ಆ್ಯಪ್ನಗರ

ಸಾಲ ಬಾಧೆ: ಇಬ್ಬರು ರೈತರು ಆತ್ಮಹತ್ಯೆ

ಸಾಲಬಾಧೆಯಿಂದ ರೈತರಿಬ್ಬರು ನೇಣಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

Vijaya Karnataka 15 Dec 2017, 3:00 am
ಪಿರಿಯಾಪಟ್ಟಣ: ಸಾಲಬಾಧೆಯಿಂದ ರೈತರಿಬ್ಬರು ನೇಣಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
Vijaya Karnataka Web debt relief two farmers commit suicide
ಸಾಲ ಬಾಧೆ: ಇಬ್ಬರು ರೈತರು ಆತ್ಮಹತ್ಯೆ

ಮುದ್ದನಹಳ್ಳಿ ಗೇಟ್‌ನ ವಾಸಿ ಲೇಟ್‌ ಜವರಯ್ಯ ಅವರ ಮಗ ಮಂಜುನಾಥ (38) ಹಾಗೂ ಅಬಟೂರು ಮಲ್ಲೇಗೌಡ ಕೊಪ್ಪಲಿನ ಸಣ್ಣೇಗೌಡರ ಮಗ ಚಂದ್ರೇಗೌಡ (68) ಆತ್ಮಹತ್ಯೆ ಮಾಡಿಕೊಂಡವರು.

ಮುದ್ದನಹಳ್ಳಿಯ ಮಂಜುನಾಥ್‌ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2 ವರ್ಷಗಳಿಂದ ಕರ್ತವ್ಯಕ್ಕೆ ಹೋಗದೆ ದೀರ್ಘ ಗೈರು ಹಾಜರಾಗಿ ಅಮಾನತು ಮಾಡಲಾಗಿತ್ತು.

‘‘ಎರಡು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಹೊಗೆಸೊಪ್ಪು ಬೆಳೆಯುತ್ತಿ ದ್ದರು. ಆದರೆ ಇದರಲ್ಲಿ ನಷ್ಟ ಅನುಭವಿಸಿದ್ದು, ಪಂಚವಳ್ಳಿ ಬ್ಯಾಂಕ್‌ನಲ್ಲಿ ಹಾಗೂ ಕೈಸಾಲ ಮಾಡಿದ್ದರು. ಸಾಲ ತೀರಿಸಲಾಗದ ಕಾರಣಕ್ಕೆ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,’’ ಎಂದು ಪತ್ನಿ ಬಸಮ್ಮ ಆಲಿಯಾಸ್‌ ವಸಂತ ಪಿರಿಯಾಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ಹಬಟೂರಿನ ಮಲ್ಲೇಗೌಡನ ಕೊಪ್ಪಲಿನ ಎಚ್‌.ಎಸ್‌. ಚಂದ್ರೇಗೌಡ (68) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘‘8 ಎಕರೆ ಜಮೀನು ಇದ್ದು ಪಟ್ಟಣದ ಅಬ್ಬೂರು ಬ್ಯಾಂಕ್‌ನಲ್ಲಿ ಬೆಳೆ ಸಾಲ ಮಾಡಿದ್ದರು. ಜಮೀನಿನಲ್ಲಿ ಹೊಗೆಸೊಪ್ಪು, ಶುಂಠಿ ಬೆಳೆಯುತ್ತಿದ್ದರು. ಬೆಳೆಯಿಂದ ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾರೆ,’’ ಎಂದು ಪತ್ನಿ ಪ್ರೇಮಮ್ಮ ಪಿರಿಯಾಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ಶಾಸಕರ ಭೇಟಿ: ಆತ್ಮಹತ್ಯೆಗೆ ಶರಣಾದ ಇಬ್ಬರು ರೈತರನ್ನು ಪಿರಿಯಾಪಟ್ಣಣ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಶಾಸಕ ಕೆ.ವೆಂಕಟೇಶ್‌ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಎಎಸ್‌ಐಗಳಾದ ಶೇಖರ್‌, ಚಿಕ್ಕನಾಯಕ, ಪುಟ್ಟರಾಜ್‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ