ಆ್ಯಪ್ನಗರ

ದಂಪತಿ ಹತ್ಯೆ: ಆರೋಪಿ ಬಂಧನ

ತಾಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ಮನೆಗೆ ನುಗ್ಗಿ ದಂಪತಿಗಳನ್ನು ಮಾರಕಾಸಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 4 Aug 2019, 7:56 pm
ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ಮನೆಗೆ ನುಗ್ಗಿ ದಂಪತಿಗಳನ್ನು ಮಾರಕಾಸಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web MDY-MDY04AUGKRP11


ಅದೇ ರಾಯಸಮುದ್ರ ಗ್ರಾಮದ ಯೋಗೇಶ್(32) ಬಂಧಿತ ಆರೋಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಮಾತನಾಡಿ, ‘‘ಜು.12 ರಂದು ಗ್ರಾಮದಲ್ಲಿ ಉಪವಾಸದ ಹಬ್ಬದ ದಿನ ಕೊಲೆ ಮಾಡಿ ಜು.15ರವರೆಗೆ ರಾಯಸಮುದ್ರದ ಲ್ಲಿಯೇ ಇದ್ದು ಜುಲೈ 15ರಂದು ಬೆಂಗಳೂರಿಗೆ ತೆರಳಿರು ತ್ತಾನೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೂ ಮೃತ ಲಿಲತಮ್ಮಾ ಪದೇ ಪದೇ ಜಗಳ ಮಾಡುತ್ತಿದ್ದಳು. ಇದರಿಂದ ಬೇಸತ್ತು ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿ ದ್ದಾನೆ,’’ಎಂದು ತಿಳಿಸಿದ್ದಾರೆ.

ಈ ಜೋಡಿ ಕೊಲೆ ಪ್ರಕರಣವು ರಾಜ್ಯದಾದ್ಯಂತ ಸಂಚಲನವನ್ನು ಸಷ್ಟಿಸಿತ್ತು. ಇದಕ್ಕಾಗಿ ನಾಗಮಂಗಲ ಡಿವೈಎಸ್‌ಪಿ ವಿಶ್ವನಾಥ್ ಅವರ ನೇತತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸುಧಾಕರ್, ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್, ಪೇದೆಗಳಾದ ಪ್ರಕಾಶ್, ಚಂದ್ರಶೇಖರ್, ಬಸವರಾಜು, ರಘು, ಪ್ರಶಾಂತಕುಮಾರ್, ಗುರುಪ್ರಸಾದ್, ಮಂಜುನಾಥ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. 15 ದಿನಗಳಲ್ಲಿಯೇ ಪ್ರಕರಣವನ್ನು ಬೇಧಿಸಿ ಆರೋಪಿ ಯೋಗೇಶ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿ ಕರೆತರಲಾಗಿದೆ. ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಗುವುದು,’’ ಎಂದು ಎಸ್‌ಪಿ ಶಿವಪ್ರಕಾಶ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ