ಆ್ಯಪ್ನಗರ

ಕೊಲೆ ಆರೋಪಿಗಳ ಬಂಧನ

ನಗರದ ಗುತ್ತಲು ಕಾಲನಿಯ ಮಾರುತಿ ನಗರದ ಕಾಳಿಕಾಂಭ ದೇವಾಲಯದಲ್ಲಿ ಏ.5ರಂದು ರಾತ್ರಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 9 Apr 2019, 5:00 am
ಮಂಡ್ಯ: ನಗರದ ಗುತ್ತಲು ಕಾಲನಿಯ ಮಾರುತಿ ನಗರದ ಕಾಳಿಕಾಂಭ ದೇವಾಲಯದಲ್ಲಿ ಏ.5ರಂದು ರಾತ್ರಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web detention of murder accused
ಕೊಲೆ ಆರೋಪಿಗಳ ಬಂಧನ


ನಂದನ್‌ ಎಸ್‌.ರಾಜ್‌ ಅಲಿಯಾಸ್‌ ನಂದಾ(24) ಎಂಬ ಯುವಕನನ್ನು ದೇವಾಲಯದಲ್ಲಿ ಆರೋಪಿಗಳು ಹತ್ಯೆಗೈದಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಸವನಗುಡಿಯ ಚಂದನ್‌ ಅಲಿಯಾಸ್‌ ಚಂದನ್‌ ಕುರ್ಮಾ (27), ಹರ್ಷಿತ್‌ಗೌಡ ಅಲಿಯಾಸ್‌ ಹರ್ಷ (21), ಕಿರಣ್‌ ಅಲಿಯಾಸ್‌ ಪಿಳ್ಳೆ(20), ಮನೋಜ್‌ ಅಲಿಯಾಸ್‌ ಜಂಗ್ಲಿ (19), ಮಾರುತಿ ನಗರದ ಅಜಯ್‌ ಕುರ್ಮಾ ಅಲಿಯಾಸ್‌ ಅಜಯ್‌ (22) ಬಂಧಿತರು.

ನಂದನ್‌ ಎಸ್‌. ರಾಜ್‌ ಹುಟ್ಟು ಹಬ್ಬದ ಫ್ಲೆಕ್ಸ್‌ ವಿಚಾರದಲ್ಲಿ ಗಲಾಟೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ನಂದಾನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸೋಮವಾರ ಬೆಳಗ್ಗೆ ಮದ್ದೂರಿನ ಶಿವಪುರದಲ್ಲಿ ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಎಎಸ್ಪಿ ಬಲರಾಮೇಗೌಡ ನೇತೃತ್ವದಲ್ಲಿ ಡಿವೈಎಸ್ಪಿ ಎಸ್‌.ಪಿ.ಗಂಗಾಧರಸ್ವಾಮಿ, ಸಿಪಿಐ ಮನೋಜ್‌ ಕುರ್ಮಾ, ಪೂರ್ವ ಪೊಲೀಸ್‌ ಠಾಣೆಯ ಕೆ.ಎನ್‌.ಚಂದ್ರಶೇಖರ್‌, ಸಿಬ್ಬಂದಿ ಮಹೇಶ್‌, ಲೋಕೇಶ್‌, ಗಿರೀಶ್‌, ಆನಂದ್‌, ಚಿಕ್ಕಯ್ಯ, ನಿಂಗರಾಜು, ಮಹೇಶ್‌, ಉರ್ಮ ಭಾಗವಹಿಸಿದ್ದರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಡಿವೈಎಸ್ಪಿ ಗಂಗಾಧರಸ್ವಾಮಿ, ಸಿಪಿಐ ಮನೋಜ್‌ ಕುರ್ಮಾ, ಪಿಎಸ್‌ಐ ಕೆ.ಎನ್‌.ಚಂದ್ರಶೇಖರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ