ಆ್ಯಪ್ನಗರ

ಬೀದರ್‌ಗೆ ಆಗಮಿಸಿದ 5500 ಡೋಸ್ ಕೋವಿಶೀಲ್ಡ್ ಲಸಿಕೆ! ಡಿಎಚ್‌ಒ ಕಚೇರಿಯಲ್ಲಿ ದಾಸ್ತಾನು

ಬಹು ನಿರೀಕ್ಷಿತ ಕೋವಿಶೀಲ್ಡ್ ವ್ಯಾಕ್ಸಿನ್ ಗುರುವಾರ ಮಧ್ಯಾಹ್ನ ಬೀದರ್‌ಗೆ ತಲುಪಿತು. ಇಲ್ಲಿನ ಸರಕಾರಿ ಆಸ್ಪತ್ರೆ ಸಮೀಪದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಕಚೇರಿಯಲ್ಲಿ ಡಿಎಚ್‌ಒ ಡಾ. ವಿ.ಜಿ. ರೆಡ್ಡಿ ಅವರು ಲಸಿಕೆಗಳನ್ನು ಬರಮಾಡಿಕೊಂಡರು.

Vijaya Karnataka Web 14 Jan 2021, 6:50 pm
ಬೀದರ್‌: ಬಹು ನಿರೀಕ್ಷಿತ ಕೋವಿಶೀಲ್ಡ್ ವ್ಯಾಕ್ಸಿನ್ ಗುರುವಾರ ಮಧ್ಯಾಹ್ನ ಬೀದರ್‌ಗೆ ತಲುಪಿತು. ಇಲ್ಲಿನ ಸರಕಾರಿ ಆಸ್ಪತ್ರೆ ಸಮೀಪದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಕಚೇರಿಯಲ್ಲಿ ಡಿಎಚ್‌ಒ ಡಾ. ವಿ.ಜಿ. ರೆಡ್ಡಿ ಅವರು ಲಸಿಕೆಗಳನ್ನು ಬರಮಾಡಿಕೊಂಡರು.
Vijaya Karnataka Web bidar vaccine


ಲಸಿಕೆ ಹೊತ್ತು ಬಂದ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಬೀಗ ತೆಗೆದು, ಲಸಿಕೆಗಳನ್ನು ಡಿಎಚ್‌ಒ ಕಚೇರಿಯ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲಾಯಿತು. ಕೋಲ್ಡ್ ಸ್ಟೋರೇಜ್‌ಗೂ ಪೂಜೆ ಸಲ್ಲಿಸುವ ಮೂಲಕ ಲಸಿಕೆಗಳನ್ನು ತಂಪಿನಲ್ಲಿ ಇಡಲಾಯಿತು.

ಕೋವಿಶೀಲ್ಡ್ ಕಂಪೆನಿಯ 5500 ಡೋಸ್ ಲಸಿಕೆಗಳನ್ನು ಬೀದರ್ ಜಿಲ್ಲೆಗೆ ನೀಡಲಾಗಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚಿನ ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಡಿಎಚ್‌ಒ ಡಾ. ವಿ.ಜಿ. ರೆಡ್ಡಿ ಹೇಳಿದರು.

ಬೀದರ್‌: ಓರ್ವ SSLC ವಿದ್ಯಾರ್ಥಿ, 10 ಶಿಕ್ಷಕರಿಗೆ ಕೊರೊನಾ‌..! ದ್ವಿತೀಯ ಪಿಯುಸಿ ಹಾಜರಾತಿಯಲ್ಲಿ ಹೆಚ್ಚಳ

ಜನವರಿ 16 ರಂದು ಜಿಲ್ಲೆಯ ಆರು ಕಡೆಗಳಲ್ಲಿ ಲಸಿಕೆ ನೀಡಲು ಚಾಲನೆ ನೀಡಲಾಗುತ್ತಿದೆ. ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆ, ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ, ಔರಾದ್ ತಾಲೂಕು ಆಸ್ಪತ್ರೆಗಳು ಹಾಗೂ ಬೀದರ್ ತಾಲೂಕಿನ ಆಣದೂರು ಗ್ರಾಮದ ಪಿಎಚ್‌ಸಿ. ಹೀಗೆ ಆರು ಕಡೆಗಳಲ್ಲಿ ಲಸಿಕೆಗೆ ಚಾಲನೆ ನೀಡಲಾಗುತ್ತದೆ ಎಂದು ಡಿಎಚ್‌ಒ ಹೇಳಿದರು.

ಬೀದರ್: ನೇಣು ಬಿಗಿದ ರೀತಿಯಲ್ಲಿ ಸಾರಿಗೆ ಬಸ್ ಚಾಲಕನ ಶವ ಪತ್ತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ