ಆ್ಯಪ್ನಗರ

11ಕ್ಕೆ ಗದ್ದೆಯಲ್ಲಿ ಸಿಎಂ ಎಚ್‌ಡಿಕೆ ನಾಟಿ, ರೈತರೊಂದಿಗೆ ಊಟ: ಸ್ಥಳ ಪರಿಶೀಲಿಸಿದ ಸಚಿವ ಸಿಎಸ್‌ಪಿ

ವಿಕ ಸುದ್ದಿಲೋಕ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊರವಲಯದ ಹಳೇಗದ್ದೆ ಕೃಷಿ ಅಚ್ಚುಕಟ್ಟು ಪ್ರದೇಶದಲ್ಲಿ ಆ11ರಂದು ಮುಖ್ಯಮಂತ್ರಿ ಎಚ್‌ಡಿ...

Vijaya Karnataka 8 Aug 2018, 5:00 am
ಪಾಂಡವಪುರ: ತಾಲೂಕಿನ ಸೀತಾಪುರ ಗ್ರಾಮದ ಹೊರವಲಯದ ಹಳೇಗದ್ದೆ ಕೃಷಿ ಅಚ್ಚುಕಟ್ಟು ಪ್ರದೇಶದಲ್ಲಿ ಆ.11ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭತ್ತದ ನಾಟಿ ಕಾರ‍್ಯಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಮಂಗಳವಾರ ಪರಿಶೀಲನೆ ನಡೆಸಿದರು.
Vijaya Karnataka Web cm kumaraswamy spend time with farmers review by minister csp
11ಕ್ಕೆ ಗದ್ದೆಯಲ್ಲಿ ಸಿಎಂ ಎಚ್‌ಡಿಕೆ ನಾಟಿ, ರೈತರೊಂದಿಗೆ ಊಟ: ಸ್ಥಳ ಪರಿಶೀಲಿಸಿದ ಸಚಿವ ಸಿಎಸ್‌ಪಿ


ಸೀತಾಪುರ ಗ್ರಾಮದ ಹೊರ ವಲಯದ ಹಳೇಗದ್ದೆ ಕೃಷಿ ಅಚ್ಚುಕಟ್ಟು ಪ್ರದೇಶ ಅರಳಕುಪ್ಪೆ ಗ್ರಾಮದ ಮಹದೇವಮ್ಮ ಎಂಬುವರಿಗೆ ಸೇರಿದ ಐದು ಎಕರೆ ಜಮೀನಿನಲ್ಲಿ ಆ.11ರಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡಲಿದ್ದಾರೆ. ಇಂಥದ್ದೊಂದು ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಪುಟ್ಟರಾಜು ಹೇಳಿದರು.

''ಸಿಎಂ ಕುಮಾರಸ್ವಾಮಿ ಆಗಮಿಸುವುದರಿಂದ ನಾಟಿ ಕಾರ‍್ಯ ನಡೆಯುವ ಸ್ಥಳದಲ್ಲಿ ಎಲ್ಲಾ ಸಿದ್ಧತೆ ಕೈಗೊಳ್ಳಬೇಕು. ಗದ್ದೆ ಬಯಲಿಗೆ ಆಗಮಿಸುವ ರಸ್ತೆಯ ಆರಂಭದಲ್ಲಿ ಡಾಂಬರೀಕರಣ ಪೂರ್ಣಗೊಳಿಸಬೇಕು ಜತೆಗೆ ಸಿಡಿಎಸ್‌ ನಾಲೆ ಏರಿಯ ಎರಡು ಬದಿಯಲ್ಲೂ ಗಿಡಗಂಟಿ ತೆರವುಗೊಳಿಸಬೇಕು ಸೇರಿದಂತೆ ಹಲವು ಸಿದ್ಧತೆ ಕುರಿತು ಅಧಿಕಾರಿಗೆ ತಾಕೀತು ಮಾಡಿದರು.

ನಂತರ ಮಾತನಾಡಿದ ಸಚಿವರು, ನಾಟಿ ಚಟುವಟಿಕೆಗಾಗಿ ಸುಮಾರು 5 ಎಕರೆ ಕೃಷಿ ಪ್ರದೇಶ ಸಿದ್ಧಪಡಿಸಲಾಗಿದೆ. ಅಂದು 11ಕ್ಕೆ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆಯೇ ಕಾವೇರಿ ನದಿ ತೀರದಲ್ಲಿರುವ ಕೊಳಬಾವಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಭತ್ತದ ನಾಟಿ ಕಾರ‍್ಯಕ್ಕೆ ಸ್ವತಃ ಸಿಎಂ ಅವರೇ ನಾಟಿ ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು.

ನಾಟಿ ಗದ್ದೆಯ ಮಧ್ಯಭಾಗದಲ್ಲಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಮೂವರು ವ್ಯಕ್ತಿಗಳು ಮಾತ್ರ ನಿಲ್ಲುವಂತಹ ಸಣ್ಣ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಭತ್ತದ ನಾಟಿ ಕಾರ‍್ಯಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ಆ ವೇದಿಕೆಯಿಂದಲೇ ಭಾಷಣ ಮಾಡಲಿದ್ದಾರೆ. ಅದನ್ನು ವೀಕ್ಷ ಣೆ ಮಾಡುವುದಕ್ಕಾಗಿ ಸಿಡಿಎಸ್‌ ನಾಲೆಯ ಏರಿಯ ಸಮೀಪ ಎರಡು ಎಲ್‌ಇಡಿ ಸ್ಕ್ರೀನ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜಿ.ಪಂ.ಸದಸ್ಯರಾದ ಸಿ.ಅಶೋಕ್‌, ತಿಮ್ಮೇಗೌಡ, ಜಿಲ್ಲಾಧಿಕಾರಿ ಮಂಜುಶ್ರೀ, ಎಸಿ ಆರ್‌.ಯಶೋಧ, ಕೃಷಿ ಇಲಾಖೆ ಜಂಟಿ ಉಪನಿರ್ದೇಶಕಿ ರಾಜುಸುಲೋಚನ, ತಹಸೀಲ್ದಾರ್‌ ಡಿ.ಹನುಮಂತರಾಯಪ್ಪ, ಕಾವೇರಿ ನೀರಾವರಿ ನಿಗಮ ಇಇ ಬಸವರಾಜೇಗೌಡ, ಕೃಷಿ ಅಧಿಕಾರಿ ಜಗದೀಶ್‌, ತಾ.ಪಂ.ಸದಸ್ಯ ಗೋಪಾಲೇಗೌಡ, ಅಲ್ಪಳ್ಳಿಗೋವಿಂದಯ್ಯ, ಚಿನಕುರಳಿ ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಕೆ.ಎಸ್‌.ಜಯರಾಮು, ಕಾಡೇನಹಳ್ಳಿ ರಾಮಚಂದ್ರು, ಕ್ಯಾತನಹಳ್ಳಿ ಚೇತನ್‌, ಮಹದೇವು, ವಿಶ್ವನಾಥ್‌ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ