಾಖೆ ಎಂಜಿನಿಯರ್ ಗ್ರಾಮಕ್ಕೆ ಆಗಮಿಸಲಿದ್ದಾರೆ. ನದಿ ಪ್ರವಾಹದ ನೀರನ್ನು ತಡೆಗಟ್ಟಲು ಏನು ಅಭಿವೃದ್ಧಿ ಕೆಲಸ ಆಗಬೇಕೋ ಅದರ ಬಗ್ಗೆ ಎಂಜಿನಿಯರ್‌ಗೆ ಮಾಹಿತಿ ನೀಡಿ. ಎಷ್ಟೇ ಕೋಟಿ ವೆಚ್ಚವಾದರೂ ಅದನ್ನು ಅಭಿವೃದ್ಧಿಪಡಿಸುತ್ತೇನೆ. ಜನತೆ ಆತಂಕಕ್ಕೆ ಒಳಗಾಗುವುದು ಬೇಡ’’ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

‘‘ಕ್ಯಾತನಹಳ್ಳಿ, ಬ್ಯಾಟೆತಿಮ್ಮನಕೊಪ್ಪಲು ಕಡೆಯಿಂದ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಯನ್ನು 2 ಲಕ್ಷ ಕ್ಯೂಸೆಕ್ ನೀರು ಬಂದರು ತುಂಬಿಕೊಳ್ಳ ಬಾರದು ಎನ್ನುವಷ್ಟರ ಮಟ್ಟಿಗೆ ಎತ್ತರಗೊಳಿಸುವುದಕ್ಕೆ ಕ್ರಮ ಕೈಗೊಳ್ಳಿ’’ ಎಂದು ಲೋಕೋಪಯೋಗಿ ಇಲಾಖೆ ಎಇಇಗೆ ಸೂಚಿಸಿದರು.

ಈಗಾಗಲೆ ನೆರೆ ಸಂಕಷ್ಟದ ಪ್ರದೇಶಕ್ಕೆ ತೆರಳಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೆ. ಅದರಂತೆ ಡಿಸಿ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಂಜೆ ವೇಳೆಗೆ ನದಿಯಲ್ಲಿ ಮತ್ತಷ್ಟು ಪ್ರಮಾಣ ನೀರು ಬಿಡುವ ಸಾಧ್ಯತೆಗಳಿದ್ದು ಗ್ರಾಮಸ್ಥರು, ಜನತೆ, ಮಕ್ಕಳು, ಜಾನುವಾರುಗಳನ್ನು ನದಿ ತೀರಕ್ಕೆ ಬಿಡದಂತೆ ಎಚ್ಚರಿಕೆಯಿಂದಿಡಿ ಎಂದು ಮನವಿ ಮಾಡಿದರು.

ನದಿ ತೀರಕ್ಕೆ ಬರಬೇಡಿ: ಗ್ರಾಮದ ನದಿ ದಡಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ರಾಸುಗಳನ್ನು ತೊಳೆಯುವುದಕ್ಕೆ ನದಿಗೆ ತೆರಳುತ್ತಿದ್ದ ಜನರನ್ನು ತಡೆದರು. ಬಳಿಕ ಅಂಗನವಾಡಿ, ಸರಕಾರಿ ಶಾಲೆ ಭೇಟಿ ನೀಡಿ ಪರಿಶೀಲಿಸಿದರು. ನದಿ ನೀರು ಗ್ರಾಮದ ಅಂಗನವಾಡಿ ಕಟ್ಟಡ ಕಾಂಪೌಂಡ್ ಬಳಿಗೇ ಬಂದಿರುವುದರಿಂದ ಮಕ್ಕಳ ಸುರಕ್ಷತೆಗಾಗಿ ರಜೆ ನೀಡುವಂತೆ ಸಿಡಿಪಿಒಗೆ ಸೂಚಿಸಿದರು. ಅಂಗನವಾಡಿ, ಶಾಲೆ ಮಕ್ಕಳನ್ನು ನದಿ ತಡಕ್ಕೆ ಕಳುಹಿಸಬೇಡಿ ಎಂದು ಶಿಕ್ಷಕರಿಗೆ ಸೂಚಿಸಿದರು.

ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಡಿವೈಎಸ್‌ಪಿ ವಿಶ್ವನಾಥ್, ಟಿಎಚ್‌ಒ ಅರವಿಂದ್, ಸಿಡಿಪಿಒ ಎಚ್.ಎನ್.ಸುರೇಶ್, ಮೇಲ್ವಚಾರಕಿ ಎಂ.ಭಾಗ್ಯ, ಅಂಗನ ವಾಡಿ ಕಾರ‌್ಯಕರ್ತೆ ಎಸ್.ಸೌಮ್ಯ, ಜೆಡಿಎಸ್ ಮುಖಂಡ ರಾದ ದಿಲೀಪ್, ಚೇತನ್ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ