ಆ್ಯಪ್ನಗರ

ಮಂಡ್ಯ: ರಸ್ತೆಯಲ್ಲಿ ಹಾಕಿದ್ದ ಹುರುಳಿ ರಾಶಿಗೆ ಸಿಕ್ಕು ಕಾರು ಭಸ್ಮ..! ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನಲ್ಲಿ ಶನಿವಾರ ಕಾರ್‌ವೊಂದು ಬೆಂಕಿಗಾಹುತಿಯಾಗಿದೆ. ರಸ್ತೆಯಲ್ಲಿ ಒಕ್ಕಣೆ ಮಾಡಲು ಹಾಕಿದ್ದ ಹುರುಳಿ ಗಿಡಗಳು ಚಕ್ರಕ್ಕೆ ಸಿಲುಕಿ ಕಾರ್‌ಗೆ ಬೆಂಕಿ ತಗುಲಿದ್ದು, ಭಾರೀ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ.

Vijaya Karnataka Web 24 Jan 2021, 5:50 pm
ಕೆ.ಆರ್‌.ಪೇಟೆ (ಮಂಡ್ಯ): ರೈತರು ರಸ್ತೆಯಲ್ಲಿ ಒಕ್ಕಣೆ ಮಾಡಲು ಹಾಕಿದ್ದ ಹುರುಳಿ ಗಿಡದ ರಾಶಿಯು ಚಕ್ರಕ್ಕೆ ಸಿಲುಕಿದ ಪರಿಣಾಮ ಪ್ರವಾಸಿಗರೊಬ್ಬರ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ತಾಲೂಕಿನಲ್ಲಿ ಶನಿವಾರ ನಡೆದಿದೆ.
Vijaya Karnataka Web 7
ಸಾಂದರ್ಭಿಕ ಚಿತ್ರ


ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ರಾಜಗೋಪಾಲ್‌ ಕುಟುಂಬದವರು ತಾಲೂಕಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದಿದ್ದರು. ಶನಿವಾರ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಕಾರಿನಲ್ಲಿ ತಾಲೂಕಿನ ಪುರಾಣ ಪ್ರಸಿದ್ಧ ಭೂವರಾಹನಾಥ ಸ್ವಾಮಿಯ ದೇಗುಲ ವೀಕ್ಷಣೆಗೆ ಬರುತ್ತಿದ್ದ ಸಮಯದಲ್ಲಿ ದೇವಸ್ಥಾನಕ್ಕೆ 2-3 ಕಿಮೀ ದೂರದಲ್ಲಿ ರಸ್ತೆಗೆ ಒಕ್ಕಣೆ ಮಾಡಲು ಹರಡಿದ್ದ ಒಣಗಿದ ಹುರುಳಿಸೊಪ್ಪಿನ ರಾಶಿಯ ಮೇಲೆ ಕಾರು ಚಲಿಸುವಾದ ಚಕ್ರಕ್ಕೆ ಸೊಪ್ಪು ಸಿಕ್ಕಿಕೊಂಡು ಬೆಂಕಿ ತಗುಲಿ ಪೂರ್ಣ ಆಹುತಿಯಾಗಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ರಾಜಗೋಪಾಲ್‌, ಅವರ ತಾಯಿ, ಹೆಂಡತಿ ಮತ್ತು ಮಗಳು ಕೂಡಲೇ ಕಾರಿನಿಂದ ಇಳಿದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಧಗಧಗನೆ ಹೊತ್ತಿಕೊಂಡು ಭಸ್ಮವಾಗಿದೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಕೆಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ