ಆ್ಯಪ್ನಗರ

ಕೆರೆಗಳಲ್ಲೂ ನೀರಿನ ಸಂಗ್ರಹವಾಗಲಿ: ಶಾಸಕ

ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರಿನ ಆದ್ಯತೆಗಾಗಿ ಜಲಾಶಯಗಳಲ್ಲಿ ಡೆಡ್ ಸ್ಟೋರೇಜ್ ಮಾದರಿಯಲ್ಲಿ ಕೆರೆಗಳಲ್ಲೂ ಶಾಶ್ವತವಾಗಿ ನೀರು ಸಂಗ್ರಹ ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ಅಭಿಪ್ರಾಯ ಪಟ್ಟರು.

ವಿಕಸುದ್ದಿಲೋಕ 17 Aug 2017, 5:15 am
ಭಾರತೀನಗರ: ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರಿನ ಆದ್ಯತೆಗಾಗಿ ಜಲಾಶಯಗಳಲ್ಲಿ ಡೆಡ್ ಸ್ಟೋರೇಜ್ ಮಾದರಿಯಲ್ಲಿ ಕೆರೆಗಳಲ್ಲೂ ಶಾಶ್ವತವಾಗಿ ನೀರು ಸಂಗ್ರಹ ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ಅಭಿಪ್ರಾಯ ಪಟ್ಟರು.
Vijaya Karnataka Web collect water in lakes mla
ಕೆರೆಗಳಲ್ಲೂ ನೀರಿನ ಸಂಗ್ರಹವಾಗಲಿ: ಶಾಸಕ


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್, ಕಬಿನಿ, ಹಾರಂಗಿ, ತುಂಬಭದ್ರ ಸೇರಿದಂತೆ ಎಲ್ಲ ಜಲಾಶಯ ಗಳಲ್ಲೂ ಡೆಡ್ ಸ್ಟೋರೇಜ್ ನೀರನ್ನು ಕಾಯ್ದಿರಿಸಿಕೊಳ್ಳಲಾಗುತ್ತದೆ. ಅದೇ ಮಾದರಿ ಯಲ್ಲಿ ಕೆರೆಗಳಲ್ಲೂ ನೀರು ಸಂಗ್ರಹ ಮಾಡಿಕೊಳ್ಳುವುದು ಅಗತ್ಯ ಎಂದರು.

ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಬರ ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗಾಗಿ ನೀರು ಶೇಖರಿಸುವುದು ಒಳಿತು. ಸರಕಾರ ಈ ವ್ಯಾಪ್ತಿಯ ಕೆರೆ-ಕಟ್ಟೆಗಳನ್ನು ತುಂಬಿಸಲು ಮುಂದಾಗಿರುವುದು ಸ್ವಾಗತಾರ್ಹ. ಕೆರೆಗಳನ್ನು ತುಂಬಿಸಿದ ಬಳಿಕ ಆ ನೀರನ್ನು ಕೆರೆ ಸುತ್ತಮುತ್ತಲಿನ ಅಚ್ಚುಕಟ್ಟುದಾರರು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಕೆರೆಯಲ್ಲಿ ಸಂಗ್ರಹವಾಗುವ ನೀರು ಸಂಪೂರ್ಣ ಬಸಿದು ರೈತರ ಜಮೀನುಗಳಿಗೆ ಹೋಗು ತ್ತದೆ. ಮತ್ತೆ ಕೆರೆ ಖಾಲಿಯಾಗುತ್ತದೆ. ಇದನ್ನು ತಪ್ಪಿಸಲು ತೂಬಿನಿಂದ ನಾಲ್ಕೈದು ಅಡಿಗಳಷ್ಟು ಆಳದಲ್ಲಿ ಕೆರೆಗಳನ್ನು ನಿರ್ಮಿಸಿ, ಡೆಡ್ ಸ್ಟೋರೇಜ್ ಮಾದರಿ ಯಲ್ಲಿ ಶಾಶ್ವತವಾಗಿ ನೀರು ಸಂಗ್ರಹ ಮಾಡಬೇಕು ಎಂದು ಸಲಹೆ ನೀಡಿದರು.

ಪರ‌್ಯಾಯ ನಾಲೆ ನಿರ್ಮಿಸಿ: ಕನ್ನಂಬಾಡಿ ಅಣೆಕಟ್ಟೆಯಿಂದ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಕೆಲವು ಭಾಗಗಳಲ್ಲಿ ನಾಲೆಗಳೇ ಇರುವುದಿಲ್ಲ. ಇಂತಹ ಕಡೆಗಳಲ್ಲಿ ಜಮೀನುಗಳಿಗೆ ನೀರನ್ನು ಹಾಯಿಸಿ ಅದರ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ನಾಲಾ ಸಮೀಪ, ಸ್ವಲ್ಪ ದೂರ ಇರುವ ಂತಹ ಕೆರೆಗಳಿಗೆ ಪೈಪ್‌ಲೈನ್ ಅಥವಾ ಪ್ರತ್ಯೇಕ ನಾಲೆಗಳ ಮೂಲಕ ನೇರವಾಗಿ ಕೆರೆಗಳಿಗೆ ನೀರು ಹರಿಸುವು ದರಿಂದ ನೀರು ಪೋಲಾಗುವುದನ್ನು ತಪ್ಪಿಸ ಬಹುದಾಗಿದೆ ಎಂದರು. ಯಿಸಿದರು.

ಹನಿ ನೀರಾವರಿಗೆ ಒತ್ತು ನೀಡಿ: ಜಾಗತಿಕ ತಾಪಮಾನ ಏರಿಕೆಯಾಗು ತ್ತಿರುವ ಪ್ರಸ್ತುತ ದಿನಗಳಲ್ಲಿ ಮಳೆ ಕೊರತೆ ಯನ್ನು ಎದುರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಲಕ್ಷಾಮವನ್ನು ಎದುರಿಸು ವಂತಹ ವಾತಾವರಣ ಸೃಷ್ಟಿಯಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ. ನೀರಿನ ಮಿತ ಬಳಕೆ ಮಾಡಿಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆಗೆ ನೀರು ಉಳಿಸುವು ದು ಅಸಾಧ್ಯ. ಇದನ್ನು ತಪ್ಪಿಸಲು ಕಬ್ಬು ಬೆಳೆಗಾರರಿಗೆ ಸರಕಾರವೇ ಹನಿ ನೀರಾವರಿ ಯೋಜನೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ