ಆ್ಯಪ್ನಗರ

BWSSB | ಬೆಂಗಳೂರಿಗೆ ಕಾವೇರಿ ನೀರು ಪಂಪ್‌ ಮಾಡುವ ಟಿ.ಕೆ ಹಳ್ಳಿಯ ಘಟಕಗಳು ಜಲಾವೃತ: ನೀರು ಪೂರೈಕೆಯಲ್ಲಿ ವ್ಯತ್ಯಯ

Bengaluru Drinking Water: ಜಲರೇಚಕ ಘಟಕದ ಪಂಪ್‌ಹೌಸ್ ಹಾಗೂ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಡೆಯಾಗಿವೆ. ಬೆಂಗಳೂರಿಗೆ ನೀರು ಪೂರೈಸುವ ಘಟಕ ಇದಾಗಿದ್ದು, 5 ಯೋಜನೆಗಳಲ್ಲಿ ನೀರು ಪೂರೈಸಲಾಗುತ್ತಿದೆ. ಮೊದಲ ಎರಡು ಯೋಜನೆಗಳ ಘಟಕಗಳಿಗೆ ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಆದರೆ, ಉಳಿದ 3 ಘಟಕಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಟಿ.ಕೆ ಹಳ್ಳಿಯ ಮೂರನೇ ಘಟಕ ಹಾಗೂ ನಾಲ್ಕನೇ ಘಟಕದ ಯಂತ್ರಗಾರಗಳು ನೀರಲ್ಲಿ ಮುಳುಗಿರುವ ಪರಿಣಾಮ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ.

Edited byಹೇಮಂತ್ ಕುಮಾರ್ ಎಸ್ | Vijaya Karnataka Web 5 Sep 2022, 5:22 pm

ಹೈಲೈಟ್ಸ್‌:


  • ಜಲರೇಚಕ ಘಟಕದ ಪಂಪ್‌ಹೌಸ್ ಹಾಗೂ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಡೆ
  • ತೊರೆಕಾಡನಹಳ್ಳಿ ಬಳಿಯಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಲಸಂಗ್ರಹಾಗಾರ
  • ಈಗಾಗಲೇ ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್‌ ಹಾಗೂ ಅಧಿಕಾರಿಗಳು ಸ್ಥಳದಲ್ಲಿದ್ದಾರೆ
  • ಬೆಂಗಳೂರಿಗೆ ನೀರು ಪೂರೈಕೆಯಲ್ಲಿ ಎರಡು ದಿನ ವ್ಯತ್ಯವಾಗುವ ಸಾಧ್ಯತೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bwssb TK Halli plant flooded
ನೀರು ಪಂಪ್‌ ಮಾಡುವ ಟಿ.ಕೆ ಹಳ್ಳಿಯ ಘಟಕ
ಮಳವಳ್ಳಿ: ತಾಲೂಕಿನ ತೊರೆಕಾಡನಹಳ್ಳಿ ಬಳಿಯಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಲಸಂಗ್ರಹಾಗಾರವು ಮಳೆಯಿಂದಾಗಿ ಜಲಾವೃತಗೊಂಡಿದೆ.
ಜಲರೇಚಕ ಘಟಕದ ಪಂಪ್‌ಹೌಸ್ ಹಾಗೂ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಡೆಯಾಗಿವೆ. ಬೆಂಗಳೂರಿಗೆ ನೀರು ಪೂರೈಸುವ ಘಟಕ ಇದಾಗಿದ್ದು, 5 ಯೋಜನೆಗಳಲ್ಲಿ ನೀರು ಪೂರೈಸಲಾಗುತ್ತಿದೆ. ಮೊದಲ ಎರಡು ಯೋಜನೆಗಳ ಘಟಕಗಳಿಗೆ ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಆದರೆ, ಉಳಿದ 3 ಘಟಕಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ.
ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಬಂದ್‌: ಮಂಡ್ಯದಿಂದ ಬದಲಿ ಮಾರ್ಗದಲ್ಲಿ ಬೆಂಗಳೂರು ಸೇರಿದ ವಾಹನಗಳು
ಟಿ.ಕೆ ಹಳ್ಳಿಯ ಮೂರನೇ ಘಟಕ ಹಾಗೂ ನಾಲ್ಕನೇ ಘಟಕದ ಯಂತ್ರಗಾರಗಳು ನೀರಲ್ಲಿ ಮುಳುಗಿರುವ ಪರಿಣಾಮ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ. ಸೋಮವಾರ ಹಾಗೂ ಮಂಗಳವಾರ ಅರ್ಧ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ BWSSB ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಟಿ.ಕೆ ಹಳ್ಳಿಯ ಘಟಕಗಳು ಜಲಾವೃತ


'ಯಂತ್ರೋಪಕರಣ ಮೂಲಕ ನೀರು ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಸಾಯಂಕಾಲ ನಿಯಂತ್ರಣಕ್ಕೆ ಬರಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಹ ಸ್ಥಳಕ್ಕೆ ತೆರಳುತ್ತಿದ್ದು, ಈಗಾಗಲೇ ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್‌ ಹಾಗೂ ಅಧಿಕಾರಿಗಳನ್ನು ಕಳಿಸಲಾಗಿದೆ.
Rain In Bengaluru : ಮಳೆಗೆ ತತ್ತರಿಸಿದ ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ

ನೀರು ಪಂಪ್‌ ಮಾಡುವ ಟಿ.ಕೆ ಹಳ್ಳಿಯ ಘಟಕಗಳು ಜಲಾವೃತ


ಬೆಂಗಳೂರಿಗೆ 3 ದಿನ ಯೆಲ್ಲೊ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಇನ್ನೂ ಮೂರು ದಿನ ಮುಂದುವರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೆ.5ರಿಂದ ಸೆ.7ರವರೆಗೆ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ರಾಮನಗರ, ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊಅಲರ್ಟ್‌ ನೀಡಿದೆ.

ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಭಾನುವಾರ ಬೆಳಗ್ಗೆ ಕೊನೆಯಾದ 24 ಗಂಟೆ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಬೀದರ್‌, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಚಿಕ್ಕಮಗಳೂರು, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣ, ತುಮಕೂರಿನಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.

Rain In Bengaluru : ರಸ್ತೆಯಲ್ಲಿ ನಿಂತ ಮಳೆನೀರು ತೆರವಿಗೆ ಸೂಚನೆ: ಬಸವರಾಜ ಬೊಮ್ಮಾಯಿ
ಮಳೆಯಿಂದ ಹಾನಿಗೊಳಗಾದ ಕೆರೆಗಳನ್ನು ಸರಿಪಡಿಸಲು ಕ್ರಮ

ಮಂಡ್ಯ : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಮಳೆಯಿಂದ ಹಾನಿಗೊಳಗಾದ ಕೆರೆಗಳನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮ ವಹಿಸುತ್ತೇವೆ ಎಂದು ಜಿಲ್ಲಾ.ಉಸ್ತುವಾರಿ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಗಳಾದ ಜಯರಾಂ ರಾಯಪುರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು. ಜಿಲ್ಲೆಯಲ್ಲಿಹೆಚ್ಚಿನ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದೆ. ಹಾಗಾಗಿ ಹಾನಿಗೊಳಗಾದ ಕೆ.ಆರ್‌.ಪೇಟೆ ತಾಲೂಕಿನ ಅಘಲಯ ಕೆರೆ, ದೊಡ್ಡ ಕ್ಯಾತನ ಕೆರೆ, ಮಾವಿನ ಕಟ್ಟೆಕೊಪ್ಪಲು ಕೆರೆ ಹಾಗೂ ಲೋಕನಹಳ್ಳಿಯ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಧಿಕಾರಿಗಳು ಯಾವ ರೀತಿ ಪರಿಹಾರ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
Rain In Bengaluru: ಬೆಂಗಳೂರಿನಲ್ಲಿ ವರುಣಾರ್ಭಟ: ರಸ್ತೆ, ಬಡಾವಣೆ ಜಲಾವೃತ, ತತ್ತರಿಸಿದ ಜನಸಾಮಾನ್ಯರು
ಚಿಕ್ಕ ಮಂಡ್ಯ ಬಿಡಿ ಕಾಲನಿಯಲ್ಲಿ ನೀರು ನುಗ್ಗಿರುವ ಹಾಗೂ ಕೆನಲ್‌, ರಸ್ತೆ ಹಾನಿಗಳನ್ನು ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಚನೆಯನ್ನು ನೀಡಲಾಗಿದೆ ಎಂದರು.

ಮನೆಹಾನಿಗಳಲ್ಲಿ ಸಂಪೂರ್ಣಹಾನಿ 42, ತೀವ್ರ ಹಾನಿ159, ಭಾಗಶಃ ಹಾನಿ 707, ಒಟ್ಟು 908 ಮನೆ ಹಾನಿಯಾಗಿದ್ದು, 5,44,65,100 ರೂಗಳನ್ನು ಪರಿಹಾರವಾಗಿ ನೀಡಲಾಗಿದೆ ಎಂದರು.
Rain In Bengaluru : ಸಾರ್ವಜನಿಕರೇ ಗಮನಿಸಿ: ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಮೂಲ ಸೌಕರ್ಯಗಳ ಹಾನಿಗಳಲ್ಲಿಹಳ್ಳಿ ಪ್ರದೇಶದಲ್ಲಿ255.30 ಕಿ. ಮೀ ರಸ್ತೆ ಹಾನಿಯಾಗಿದೆ. ಜಿಲ್ಲೆಯಲ್ಲಿಒಟ್ಟು 260 ಶಾಲೆಗಳು, 01 ಅಂಗನವಾಡಿಗಳು, 28 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1129 ವಿದ್ಯುತ್‌ ಕಂಬಗಳು ಹಾಗೂ 35 ಟಿ.ಸಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಶಾಲೆಗಳ ದುರಸ್ತಿಗೆ 466.ಲಕ್ಷ, ಅಂಗನವಾಡಿ ಕೇಂದ್ರಕ್ಕೆ 2 ಲಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 56 ಲಕ್ಷ, ಲೋಕೋಪಯೋಗಿ ಇಲಾಖೆಯ ದುರಸ್ತಿ ಕಾಮಗಾರಿಗಳಿಗೆ 104 ಲಕ್ಷ ಪ್ರವಾಹ/ಮಳೆ ಹಾನಿಯಾಗಿರುವುದನ್ನು ಸರಿಪಡಿಸಲು ಇಲಾಖಾವಾರು ಅನುದಾನ ಬಿಡುಗಡೆಗೆ ಅನುಮೋದನೆ ನೀಡಿರುವ ವಿವರಗಳನ್ನು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದ ಮಳೆಯಿಂದ ಹಾನಿಯಾದ ಅಂದಾಜು ನಷ್ಟ ರೂ 759.22 ಕೋಟಿಗಳಾಗಿದ್ದು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರು ಡಾ. ಎಚ್‌. ಎಲ್‌ ನಾಗರಾಜು ಉಪ ವಿಭಾಗಾಧಿಕಾರಿ ಆರ್‌ .ಐಶ್ವರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ